'ಆಶ್ರಮ್ 3' ಸೆಟ್‌ ಮೇಲೆ ಭಜರಂಗ ದಳ ದಾಳಿ, ನಿರ್ದೇಶನಕನಿಗೆ ಮಸಿ

ಪ್ರಕಾಶ್ ಝಾ ನಿರ್ದೇಶನದ 'ಆಶ್ರಮ್ 3' ವೆಬ್ ಸರಣಿ ಚಿತ್ರೀಕರಣದ ಸೆಟ್‌ ಮೇಲೆ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಸೆಟ್‌ ಅನ್ನು ಧ್ವಂಸಗೊಳಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ಹಳೆ ಜೈಲಿನ ಆವರಣದಲ್ಲಿ 'ಆಶ್ರಮ್ 3' ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿತ್ತು. ಭಾನುವಾರ ಮಧ್ಯಾಹ್ನದ ವೇಳೆಗೆ ಏಕಾ-ಏಕಿ ಸೆಟ್‌ ಮೇಲೆ ದಾಳಿ ನಡೆಸಿದ ಭಜರಂಗದಳ ಕಾರ್ಯಕರ್ತರು ಚಿತ್ರೀಕರಣದಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ಹಳೆ ಜೈಲಿನ ಆವರಣದಲ್ಲಿಮಾಡಿದ್ದಾರೆ. ಭಜರಂಗದಳ ಕಾರ್ಯಕರ್ತರು ಚಿತ್ರೀಕರಣದ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

'ಆಶ್ರಮ್' ವೆಬ್ ಸರಣಿಯಲ್ಲಿ ಹಿಂದು ಧರ್ಮಕ್ಕೆ ಅಪಮಾನ ಎಸಗುವಂಥ ಅಂಶಗಳಿವೆಯೆಂದು ಭಜರಂಗದಳ ಆರೋಪಿಸಿದೆ. ಸೆಟ್‌ ಮೇಲೆ ದಾಳಿ ಮಾಡಿದ ವೇಳೆ 'ಆಶ್ರಮ್ 3' ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿಯಲಾಗಿದೆ.

Bajrang Dal Members Attacks On Ashram 3 Web Series Set

ದಾಳಿ ಬಳಿಕ ಮಾತನಾಡಿರುವ ಭಜರಂಗದಳ ಮುಖಂಡನೋರ್ವ, ''ಆಶ್ರಮ್' ವೆಬ್ ಸರಣಿಯಲ್ಲಿ ಹಿಂದು ಸ್ವಾಮೀಜಿಯನ್ನು ಕಾಮುಕನಂತೆ ಚಿತ್ರಿಸಲಾಗಿದೆ. ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂಬಂತೆ ತೋರಿಸಲಾಗಿದೆ. ಚರ್ಚ್ ಹಾಗೂ ಮದರಸಾಗಳ ಬಗ್ಗೆ ಇದೇ ರೀತಿ ವೆಬ್ ಸರಣಿಗಳನ್ನು ಮಾಡುವ ಧೈರ್ಯ ಅವರಿಗಿದೆಯೇ? ವೆಬ್ ಸರಣಿಗೆ ಇಟ್ಟಿರುವ ಹೆಸರು ಸಹ ಸೂಕ್ತವಲ್ಲ. ವೆಬ್ ಸರಣಿಯ ಹೆಸರು ಬದಲಾವಣೆ ಮಾಡುವವರೆಗೆ ನಾವು ಚಿತ್ರೀಕರಣ ಮಾಡಲು ಬಿಡುವುದಿಲ್ಲ'' ಎಂದಿದ್ದಾರೆ.

ಸೆಟ್‌ಗೆ ದಾಳಿ ಮಾಡಿದ ವೇಳೆ ಸೆಟ್‌ನಲ್ಲಿದ್ದ ಹಲವು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಭಜರಂಗದಳ ಕಾರ್ಯಕರ್ತರು ಸೆಟ್‌ನಲ್ಲಿದ್ದ ವ್ಯಾನಿಟಿ ವ್ಯಾನ್ ಇನ್ನಿತರೆ ವಾಹನಗಳನ್ನು ಜಖಂಗೊಳಿಸಿದ್ದಾರೆ. ದಾಳಿ ವೇಳೆ ಜೈ ಶ್ರೀರಾಮ್ ಘೋಷಣೆಗಳನ್ನು ದಾಳಿಕೋರರು ಕೂಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ನಿರ್ದೇಶಕ ಪ್ರಕಾಶ್ ಝಾ ಅಧಿಕೃತವಾಗಿ ದೂರು ದಾಖಲಿಸಿಲ್ಲ. ಬದಲಾಗಿ ತಾವು ವೆಬ್ ಸರಣಿಯ ಹೆಸರು ಬದಲಿಸುವುದಾಗಿ ದಾಳಿಕೋರರಿಗೆ ಭರವಸೆ ನೀಡಿದ್ದಾರೆ.

'ಆಶ್ರಮ್' ವೆಬ್ ಸರಣಿಯು ಆಶ್ರಮದ ಸ್ವಾಮೀಜಿಯೊಬ್ಬನ ಕತೆಯಾಗಿದ್ದು, ಸ್ವಾಮೀಜಿ ಮಹಿಳಾ ಪೀಡಕ, ಕಾಮುಕ ಹಾಗೂ ಅಧಿಕಾರ ಲೋಭವುಳ್ಳವನಂತೆ ಚಿತ್ರಿಸಲಾಗಿದೆ. ಬಿಜೆಪಿ ಸಂಸದ ಸನ್ನಿ ಡಿಯೋಲ್ ಸಹೋದರ ಬಾಬಿ ಡಿಯೋಲ್ ಸ್ವಾಮೀಜಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ 'ಆಶ್ರಮ್', 'ಆಶ್ರಮ್ 2' ವೆಬ್ ಸರಣಿಗಳು ಜನಪ್ರಿಯತೆಗಳಿಸಿದ್ದವು.

More from Filmibeat

English summary
Bajrang Dal members attacks on Ashram 3 web series set in Bhupal. Bajrang Dal members hit Ashram 3 crew, and threw ink on director Prakash Ja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X