ಒಂದೂವರೆ ತಿಂಗಳ ನಂತರ ಓಟಿಟಿಗೆ ಬಂತು ಮಹಾನಟಿ ಕೀರ್ತಿ ಸುರೇಶ್ ಅಭಿನಯದ ಚಿತ್ರ..!

ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಸ್ಟಾರ್‌ಗಳಲ್ಲಿ ವರುಣ್ ಧವನ್ ಕೂಡ ಒಬ್ಬರು. ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ತರಹದ ಕಥೆಗಳಲ್ಲಿ ಈಗಾಗಲೇ ಮಿಂಚಿ ಬಾಲಿವುಡ್‌ನಲ್ಲಿ ಮನೆ ಮಾತಾಗಿರುವ ವರುಣ್ ಧವನ್ ಕಳೆದ ವರ್ಷ ಬೇಬಿ ಜಾನ್ ಎಂಬ ಚಿತ್ರ ಮಾಡಿದ್ದರು. ಚಿತ್ರ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದಲ್ಲಿ ಇದ್ದರು.

ದರೆ, ದುರಾದೃಷ್ಟ.. ಬೇಬಿ ಜಾನ್ ತೆರೆಗೆ ಬಂದ ಮೊದಲ ದಿನವೇ ಮಕಾಡೆ ಮಲಗಿತು. ತೆವಳುತ್ತಾ ಚಿತ್ರಮಂದಿರದಲ್ಲಿ ಒಂದೆರಡು ವಾರ ಪ್ರದರ್ಶನವನ್ನು ಕಂಡಿತ್ತು. ಚಿತ್ರಮಂದಿರದಿಂದ ಎತ್ತಂಗಡಿ ಆಯಿತು. ಇಂತಹ ಬೇಬಿ ಜಾನ್ ಕಳೆದ ಕೆಲ ದಿನಗಳ ಹಿಂದೆ ಅಮೆಜಾನ್ ಫ್ರೈಂಗೆ ಬಂದಿತ್ತು. ಆದರೆ ಆಗ ಈ ಚಿತ್ರ ನೋಡಲು 249 ರೂಪಾಯಿಗಳನ್ನು ನೀಡಬೇಕಿತ್ತು.

Baby John OTT Release Update When to Watch Varun Dhawan and Keerthy Suresh s Movie on Prime Video

ಚಿತ್ರಮಂದಿರದಲ್ಲಿಯೇ ಈ ಚಿತ್ರವನ್ನು ನೋಡದ ಪ್ರೇಕ್ಷಕರು ಓಟಿಟಿಯಲ್ಲಿ ಹಣ ನೀಡಿ ನೋಡಲು ಹೇಗೆ ಸಾಧ್ಯ ? ಆದರೂ ಅಮೆಜಾನ್ ಫ್ರೈಂ ಚಿತ್ರಕ್ಕೆ ದರ ನಿಗಧಿ ಮಾಡಿತ್ತು. ಸಹಜವಾಗಿ ಇಲ್ಲಿಯೂ ಕೂಡ ಪ್ರೇಕ್ಷಕರ ಕೊರತೆ ಕಂಡು ಬಂದ ಹಿನ್ನೆಲೆ ಈಗ ಈ ಚಿತ್ರವನ್ನು ಉಚಿತವಾಗಿ ಪ್ರಸಾರ ಮಾಡಲು ಮುಂದಾಗಿದೆ. ಈ ಫೆಬ್ರವರಿ 20ರಿಂದ ಹಣವನ್ನು ನೀಡದೇ ಬೇಬಿ ಜಾನ್ ಕಣ್ತುಂಬಿಕೊಳ್ಳುವ ಅವಕಾಶವನ್ನು ಚಿತ್ರಪ್ರೇಮಿಗಳಿಗೆ ಅಮೆಜಾನ್ ಫ್ರೈಂ ನೀಡಿದೆ.

ಅಂದ್ಹಾಗೇ ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ರಿಮೇಕ್ ಸಂಪ್ರದಾಯಕ್ಕೆ ಎಳ್ಳು ನೀರು ಬಿಡಲಾಗಿದೆ. ಆದರೂ ಆಟ್ಲೀ ಮತ್ತು ವರುಣ್ ಧವನ್ ಭಂಡ ಧೈರ್ಯವನ್ನು ಮಾಡಿದ್ದರು. ಆಟ್ಲೀ ತಮ್ಮದೇ ಥೇರಿ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿದರು. ಥೇರಿಯನ್ನು ಭಾಷೆಯ ಭೇದ ಭಾವ ಇಲ್ಲದೇ 2016ರಲ್ಲಿಯೇ ಅನೇಕರು ನೋಡಿದ್ದರು. ಬೇಬಿ ಜಾನ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಲು ಇದೇ ಪ್ರಮುಖ ಕಾರಣ. ಬೇಬಿ ಜಾನ್‌ನಲ್ಲಿ ಅಭಿನಯಿಸಿದ್ದ ಹಿರಿಯ ನಟ ರಾಜ್‌ಪಾಲ್ ಯಾದವ್ ಖುದ್ದು ಈ ಮಾತನ್ನು ಸಂದರ್ಶನದಲ್ಲಿ ಹೇಳಿದ್ದರು ಕೂಡ. ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು ಕೂಡ ಈ ಚಿತ್ರವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇನ್ನು, ಬೇಬಿ ಜಾನ್ ಮೂಲಕ ಕೀರ್ತಿ ಸುರೇಶ್ ಮೊದಲ ಬಾರಿ ಬಾಲಿವುಡ್‌ಗೆ ಬಲಗಾಲಿಟ್ಟು ಪ್ರವೇಶ ಮಾಡಿದ್ದರು. ಆದರೆ ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಕೀರ್ತಿ ಸುರೇಶ್‌ಗೆ ಹಿಂದಿ ಚಿತ್ರರಂಗದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಗೆಲುವು ಸಿಗಲಿಲ್ಲ.

ಇನ್ನುಳಿದಂತೆ ಬೇಬಿ ಜಾನ್ ಚಿತ್ರದಲ್ಲಿ ಜಾಕಿ ಶ್ರಾಫ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಪಾತ್ರಕ್ಕೆ ವ್ಯಾಪಕವಾದ ಮೆಚ್ಚುಗೆ ಚಿತ್ರ ಬಿಡುಗಡೆಯಾದಾಗ ಸಿಕ್ಕಿತ್ತು. ಇನ್ನು ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಸೋತರೂ ಕೂಡ ವಮಿಕಾ ಗಬ್ಬಿ ಬದುಕನ್ನು ಬದಲಿಸಿದ ಹೆಗ್ಗಳಿಕೆ ಈ ಚಿತ್ರದ್ದು. ಕಲೀಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಆಟ್ಲೀ ಜೊತೆ ಸೇರಿ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದರು. ಒಟ್ನಲ್ಲಿ ಸದ್ಯ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಫಲವಾದ ಬೇಬಿ ಜಾನ್ ಈ ಫೆಬ್ರವರಿ 20ರಂದು ಅಮೆಜಾನ್ ಫ್ರೈಂನಲ್ಲಿ ಪ್ರಸಾರವಾಗಲಿದೆ. ಇಲ್ಲಾದರೂ ಈ ಚಿತ್ರವನ್ನು ಪ್ರೇಕ್ಷಕರು ನೋಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X