Baby OTT: ತೆಲುಗು ಯೂತ್ ಬ್ಲಾಕ್‌ಬಸ್ಟರ್ 'ಬೇಬಿ' ಓಟಿಟಿ ಬಿಡುಗಡೆ ದಿನಾಂಕ ಪ್ರಕಟ
ಜುಲೈ 14ರಂದು ಬಿಡುಗಡೆಯಾಗಿದ್ದ ಯುವ ನಟ - ನಟಿಯರ ತೆಲುಗು ಚಿತ್ರ ಬೇಬಿ ಟಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ವರ್ಷ ಟಾಲಿವುಡ್ ಅಂಗಳದಲ್ಲಿ ತೆರೆಗೆ ಬಂದ ಸ್ಟಾರ್ ನಟ ಹಾಗೂ ಖ್ಯಾತ ನಟಿಯರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ದೊಡ್ಡ ಬಜೆಟ್‌ನ ಚಿತ್ರಗಳೇ ಗಳಿಕೆ ಮಾಡಲಾಗದೇ ಮಕಾಡೆ ಮಲಗಿದರೆ ಬೇಬಿ ಚಿತ್ರ ಮಾತ್ರ ಯಾವುದೇ ಸ್ಟಾರ್ ನಟ - ನಟಿಯೂ ಸಹ ತಾರಾಗಣದಲ್ಲಿ ಇಲ್ಲದೇ ಇದ್ದರೂ ಸಹ ಗೆದ್ದು ಬೀಗಿತ್ತು.
ಟಾರೆ ಬಾಕ್ಸ್ ಆಫೀಸ್‌ನಲ್ಲಿ 80 ಕೋಟಿ ಗಳಿಸಿ ದಾಖಲೆ ಬರೆದ ಬೇಬಿ ಯುವಕರ ಮನ ಗೆದ್ದಿತ್ತು. ಹೀಗೆ ಯೂತ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿರುವ ಬೇಬಿ ಈಗ ಓಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಹೌದು, ಬೇಬಿ ಚಿತ್ರ ಆಹಾ ತೆಲುಗು ಓಟಿಟಿಯಲ್ಲಿ ಆಗಸ್ಟ್ 25ರಂದು ಸ್ಟ್ರೀಮ್ ಆಗಲಿದೆ.

ಬೇಬಿ ಚಿತ್ರದ ಕಥೆ:
ಸುಮಾರು 8 ಕೋಟಿ ವೆಚ್ಚದಲ್ಲಿ ತಯಾರಾದ ಬೇಬಿ ಚಿತ್ರ ಎರಡೇ ದಿನಗಳಲ್ಲಿ ಲಾಭದ ಗುರಿಯನ್ನು ಮುಟ್ಟಿ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತ್ತು. ಸ್ಲಂನಲ್ಲಿ ಬೆಳೆದ ನಾಯಕಿ ಶಾಲಾ ದಿನಗಳಿಂದಲೂ ಅದೇ ಸ್ಲಂನಲ್ಲಿ ಇದ್ದ ನಾಯಕನನ್ನು ಪ್ರೀತಿಸಿ ಬಳಿಕ ಕಾಲೇಜು ಸೇರಿದ ಬಳಿಕ ಏನೆಲ್ಲಾ ಬದಲಾವಣೆಯಾಗ್ತಾಳೆ ಹಾಗೂ ಇದು ಆಕೆಯ ಜೀವನದಲ್ಲಿ ಏನೆಲ್ಲಾ ಅವಾಂತರ ಸೃಷ್ಟಿಸುತ್ತೆ ಎನ್ನುವುದೇ ಬೇಬಿ ಚಿತ್ರದ ಒನ್‌ಲೈನ್ ಕಥೆ.
ಈ ರೀತಿಯ ಕಥೆಯನ್ನು ಆಧರಿಸಿ ಈಗಾಗಲೇ ತುಂಬಾ ಸಿನಿಮಾಗಳು ಬಂದಿವೆಯಾದರೂ ಅವೆಲ್ಲವನ್ನೂ ಹಿಂದಿಕ್ಕಿ ಬೇಬಿ ಸ್ಪೆಷಲ್ ಎನಿಸುವುದಕ್ಕೆ ಕಾರಣ ಚಿತ್ರದಲ್ಲಿರುವ ಮಾಡರ್ನ್ ಯುಗದ ಸ್ಕ್ರೀನ್‌ಪ್ಲೇ. ಹೌದು, ಈಗಿನ ಐ ಫೋನ್ ಯುಗದಲ್ಲಿ ಹುಡುಗಿಯರ ಚಂಚಲ ಮನಸ್ಸು ಯಾರ ಮಾತಿನಿಂದ ಏನೆಲ್ಲಾ ಸ್ಪೂರ್ತಿಗೊಳ್ಳುತ್ತೆ, ಮೂರ್ಖತನವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಹಾಗೂ ಇದರಿಂದ ಏನೆಲ್ಲಾ ಕಷ್ಟಗಳನ್ನು ಅನುಭವಿಸ್ತಾರೆ ಎಂಬುದನ್ನು ನಿರ್ದೇಶಕ ಶ್ರೀ ರಾಜೇಶ್ ನೀಲಮ್ ತುಂಬಾ ಅರ್ಥಗರ್ಭಿತವಾಗಿ ಬರೆದು ನಿರ್ದೇಶಿಸಿದ್ದಾರೆ. ನಾಯಕನಾಗಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ನಾಯಕಿಯಾಗಿ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ.


Click it and Unblock the Notifications











