twitter
    For Quick Alerts
    ALLOW NOTIFICATIONS  
    For Daily Alerts

    ಅಮೆಜಾನ್ ಪ್ರೈಮ್‌ಗೆ ಬಂತು ಅಕ್ಷಯ್ ಕುಮಾರ್ 'ಬೆಲ್ ಬಾಟಮ್'

    |

    ಕೊರೊನಾ ವೈರಸ್ ಭೀತಿಯ ನಡುವೆಯೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಬೆಲ್ ಬಾಟಮ್ ಸಿನಿಮಾ ಈಗ ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನ ಕಾಣಲಿದೆ. ಒಟಿಟಿ ಪ್ರೀಮಿಯರ್ ದಿನಾಂಕ ಇಂದು ಬಹಿರಂಗವಾಗಿದ್ದು, ಸೆಪ್ಟೆಂಬರ್ 16ಕ್ಕೆ ಅಮೆಜಾನ್ ನಲ್ಲಿ ಅಕ್ಷಯ್ ಕುಮಾರ್ ಚಿತ್ರ ಟೆಲಿಕಾಸ್ಟ್ ಆಗಲಿದೆ.

    ಅಮೆಜಾನ್ ಪ್ರೈಮ್‌ ನಲ್ಲಿ ರಿಲೀಸ್ ಮಾಡುತ್ತಿರುವ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ''ಚಿತ್ರಮಂದಿರಗಳಲ್ಲಿ ತೆರೆಕಂಡ ಬಳಿಕ ಈ ಚಿತ್ರ ಹೆಚ್ಚು ಜನರಿಗೆ ತಲುಪುವ ದೃಷ್ಟಿಯಿಂದ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಶ್ವದ 240 ದೇಶಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಜನರು ಈ ಚಿತ್ರವನ್ನು ವೀಕ್ಷಿಸಬಹುದು. ಹೆಚ್ಚು ಜನರಿಗೆ ಈ ಸಿನಿಮಾ ತಲುಪುತ್ತಿರುವುದು ಸಂತಸ ತಂದಿದೆ'' ಎಂದಿದ್ದಾರೆ.

    ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್ ಬಾಟಮ್ ಪ್ರದರ್ಶನವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್ ಬಾಟಮ್ ಪ್ರದರ್ಶನ

    ಇನ್ನು ಅಮೆಜಾನ್ ಪ್ರೈಮ್ ವೀಡಿಯೋ ಕಂಟೆಂಟ್‌ನ ನಿರ್ದೇಶಕ ಮತ್ತು ಮುಖ್ಯಸ್ಥ ವಿಜಯ್ ಸುಬ್ರಮಣ್ಯಂ ಪ್ರತಿಕ್ರಿಯಿಸಿ, "ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಕಥೆಯನ್ನು ವಿಶ್ವವ್ಯಾಪಿ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಪ್ರಯತ್ನವಾಗಿದೆ. ಅದ್ಭುತವಾದ ಸ್ಕ್ರಿಪ್ಟ್ ಮತ್ತು ಉತ್ತಮ ಪ್ರದರ್ಶನದಿಂದ ಕೂಡಿರುವ ಈ ಚಿತ್ರ ನಮ್ಮ ಸಂಸ್ಥೆಯ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ'' ಎಂದಿದ್ದಾರೆ.

    ನಿರ್ಮಾಪಕ ಜಾಕಿ ಭಗ್ನಾನಿ ಮಾತನಾಡಿ " ನಿರ್ದೇಶಕ ರಂಜಿತ್ ಎಂ ತಿವಾರಿ ಮತ್ತು ಇಡೀ ಚಿತ್ರತಂಡ ಬೆಲ್ ಬಾಟಮ್ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಇತ್ತೀಚೆಗೆ ಪ್ರೇಕ್ಷಕರು ಆಕ್ಷನ್ ಥ್ರಿಲ್ಲರ್‌ಗಳನ್ನು ನೋಡಲು ಹೆಚ್ಚು ಆಸಕ್ತಿಯನ್ನು ಬೆಳೆಸಿದ್ದಾರೆ. ಅವರ ಕುತೂಹಲಕ್ಕೆ ತಕ್ಕ ಸಿನಿಮಾ ಇದಾಗಿದೆ. ಇನ್ನು ಪ್ರಪಂಚದಾದ್ಯಂತ 240ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳನ್ನು ತಲುಪಲು ವೇದಿಕೆಯಾಗಿರುವ ಅಮೆಜಾನ್ ಪ್ರೈಮ್ ಜೊತೆ ಸಹಕರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ'' ಎಂದು ಹೇಳಿದರು. ಮುಂದೆ ಓದಿ...

    ಗಲ್ಫ್ ರಾಷ್ಟ್ರಗಳಲ್ಲಿ 'ಬೆಲ್ ಬಾಟಮ್' ಬ್ಯಾನ್: 4ನೇ ದಿನ ಗಳಿಸಿದ್ದೆಷ್ಟು?ಗಲ್ಫ್ ರಾಷ್ಟ್ರಗಳಲ್ಲಿ 'ಬೆಲ್ ಬಾಟಮ್' ಬ್ಯಾನ್: 4ನೇ ದಿನ ಗಳಿಸಿದ್ದೆಷ್ಟು?

    ಅಕ್ಷಯ್, ಲಾರಾ ದತ್ತ ನಟನೆ

    ಅಕ್ಷಯ್, ಲಾರಾ ದತ್ತ ನಟನೆ

    ರಂಜಿತ್ ತಿವಾರಿ ನಿರ್ದೇಶಿಸಿದ್ದ ಈ ಸಿನಿಮಾ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. 80ರ ದಶಕದಲ್ಲಿ ನಡೆದ ವಿಮಾನ ಅಪಹರಣದ ಸುತ್ತ ಕಥೆ ಮಾಡಲಾಗಿದೆ. ಅಕ್ಷಯ್ ಕುಮಾರ್ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರೆ, ವಾಣಿ ಕಪೂರ್ ಅವರ ಪತ್ನಿಯಾಗಿ ಅಭಿನಯಿಸಿದ್ದಾರೆ. ಲಾರಾ ದತ್ತಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಮಾಡಿದ್ದು, ಹುಮಾ ಖುರೇಷಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಬೆಲ್ ಬಾಟಮ್ ಗಳಿಕೆ ಎಷ್ಟು ಆಗಿದೆ?

    ಬೆಲ್ ಬಾಟಮ್ ಗಳಿಕೆ ಎಷ್ಟು ಆಗಿದೆ?

    ಆಗಸ್ಟ್ 19ಕ್ಕೆ ತೆರೆಕಂಡಿದ್ದ ಬೆಲ್ ಬಾಟಮ್ ಮೊದಲ ದಿನ 2.75 ಕೋಟಿ ಗಳಿಸಿತ್ತು. ಎರಡನೇ ದಿನ ಶುಕ್ರವಾರವೂ 2.75 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ದಿನ ಶನಿವಾರ 3.25 ಕೋಟಿ ಗಳಿಸಿದ್ರೆ, ಭಾನುವಾರ 4.30 ಕೋಟಿ ಬಾಚಿಕೊಂಡಿತು. ಈ ಮೂಲಕ ಮೊದಲ ನಾಲ್ಕು ದಿನಗಳಲ್ಲಿ ಒಟ್ಟು 12.65 ಕೋಟಿ ಗಳಿಸಿರುವ ಮಾಹಿತಿ ಇದೆ. ಮೊದಲ ಒಂಬತ್ತು ದಿನದಲ್ಲಿ 20 ಕೋಟಿ ದಾಟಿದೆ ಎಂದು ವರದಿಯಾಗಿದೆ.

    ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಪ್ರದರ್ಶನ

    ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಪ್ರದರ್ಶನ

    ಅಂದ್ಹಾಗೆ, ಲೇಹ್‌ನಲ್ಲಿರುವ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್ ಬಾಟಮ್ ಸಿನಿಮಾ ಪ್ರದರ್ಶನ ಕಂಡಿತ್ತು. ಈ ಬಗ್ಗೆ ಸಂತಸ ಹಂಚಿಕೊಂಡಿದ್ದ ಅಕ್ಷಯ್ ಕುಮಾರ್ ''ಲಡಾಖ್‌ನ ಲೇಹ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್‌ ಬಾಟಮ್ ಪ್ರದರ್ಶನ ಕಂಡಿದ್ದು ನನ್ನ ಹೃದಯ ತುಂಬಿದೆ ಬಂದಿದೆ ಹಾಗೂ ಹೆಮ್ಮೆ ಎನಿಸಿದೆ. 11562 ಅಡಿ ಎತ್ತರದಲ್ಲಿ 28 ಡಿಗ್ರಿ ಸೆಲ್ಸಿಯಸ್‌ನಲ್ಲಿ , ಥಿಯೇಟರ್ ಕಾರ್ಯನಿರ್ವಹಿಸುವುದು. ನಿಜಕ್ಕೂ ಇದು ಎಂತಹ ಅದ್ಭುತ'' ಎಂದು ಟ್ವೀಟ್ ಮಾಡಿದ್ದರು.

    ಅಕ್ಷಯ್ ಕುಮಾರ್ ಮುಂದಿನ ಸಿನಿಮಾಗಳು

    ಅಕ್ಷಯ್ ಕುಮಾರ್ ಮುಂದಿನ ಸಿನಿಮಾಗಳು

    ಅಕ್ಷಯ್ ಕುಮಾರ್ ಹಲವು ಚಿತ್ರಗಳು ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿಯ 'ಸೂರ್ಯವಂಶಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ರಣವೀರ್ ಸಿಂಗ್, ಅಜಯ್ ದೇವಗನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಭೂಮಿ ಪೆಡ್ನೇಕರ್ ಜೊತೆ 'ರಕ್ಷಾ ಬಂಧನ್' ಚಿತ್ರ ಮಾಡುತ್ತಿದ್ದಾರೆ. ಸಾರಾ ಅಲಿ ಖಾನ್, ಧನುಶ್ ಜೊತೆ 'ಅತ್ರಂಗಿ ರೇ' ಸಿನಿಮಾ ಮುಗಿಸಿದ್ದಾರೆ. ಇದರ ಜೊತೆ 'ರಾಮ್ ಸೇತು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    English summary
    Akshay kumar starrer Bell Bottom to premiere on Amazon Prime at September 16th.
    Monday, September 13, 2021, 15:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X