Don't Miss!
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಇಂದು ಒನ್ಪ್ಲಸ್ ಟಿವಿ 50 Y1S ಪ್ರೊ ಫಸ್ಟ್ ಸೇಲ್; ಇದೆ ಭರ್ಜರಿ ಆಫರ್!
- Finance
ಜುಲೈ 07: ನಿಮ್ಮ ನಗರಗಳ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಒಟಿಟಿಲಾದ್ರೂ ದಾಖಲೆ ಮಾಡುತ್ತಾ ದಳಪತಿ ವಿಜಯ್ ಸಿನಿಮಾ 'ಬೀಸ್ಟ್'?
ದಳಪತಿ ವಿಜಯ್ ಹಾಗೂ ಪೂಜಾ ಹೆಗಡೆ ಅಭಿನಯದ 'ಬೀಸ್ಟ್' ಸಿನಿಮಾ ಹೇಳಿಕೊಳ್ಳುವಷ್ಟು ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಲಿಲ್ಲ. 'ಕೆಜಿಎಫ್ 2' ಸಿನಿಮಾಗೆ 'ಬೀಸ್ಟ್' ಟಕ್ಕರ್ ಕೊಡುತ್ತೆ ಎನ್ನುತ್ತಲೇ ಏಪ್ರಿಲ್ 13 ರಂದು ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿತ್ತು. ಆದರೆ ರಿಲೀಸ್ ಆದ ಒಂದು ದಿನ ಬಿಟ್ಟರೆ ಉಳಿದ ದಿನಗಳಲ್ಲಿ 'ಬೀಸ್ಟ್' ಸಿನಿಮಾ ಯಾವುದೇ ಗಳಿಕೆ ಇಲ್ಲದೆ ನೆಲಕಚ್ಚಿತ್ತು. ಒಂದು ದಿನ ತಡವಾಗಿ ವಿಶ್ವದಾದ್ಯಂತ ಯಶ್ ಸಿನಿಮಾ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಿ ಒಂದೇ ದಿನದಲ್ಲಿ ಎಲ್ಲಾ ರೆಕಾರ್ಡ್‌ನ್ನು ಸಹ ಬ್ರೇಕ್ ಮಾಡಿತ್ತು. ಹೀಗಾಗಿ 'ಬೀಸ್ಟ್' ಸಿನಿಮಾಗೆ ಹೆಚ್ಚು ಜನರು ಬಾರದೆ ಕಲೆಕ್ಷನ್ ಕೂಡ ಆಗದೇ ಚಿತ್ರತಂಡಕ್ಕೆ ಭಾರೀ ಪೆಟ್ಟು ಬಿದ್ದಿತ್ತು.
'ಕೆಜಿಎಫ್' ಈಗಲೂ ಸಹ ಹಲವು ರಾಜ್ಯಗಳಲ್ಲಿ ಅದೇ ವೇಗದಲ್ಲಿ ಸಿನಿಮಾ ಓಡುತ್ತಿದೆ. ಹೀಗಾಗಿ ಆ ಸಮಯದಲ್ಲಿ ರಿಲೀಸ್ ಆದ 'ಬೀಸ್ಟ್' ಸಿನಿಮಾ ಸೇರಿದಂತೆ ಬಾಲಿವುಡ್‌ನ ಹಲವು ಚಿತ್ರಗಳು ಕಲೆಕ್ಷನ್ ಇಲ್ಲದೆ ನಷ್ಟ ಅನುಭವಿಸುವಂತಾಯಿತು.
ತಮಿಳುನಾಡಿನಲ್ಲಿ
ದಾಖಲೆ
ಗಳಿಕೆ
ಕಂಡ
ಮೊದಲ
ಕನ್ನಡ
ಸಿನಿಮಾ
'ಕೆಜಿಎಫ್
2':
ಕಲೆಕ್ಷನ್
ಎಷ್ಟು
ಗೊತ್ತಾ?
ಸದ್ಯಕ್ಕೀಗ 'ಬೀಸ್ಟ್' ಸಿನಿಮಾ ರಿಲೀಸ್ ಆದ ಒಂದೇ ತಿಂಗಳಲ್ಲೇ ಒಟಿಟಿ ಫ್ಲಾಟ್ ಫಾರ್ಮ್‌ಗೆ ಬರಲಿದೆ. ಮೇ 11 ರಿಂದ 'ಬೀಸ್ಟ್' ಸಿನಿಮಾ ಸನ್‌ನೆಟ್ ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಸಿಗಲಿದೆ ಎಂದು ಚಿತ್ರತಂಡ ಹೇಳಿದೆ. ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ 'ಬೀಸ್ಟ್' ಸಿನಿಮಾ ಡಬ್ ಆಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಸಿಗಲಿದೆ.
'ಕೆಜಿಎಫ್' ಸಿನಿಮಾದಿಂದ ಕೇವಲ ಬಾಲಿವುಡ್ ಮೂವಿಗಳು ಮಾತ್ರ ನಷ್ಟ ಅನುಭವಿಸುತ್ತಿಲ್ಲ. ಟಾಲಿವುಡ್, ಕಾಲಿವುಡ್ ಚಿತ್ರರಂಗದ ಮೇಲೆ ಭಾರೀ ಹೊಡೆತ ಕೊಟ್ಟಿದೆ. ತೆಲುಗು, ತಮಿಳಿನಲ್ಲಿ ರಿಲೀಸ್ ಆದ 'ಬೀಸ್ಟ್' ,' ಆಚಾರ್ಯ' ಸಿನಿಮಾಗಳು 'ಕೆಜಿಎಫ್' ಅಬ್ಬರಕ್ಕೆ ಸುಸ್ತಾಗಿ ಹೋಗಿದ್ದು, ಚಿರಂಜೀವಿ ಹಾಗೂ ರಾಮ್‌ಚರಣ್ ಅಭಿನಯದ 'ಆಚಾರ್ಯ' ಸಿನಿಮಾ ಕೂಡ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ.

ತಮಿಳಿನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 'ಬೀಸ್ಟ್' ಒಂದೇ ದಿನದಲ್ಲೇ ಕೆಜಿಎಫ್ ಅಬ್ಬರಕ್ಕೆ ಮಕಾಡೆ ಮಲಗಿತ್ತು. ಕಲೆಕ್ಷನ್ ಇಲ್ಲದೆ ಮೂಲೆ ಗುಂಪಾಗಿತ್ತು. ಸದ್ಯ ಈಗ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಒಟಿಟಿಯಲ್ಲಾದರೂ ಸಿನಿಮಾ ಓಡುತ್ತಾ ಅಂತ ನೋಡಬೇಕಿದೆ.