'ಅವತಾರ್‌- 2' ಓಟಿಟಿ ರಿಲೀಸ್ ಡೇಟ್ ಘೋಷಿಸಿದ ಚಿತ್ರತಂಡ: ಎಲ್ಲಿ ಯಾವಾಗ ಸಿನಿಮಾ ನೋಡಬಹುದು?

ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್ - ದಿ ವೇ ಆಫ್ ವಾಟರ್' ಸಿನಿಮಾ ಕಳೆದ ವರ್ಷ ಕೊನೆಗೂ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಮತ್ತೊಮ್ಮೆ ಜೇಮ್ಸ್ ಕ್ಯಾಮರೂನ್ ತಮ್ಮ ಪ್ರತಿಭೆ ಏನು ಎನ್ನುವುದನ್ನು ಚಿತ್ರಪ್ರಪಂಚಕ್ಕೆ ಪರಿಚಯಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ 'ಅವತಾರ್- 2' ಸಿನಿಮಾ ಓಟಿಟಿಗೆ ಬರೋ ಸಮಯ ಹತ್ತಿರ ಬರ್ತಿದೆ.

ಸಮುದ್ರದ ಒಳಗೆ ಒಂದು ಅದ್ಭುತ ಪ್ರಪಂಚವನ್ನು ತೋರಿಸಿ ಜೇಮ್ಸ್ ಕ್ಯಾಮರೂನ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. 10 ವರ್ಷಗಳಿಂದ 'ಅವತಾರ್‌' ಸೀಕ್ವೆಲ್‌ಗಾಗಿ ಕಾಯುತ್ತಿದ್ದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ಸೀಕ್ವೆಲ್ ಕಟ್ಟಿಕೊಡಲಾಗಿತ್ತು. ಡಿಸೆಂಬರ್ 16ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಭಾರತದಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಭಾರತದಲ್ಲೇ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

Avatar The Way Of Water OTT Release Date: James Camerons Avatar- 2 OTT premiere on March 28th

ಸೀಕ್ವೆಲ್ ಕಥೆ ಪ್ಯಾಂಡೊರಾ ಮೂಲಕವೇ ಶುರುವಾಗುತ್ತೆ. ಪ್ರೀಕ್ವೆಲ್‌ನಲ್ಲಿ ಒಂದಾಗಿದ್ದ ಜೇಕ್ ಸುಲ್ಲಿ ಹಾಗೂ ನೇಟಿರಿ ತಮ್ಮ ಜನರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಜೋಡಿಗೆ ಮಕ್ಕಳು ಹುಟ್ಟುತ್ತಾರೆ. ಎಲ್ಲಾ ಚೆನ್ನಾಗಿಯೇ ಸಾಗುತ್ತಿರುವಾಗ ಮತ್ತೆ ಪ್ಯಾಂಡೊರಾಗೆ ಮಾನವರ ಪ್ರವೇಶವಾಗುತ್ತೆ. ತಮ್ಮ ಯೋಜನೆಗೆ ಅಡ್ಡಿಯಾಗಿರುವ ಜೇಕ್ ಸುಲ್ಲಿಯನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ನಾವಿಗಳ ರೂಪದಲ್ಲಿ ಬರುವ ಮಾನವರ ಯೋಜನೆ ವಿಫಲವಾಗುತ್ತೆ. ಅಲ್ಲಿಂದ ಮುಂದೆ ಕಥೆ ಹೇಗೆಲ್ಲಾ ಸುತ್ತುತ್ತದೆ ಎನ್ನುವುದನ್ನು ತೆರೆಮೇಲೆ ನೋಡುವ ಅನುಭವವೇ ಅದ್ಭುತ.

ತ್ರೀಡಿ ಕನ್ನಡದಲ್ಲಿ 'ಅವತಾರ್ - ದಿ ವೇ ಆಫ್ ವಾಟರ್' ಸಿನಿಮಾ ಅದ್ಭುತ ಅನುಭವ ನೀಡಿತ್ತು. ನೋಡುಗರನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗಿತ್ತು. 3 ಗಂಟೆಗಳ ಸುದೀರ್ಘ ಸಿನಿಮಾ ಎನಿಸಿದರೂ ಎಲ್ಲೂ ಬೋರ್ ಹೊಡೆಸುವುದಿಲ್ಲ. ಐದಾರು ವರ್ಷ ಕಾಯಿಸಿದ್ದಕ್ಕೂ ಸಿನಿಮಾ ಪ್ರೇಕ್ಷಕರಿಗೆ ಮೋಸ ಮಾಡಲಿಲ್ಲ. ನಾವಿಗಳಿಗೆ ಕಾಡು, ನೀರು ಹಾಗೂ ಅಲ್ಲಿನ ಜೀವಿಗಳ ಜತೆ ಇರುವ ಬಂಧಕ್ಕೆ ಎಮೋಷನಲ್ ಟಚ್ ಕೊಟ್ಟು ವೀಕ್ಷಕರು ಕನೆಕ್ಟ್ ಆಗುವಂತೆ ಮಾಡಲಾಗಿತ್ತು.

Avatar The Way Of Water OTT Release Date: James Camerons Avatar- 2 OTT premiere on March 28th

'ಅವತಾರ್ - ದಿ ವೇ ಆಫ್ ವಾಟರ್' ಸಿನಿಮಾ ಮಾರ್ಚ್ 28ಕ್ಕೆ ಓಟಿಟಿಗೆ ಬರೋದಾಗಿ ಚಿತ್ರತಂಡ ಘೋಷಿಸಿಸಿದೆ. "ಇಲ್ಲಿವರೆಗೂ ನೋಡದ ವಿಶೇಷಗಳನ್ನು 3 ಗಂಟೆಗಳ ಕಾಲ ನೋಡಲು ಸಿದ್ಧರಾಗಿ" ಎಂದು ಟ್ವೀಟ್ ಮಾಡಿದ್ದಾರೆ. ಅಮೇಜಾನ್ ಪ್ರೈಮ್, ಆಪಲ್ ಟಿವಿ, ವುಡು ಸೇರಿದಂತೆ ಹಲವು ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಒಟ್ನಲ್ಲಿ ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿರುವವರು ನೋಡದೇ ಇರುವವರೂ ಮನೆಯಲ್ಲೇ ಕೂತು ಮತ್ತೊಮ್ಮೆ 'ಅವತಾರ್' ಸಾಗರದಾಳದ ಪ್ರಪಂಚಕ್ಕೆ ಹೋಗಿ ಬರಬಹುದು.

ಥಿಯೇಟರ್‌ನಲ್ಲಿ ನೋಡದೇ ಇರುವ ಸನ್ನಿವೇಶಗಳನ್ನು ಕೂಡ ಓಟಿಟಿಯಲ್ಲಿ ಸೇರಿಸಲಾಗುತ್ತಿದೆಯಂತೆ. ಇನ್ನು ಮೊದಲಿಗೆ ಓವರ್‌ಸೀಸ್ ಪ್ರೇಕ್ಷಕರಿಗೆ ಸಿನಿಮಾ ನೋಡಲು ಸಿಗಲಿದೆ. ಮೊದಲು ಬಾಡಿಗೆಗೆ ಸಿನಿಮಾವನ್ನು ಕೊಡಲಾಗುತ್ತಿದ್ದು ನಂತರ ಚಂದಾದಾರರೆಲ್ಲಾ ನೋಡುವ ಅವಕಾಶ ಸಿಗಲಿದೆ.

More from Filmibeat

English summary
Avatar The Way Of Water OTT Release Date: James Cameron's Avatar- 2 OTT premiere on March 28th. Movie will be streaming Amazon Prime, Apple TV, Vudu ext. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X