Bigg boss Kannada OTT: ರಾಕೇಶ್ ಅಡಿಗ ಎದುರಾಳಿಗೆ ಶುಭಕೋರಿದ ಎಕ್ಸ್ ಗರ್ಲ್‌ಫ್ರೆಂಡ್ ದಿವ್ಯಾ ಸುರೇಶ್!

ಪ್ರಸ್ತುತ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಒಟಿಟಿಯ ಮೂಲಕ ಸದ್ದು ಮಾಡುತ್ತಿರುವ ನಟ, ಗಾಯಕ ರಾಕೇಶ್ ಅಡಿಗ ಈ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರ ಹೊಮ್ಮಬಹುದಾದ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಇನ್ನು ಕಳೆದ ಬಾರಿಯ ಟಿವಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ದಿವ್ಯಾ ಸುರೇಶ್ ಮತ್ತು ರಾಕೇಶ್ ಅಡಿಗ ನಡುವೆ ಪ್ರೀತಿ ಇದ್ದದ್ದು ಈಗ ಮುಗಿದ ಅಧ್ಯಾಯ. ದಿವ್ಯ ಸುರೇಶ್ ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಹೊರಗಡೆ ಇಬ್ಬರ ಸೆಲ್ಫಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಹಾಗೂ ಈಕೆ ರಾಕೇಶ್ ಅಡಿಗ ಅವರ ಗರ್ಲ್ ಫ್ರೆಂಡ್ ಎಂದು ಮಿಮ್ಸ್ ಹರಿದಾಡಿದ್ದವು.
ಇದೀಗ ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿರುವಾಗ ಕೂಡ ಈ ಇಬ್ಬರ ನಡುವಿನ ಹಳೆಯ ಲವ್ ಸ್ಟೋರಿ ಕುರಿತು ಕೆಲ ಟ್ರೋಲರ್ಸ್ ಪೋಸ್ಟ್ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಪರಸ್ಪರ ದೂರವಿದ್ದು, ಇಬ್ಬರಲ್ಲಿ ಯಾರೂ ಸಹ ಇನ್ನೊಬ್ಬರ ಬಗ್ಗೆ ಮಾತನಾಡಿರಲಿಲ್ಲ. ಹೀಗೆ ಪರಿಸ್ಥಿತಿ ತಣ್ಣಗಿರುವ ವೇಳೆ ದಿವ್ಯ ಸುರೇಶ್ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ರಾಕೇಶ್ ಅಡಿಗ ಎದುರಾಳಿಯಾಗಿರುವ ರೂಪೇಶ್ ಶೆಟ್ಟಿ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿ ಕೆಲ ಸಮಯದಲ್ಲಿಯೇ ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ತಮ್ಮ ಎಕ್ಸ್ ಬಾಯ್ ಫ್ರೆಂಡ್ ಪ್ರತಿಸ್ಪರ್ಧಿಗೆ ದಿವ್ಯ ಸುರೇಶ್ ಬೆಂಬಲವನ್ನು ಸೂಚಿಸಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ.

ದಿವ್ಯಾ ಮತ್ತು ರಾಕೇಶ್ ಅಡಿಗ ಪರಿಚಯ ಹೇಗೆ?
ಇನ್ನು ಮೊದಲಿಗೆ ತೆಲುಗು ಧಾರಾವಾಹಿಗಳಲ್ಲಿ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ದಿವ್ಯ ಸುರೇಶ್ ರಾಕೇಶ್ ಅಡಿಗ ನಿರ್ದೇಶನದ ನೈಟ್ ಔಟ್ ಚಿತ್ರದ ಆಡಿಷನ್‌ನಲ್ಲಿ ಭಾಗವಹಿಸಿದ್ದರು ಹಾಗೂ ಅಲ್ಲಿ ಅವಕಾಶವೂ ಸಿಕ್ಕಿರಲಿಲ್ಲ ಮತ್ತು ಚಿತ್ರತಂಡ ಬೇರೆ ನಟಿಯನ್ನು ಆಯ್ಕೆ ಮಾಡಿಕೊಂಡು ಏಳೆಂಟು ತಿಂಗಳುಗಳ ಕಾಲ ಚಿತ್ರೀಕರಣವನ್ನೂ ಸಹ ಮಾಡಿತ್ತು.
ನಂತರ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾದಾಗ ದಿವ್ಯಾ ಸುರೇಶ್ ಮತ್ತೆ ರಾಕೇಶ್ ಅಡಿಗಗೆ ಸಂದೇಶ ಕಳುಹಿಸಿದ್ದರು ಹಾಗೂ ಇಬ್ಬರ ನಡುವೆ ಪರಸ್ಪರ ಸ್ನೇಹ ಬೆಳೆಯಿತು ಮತ್ತು ಈ ಸ್ನೇಹ ಪ್ರೀತಿಗೆ ತಿರುವು ಪಡೆದುಕೊಂಡಿತು ಎಂದು ಬಲ್ಲ ಮೂಲಗಳು ತಿಳಿಸಿವೆ. ಹಾಗೂ ಈ ಇಬ್ಬರ ನಡುವಿನ ಪ್ರೀತಿ ಕಳೆದ ಬಾರಿ ದಿವ್ಯ ಸುರೇಶ್ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಅಂತ್ಯಗೊಂಡಿತ್ತು. ಇಬ್ಬರೂ ಸಹ ಬ್ರೇಕಪ್ ಮಾಡಿಕೊಂಡಿದ್ದರು. ಹಾಗೂ ಬಿಗ್ ಬಾಸ್ ಮುಕ್ತಾಯವಾದ ಬಳಿಕ ಇಬ್ಬರೂ ಪರಸ್ಪರ ಬೇರ್ಪಟ್ಟಿರುವ ವಿಷಯವನ್ನು ಸಂದರ್ಶನಗಳಲ್ಲಿ ಬಿಚ್ಚಿಟ್ಟಿದ್ದರು. ನಂತರದ ದಿನಗಳಲ್ಲಿ ದಿವ್ಯಾ ಸುರೇಶ್ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿ ಆಪ್ತ ವಲಯಗಳಿಂದ ತಿಳಿದು ಬಂದಿತ್ತು. ಹಾಗೂ ಇದೀಗ ರೂಪೇಶ್ ಶೆಟ್ಟಿಗೆ ಬೆಂಬಲ ಸೂಚಿಸುವುದರ ಮೂಲಕ ದಿವ್ಯ ಸುರೇಶ್ ತನ್ನ ಹಳೆಯ ಗೆಳೆಯನ ವಿರುದ್ಧವಾಗಿ ಸಾಗಿರುವುದು ಅಚ್ಚರಿ ಮೂಡಿಸಿದೆ.


Click it and Unblock the Notifications











