ಬಿಬಿಸಿಯಲ್ಲಿ ಪ್ರಸಾರವಾದ ವೆಬ್‌ ಸೀರೀಸ್‌ನಲ್ಲಿ 41 ನಿಮಿಷದ ಸೆಕ್ಸ್ ದೃಶ್ಯ!

1922 ರಲ್ಲಿ ಸ್ಥಾಪಿತವಾದ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟ್ ಕಾರ್ಪೊರೇಶನ್) ಪ್ರಪಂಚದ ಅತ್ಯಂತ ಹಳೆಯ ಪ್ರಸಾರವಾಹಿನಿ. ಅಷ್ಟೇ ಅಲ್ಲ ಜಗತ್ತಿನ ಅತಿ ದೊಡ್ಡ ಪ್ರಸಾರ ಮಾಧ್ಯಮ ಸಹ ಹೌದು.

Recommended Video

ಲಾಕ್ಡೌನ್ ಸಮಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಮಾಧಾನಕರ ಸುದ್ದಿ ಹೇಳಿದ ಪ್ರಥಮ್ | Pratham | Filmibeat Kannada

ಬಿಬಿಸಿ ಪ್ರಸಾರವಾಹಿನಿಯು ಹಲವು ಚಾನೆಲ್‌ಗಳನ್ನು ನಡೆಸುತ್ತಿದೆ. ಬಿಬಿಸಿ ವರ್ಲ್ಡನ್ಯೂಸ್, ಬಿಬಿಸಿ ಸ್ಟುಡಿಯೋಸ್, ಬಿಬಿಸಿ ನ್ಯೂಸ್, ಬಿಬಿಸಿ 3, ಬಿಬಿಸಿ ಎಂಟರ್ಟೇನ್‌ಮೆಂಟ್ ಹೀಗೆ ಹಲವು ಚಾನೆಲ್‌ಗಳು ವಿಶ್ವದಾದ್ಯಂತ ಪ್ರಸಾರವಾಗುತ್ತಿವೆ.

ಬಿಬಿಸಿ ನ್ಯೂಸ್‌ ಎಷ್ಟು ಪ್ರಚಲಿತವೋ ಬಹುತೇಕ ಅಷ್ಟೆ ಬಿಬಿಸಿಯ ಇತರ ಚಾನೆಲ್‌ಗಳು ಮತ್ತದರ ಕಾರ್ಯಕ್ರಮಗಳೂ ಜನಜನಿತ. ಆದರೆ ಅಂಥಹಾ ಘನವಾದ ಚಾನೆಲ್‌ನಲ್ಲಿ ಪ್ರಸಾರವಾದ ವೆಬ್ ಸೀರೀಸ್ ಒಂದರ ಬಗ್ಗೆ ಚರ್ಚೆ ಆರಂಭವಾಗಿದ್ದು, ಬಿಬಿಸಿ ಇಂಥಹಾ ಸೀರೀಸ್ ಅನ್ನು ಪ್ರದರ್ಶಿಸಬಾರದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನಾರ್ಮಲ್ ಪೀಪಲ್ ವೆಚ್ ಸೀರೀಸ್

ನಾರ್ಮಲ್ ಪೀಪಲ್ ವೆಚ್ ಸೀರೀಸ್

ಬಿಬಿಸಿ 3 ಚಾನೆಲ್‌ನಲ್ಲಿ ಇತ್ತೀಚೆಗೆ 'ನಾರ್ಮಲ್ ಪೀಪಲ್' ಹೆಸರಿನ ವೆಬ್ ಸೀರೀಸ್ ಅನ್ನು ಪ್ರಸಾರ ಮಾಡಲಾಯಿತು. ಮೊದಲ ಸೀರೀಸ್‌ನ 12 ಎಪಿಸೋಡ್‌ಗಳು ಈಗಾಗಲೇ ಪ್ರಸಾರವಾಗಿವೆ. ಇದು ಬಿಬಿಸಿಯಲ್ಲಿ ಈವರೆಗೆ ಪ್ರಸಾರವಾದ ಅತ್ಯಂತ 'ರೊಮ್ಯಾಂಟಿಕ್' ಅಥವಾ 'ಎರೋಟಿಕ್' ಸೀರೀಸ್ ಎನ್ನುತ್ತಿದ್ದಾರೆ ವೀಕ್ಷಕರು.

41 ನಿಮಿಷದ ಸೆಕ್ಸ್ ದೃಶ್ಯಗಳು

41 ನಿಮಿಷದ ಸೆಕ್ಸ್ ದೃಶ್ಯಗಳು

12 ಎಪಿಸೋಡ್‌ನ ವೆಬ್‌ಸೀರೀಸ್‌ನಲ್ಲಿ 41 ನಿಮಿಷದ ಸೆಕ್ಸ್‌ ದೃಶ್ಯಗಳು ಪ್ರಸಾರವಾಗಿಯೆವಂತೆ. 2018 ರಲ್ಲಿ ಪ್ರಕಟವಾದ ಕಾದಂಬರಿಯೊಂದರ ಆಧಾರಿತವಾದ ಈ ವೆಬ್ ಸೀರೀಸ್‌ನಲ್ಲಿ ಅತಿಯಾಗಿ ಸೆಕ್ಸ್‌ ಸೀನ್‌ಗಳನ್ನು ತುರುಕಲಾಗಿದೆಯಂತೆ.

17 ವರ್ಷದ ವಿದ್ಯಾರ್ಥಿಗಳ ನಡುವಿನ ಸಂಬಂಧ

17 ವರ್ಷದ ವಿದ್ಯಾರ್ಥಿಗಳ ನಡುವಿನ ಸಂಬಂಧ

17 ವರ್ಷ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳ ಪರಸ್ಪರ ಸಂಬಂಧದ ಬಗ್ಗೆ ಈ ಕತೆ ಇದ್ದು, ಹದಿಹರೆಯದ ಕಾಮನೆಗಳನ್ನು ತುಸು ಹೆಚ್ಚಾಗಿಯೇ ಫೋಕಸ್‌ ಮಾಡಲಾಗಿದೆ ಎಂಬುದು ವೀಕ್ಷಕರ ಅಳಲು. ಬಿಬಿಸಿಯಲ್ಲಿ ಈವರೆಗೆ ಇಷ್ಟೋಂದು ಹಸಿ-ಬಿಸಿ ಶೋ ಪ್ರಸಾರವಾಗಿಲ್ಲ ಎಂದು ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ.

ಅತಿ ಹೆಚ್ಚು ಡೌನ್‌ಲೋಡ್ ಆದ ಬಿಬಿಸಿ ಸೀರೀಸ್

ಅತಿ ಹೆಚ್ಚು ಡೌನ್‌ಲೋಡ್ ಆದ ಬಿಬಿಸಿ ಸೀರೀಸ್

ಮತ್ತೊಂದು ವಾದವೆಂದರೆ ಈ ಹಸಿ-ಬಿಸಿ ದೃಶ್ಯಗಳಿಂದಲೇ ಈ ಶೋ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುವವರೂ ಇದ್ದಾರೆ. ಈ ಶೋ ಅತಿ ಹೆಚ್ಚು ಡೌನ್‌ಲೋಡ್ ಆದ ಬಿಬಿಸಿಯ ಇತ್ತೀಚಿನ ವೆಬ್‌ ಸೀರೀಸ್‌ಗಳಲ್ಲಿ ಒಂದಂತೆ.

More from Filmibeat

English summary
BBC's new web series 'Normal People' had high romantic scenes. People saying its the most hot web series of the channel till now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X