ಬಿಡುಗಡೆಯಾದ ಕೇವಲ 14 ದಿನಕ್ಕೆ ಓಟಿಟಿಗೆ ಬಂತು ಖ್ಯಾತ ನಟಿಯ ಥ್ರಿಲ್ಲರ್ ಸಿನಿಮಾ ; ಯಾವುದು? ಎಲ್ಲಿ ನೋಡಬಹುದು?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ.

ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

Twisted Rom-Com Meets Dark Thriller Avika Gor s Ugly Story Premieres on Aha This June 5

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ಅಗ್ಲಿ ಸ್ಟೋರಿ'' ಸಿನಿಮಾ ಬಂದಿದೆ. ಅದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೇವಲ 14 ದಿನಗಳಲ್ಲಿ ಓಟಿಟಿಗೆ ಬಂದಿರುವುದು ವಿಶೇಷ.

ಹೌದು, ''ಅಗ್ಲಿ ಸ್ಟೋರಿ''..ಹಿಂದಿಯಲ್ಲಿ ಬಾಲಿಕಾ ವಧು ಎಂದೇ ಜನಪ್ರಿಯವಾದ ಖ್ಯಾತ ನಟಿ ಅವಿಕಾ ಗೋರ್ ಅಭಿನಯದ ತೆಲುಗು ಚಿತ್ರ. ಶ್ರೀನಂದು ಈ ಚಿತ್ರದ ನಾಯಕ. ಪ್ರಣವ್ ಸ್ವರೂಪ್ ನಿರ್ದೇಶನದ ಈ ಸೈಕಲಾಜಿಕಲ್ ಥ್ರಿಲ್ಲರ್ ಕಳೆದ ಮೇ 22ರಂದು ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ 85 ಲಕ್ಷವನ್ನು ಚಿತ್ರಮಂದಿರಗಳಲ್ಲಿ ಈ ಚಿತ್ರ ಗಳಿಸಿತ್ತು. ಈಗ ಬಿಡುಗಡೆಯಾಗಿ 14 ದಿನಗಳ ನಂತರ ಓಟಿಟಿಗೆ ಬರುತ್ತಿದೆ ''ಅಗ್ಲಿ ಸ್ಟೋರಿ''.


ಕಥಾ ಹಂದರ

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ನೇಹಾಳನ್ನು (ಅವಿಕಾ ಗೋರ್) ಅವಳ ಸೋದರಮಾವ (ಶಿವಾಜಿ ರಾಜಾ) ತನ್ನ ಮನೆಗೆ ಕರೆದುಕೊಂಡು ಬಂದು ಸಾಕಿರುತ್ತಾನೆ. ಮಾವನ ಮಗನಾದ ಕಾರ್ತಿಕ್ (ನಂದು) ತನ್ನ ಮದ್ವೆ ಆಗಬೇಕಿರೋ ಸೋದರ ಸಂಬಂಧಿ ನೇಹಾ ಮೇಲೆ ಪ್ರಾಣಕ್ಕಿಂತ ಹೆಚ್ಚಾಗಿ ಹುಚ್ಚು ಪ್ರೀತಿ ಬೆಳೆಸಿಕೊಂಡಿರುತ್ತಾನೆ.

ಆದರೆ, ನೇಹಾಗೆ ಚಿಕ್ಕ ವಯಸ್ಸಿನಿಂದಲೂ ಗೌತಮ್ (ರವಿತೇಜ ಮಹಾದಾಸ್ಯಂ) ಅಂದ್ರೆ ತುಂಬಾ ಇಷ್ಟ. ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ. ಈ ವಿಷಯ ತಿಳಿದ ತಕ್ಷಣ ಕಾರ್ತಿಕ್ ಒಬ್ಬ ಸೈಕೋ ತರ ಆಡೋಕೆ ಶುರು ಮಾಡ್ತಾನೆ.

twisted-rom-com-meets-dark-thriller-avika-gor-s-ugly-story-premieres-on-aha-this-june-5

ನೇಹಾಳ ಪ್ರೀತಿಯ ವಿಷಯ ತಿಳಿದ ಮಾವ ಕೊನೆಗೆ ಏನು ಮಾಡಿದ? ಮಾವನ ಮಗನನ್ನು ಇಷ್ಟಪಡದ ನೇಹಾ, ಕೊನೆಗೆ ಅವನನ್ನೇ ಯಾಕೆ ಮದುವೆಯಾಗಬೇಕಾಗಿ ಬಂತು? ನೇಹಾ ಪ್ರೀತಿಸಿದ ಗೌತಮ್ ಏನಾದ? ಕೊನೆಗೆ ಕಥೆ ಏನಾಯ್ತು? ಅನ್ನೋದನ್ನ ತಿಳ್ಕೊಬೇಕು ಅಂದ್ರೆ ನೀವು ಈ ಚಿತ್ರವನ್ನು ಈಗ ಓಟಿಟಿಯಲ್ಲಿ ನೋಡಬಹುದು.

ತಾರಾಬಳಗ

ಅವಿಕಾ ಗೋರ್, ಶ್ರೀನಂದು, ರವಿತೇಜ ಮಹಾದಾಸ್ಯಂ,ಶಿವಾಜಿ ರಾಜಾ, ಪ್ರಜ್ಞಾ ನಯನ್, ಮುಂತಾದವರು.

ತಾಂತ್ರಿಕ ವರ್ಗ

ನಿರ್ದೇಶನ - ಪ್ರಣವ್ ಸ್ವರೂಪ್

ನಿರ್ಮಾಣ - ರಿಯಾ ಜಿಯೋ ಪ್ರೊಡಕ್ಷನ್

ಸಂಗೀತ ನಿರ್ದೇಶಕ - ಶ್ರೀಚರಣ್ ಪಕಾಲ

ಛಾಯಾಗ್ರಹಣ - ಅಶೋಕ್ ಕುಮಾರ್ ಎಂ.

ಎಲ್ಲಿ ಮತ್ತು ಎಂದಿನಿಂದ ನೋಡಬಹುದು ?

ಇಂದಿನಿಂದ (ಜೂನ್ 5) ''ಅಗ್ಲಿ ಸ್ಟೋರಿ '' ತೆಲುಗಿನ ಜನಪ್ರಿಯ ಓಟಿಟಿ ವೇದಿಕೆಗಳಲ್ಲಿ ಒಂದಾದ ''ಆಹಾ''ದಲ್ಲಿ ಪ್ರಸಾರವಾಗುತ್ತಿದೆ. ಮೂಲ ತೆಲುಗು ಭಾಷೆಯ ಈ ಚಿತ್ರವನ್ನು ತಮಿಳಿನಲ್ಲಿ ಕೂಡ ಡಬ್ ಮಾಡಲಾಗಿದೆ. ಆಸಕ್ತ ಸಿನಿಮಾ ಪ್ರೇಮಿಗಳು ಮನೆಯಲ್ಲಿಯೇ ಈ ಚಿತ್ರವನ್ನು ನೋಡಬಹುದು.

English summary
Experience Avika Gor and Shree Nandu's lethal chemistry in Ugly Story. The highly anticipated Telugu romantic comedy-thriller premieres June 5 on Aha!
Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X