ಸದ್ದಿಲ್ಲದೇ ಓಟಿಟಿಗೆ ಬಂದೇ ಬಿಡ್ತು ಕನ್ನಡಿಗ ಎ. ಹರ್ಷ ನಿರ್ದೇಶನದ ಹಿಂದಿ ಚಿತ್ರ ಬಾಘಿ 4 ; ಆದರೆ ..

ಕನ್ನಡದ ಹಲವು ನಾಯಕಿಯರಿಗೆ ಪರಭಾಷೆಯಲ್ಲಿ ಈಗ ಡಿಮ್ಯಾಂಡ್ ಇದೆ. ರಶ್ಮಿಕಾ ಮತ್ತು ಶ್ರೀಲೀಲಾ ಅವರನ್ನು ಬಾಲಿವುಡ್‌ ಬಿಗಿದಪ್ಪಿಕೊಂಡಿದ್ದರೆ ಆಶಿಕಾ ರಂಗನಾಥ್ .. ಮೆಘಾ ಶೆಟ್ಟಿ .. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ರುಕ್ಮಿಣಿ ವಸಂತ್ ಅವರ ಹವಾ ಸದ್ಯ ದೇಶದೆಲ್ಲೆಡೆ ಇದೆ. ಮುಂದೆ ಗಾಳಿ ಯಾವ ಕಡೆ ಜೋರು ಬೀಸುತ್ತೆ...

ಆ ಕಡೆ ರುಕ್ಮಿಣಿ ಹೋಗಲಿದ್ದಾರೆ. ರಚಿತಾ ರಾಮ್ ಕೂಡ ಒಂದು ಕಾಲು ಕಾಲಿವುಡ್‌ನಲ್ಲಿ ಇಟ್ಟಿದ್ದಾರೆ. ಇನ್ನೂ ಕೇವಲ ನಾಯಕಿಯರು ಮಾತ್ರ ಅಲ್ಲ. ಕನ್ನಡದ ಹಲವು ನಿರ್ದೇಶಕರು ಕೂಡ ಪರಭಾಷೆಗೆ ದಂಡೆತ್ತಿ ಹೋಗಿದ್ದಾರೆ. ಪ್ರಶಾಂತ್ ನೀಲ್ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೆ ನಂದಕಿಶೋರ್ ಮಲಯಾಳಂನ ಸೂಪರ್ ಸ್ಟಾರ್‌ ಮೋಹನ್ ಲಾಲ್ ಅವರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ.

Baaghi 4 NOW Streaming Where to Watch Tiger Shroff s Action Film Online But There s a Catch

ಇನ್ನೂ ''ಗೆಳೆಯ''.. ''ಬಿರುಗಾಳಿ''.. ''ಚಿಂಗಾರಿ''.. ''ಭಜರಂಗಿ''.. ''ವಜ್ರಕಾಯ''.. ''ಜೈ ಮಾರುತಿ 800''.. ''ಅಂಜನಿಪುತ್ರ''.. ''ಸೀತಾರಾಮ ಕಲ್ಯಾಣ''.. ''ಭಜರಂಗಿ 2''.. ''ವೇದಾ'' ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದ ಎ.ಹರ್ಷ ಪಕ್ಕದ ಆಂಧ್ರದಲ್ಲಿ ಗೋಪಿಚಂದ್ ಅವರಿಗೆ ''ಭೀಮಾ'' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇಷ್ಟೇ ಅಲ್ಲ ಈ ವರ್ಷ ಬಾಲಿವುಡ್‌ಗೆ ತೆರಳಿದ ಹರ್ಷ ತಮ್ಮ ಮೊದಲ ಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಹೆಸರು ''ಬಾಘಿ 4''. ಟೈಗರ್ ಶ್ರಾಫ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರವನ್ನು ಸಾಜಿದ್ ನಾಡಿಯಾವಾಲಾ ನಿರ್ಮಾಣ ಮಾಡಿದ್ದರು. ಸಂಜಯ್ ದತ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಹರ್ನಾಜ್ ಸಂಧು ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ ಸೋನಮ್ ಬಾಜ್ವಾ ಕೂಡ ಚಿತ್ರದಲ್ಲಿ ಪಾತ್ರವೊಂದಕ್ಕೆ ಜೀವ ತುಂಬಿದ್ದರು.

ಇನ್ನು.. ''ಬಾಘಿ'' ಪ್ರಾಂಚೈಸಿಯ ನಾಲ್ಕನೇ ಭಾಗ ಇದು. ಈ ಹಿನ್ನೆಲೆ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳು ಕೂಡ ಇದ್ದವು. ಈ ನಿರೀಕ್ಷೆಗೆ ಪೂರಕವಾಗಿ ಮೊದಲ ಎರಡು ದಿನ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಕೂಡ ಮಾಡಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಮೊದಲ ಎರಡು ದಿನದಲ್ಲಿಯೇ ₹ 21.25 ಕೋಟಿ ಹಣವನ್ನು ದೋಚಿತ್ತು.

ಇನ್ನೂ ಯಾರಿಗೇ ಇರಲಿ. ಈ ತರಹದ ಒಂದು ಆರಂಭ ಖುಷಿಯನ್ನು ನೀಡಿಯೇ ನೀಡುತ್ತೆ. ಅದರಲ್ಲಿಯೂ ಹಿಂದಿಯಲ್ಲಿ ತಾವು ಮಾಡಿದ ಮೊದಲ ಪ್ರಯತ್ನಕ್ಕೆ ಇಂಥಹದ್ದೊಂದು ಆರಂಭ ಮತ್ತು ಪ್ರತಿಕ್ರಿಯೆ ಸಿಕ್ಕಾಗ ದಕ್ಷಿಣದ ಹಲವು ನಿರ್ದೇಶಕರ ಸಂಭ್ರಮ ವರ್ಣಿಸಲು ಅಸಾಧ್ಯ. ಇದಕ್ಕೆ ಉದಾಹರಣೆಯಂತೆ ಇರುವ ಹರ್ಷ ಚಿತ್ರದ ಬಿಡುಗಡೆಯ ನಂತರ ತಮ್ಮ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಓಪನಿಂಗ್‌ದಿಂದ ಸಂಭ್ರಮದ ಅಲೆಯಲ್ಲಿದ್ದರು. ಬಿಡುವು ಮಾಡಿಕೊಂಡು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಎ.ಹರ್ಷ ತಮ್ಮ ಖುಷಿಯನ್ನು ಕೂಡ ಹಂಚಿಕೊಂಡಿದ್ದರು.

Baaghi 4 NOW Streaming Where to Watch Tiger Shroff s Action Film Online But There s a Catch

ಆದರೆ ಆ ನಂತರ ಬಾಕ್ಸಾಫೀಸ್‌ನಲ್ಲಿ ಗಳಿಕೆಯಲ್ಲಿ ಕುಸಿತ ಕಂಡು ಬಂದಿತ್ತು. ಭಾರತದಲ್ಲಿ ನೂರು ಕೋಟಿಯ ಗಡಿಯನ್ನು ದಾಟುವಲ್ಲಿ ವಿಫಲವಾಯಿತು. ಇಂಥಾ ''ಭಾಘಿ 4'' ಚಿತ್ರ ಸದ್ಯ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ''ಅಮೆಜಾನ್ ಪ್ರೈಂ''ನಲ್ಲಿ ನಿನ್ನೆಯಿಂದ ನೋಡಲು ಲಭ್ಯ ಇದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ''ಅಮೆಜಾನ್‌''ನಲ್ಲಿ ಈ ಚಿತ್ರವನ್ನು ನೋಡಲು ಸಾಧ್ಯ ಇಲ್ಲ. ಚಂದಾದಾರರಾಗಿದ್ದರೂ ಕೂಡ ನೀವು ಈಗಲೇ ನೋಡಬೇಕು ಅಂದರೆ 349 ರೂಪಾಯಿಯನ್ನು ಬಾಡಿಗೆಯನ್ನು ನೀಡಬೇಕು. ಇಲ್ಲದಿದ್ದರೆ ಬಾಡಿಗೆಯ ನಿಯಮ ಮರೆಯಾಗಿ ಎಲ್ಲಾ ಚಂದಾದಾರರಿಗೆ ಉಚಿತವಾಗಿ ಲಭ್ಯವಾಗುವರೆಗೆ ಕಾಯಬೇಕು. ಆಯ್ಕೆ ನಿಮ್ಮದು.

More from Filmibeat

English summary
Want to stream Baaghi 4? Tiger Shroff's action thriller is now available on OTT, but there’s a rental catch! Get the platform details and the official date you can watch it for free.
Read more about: a harsha bollywood tiger shroff
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X