twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರಿಂದ ಹೆಚ್ಚು ಲಾಭ ಗಳಿಸುವ ಒಟಿಟಿಗಳು ಕನ್ನಡವನ್ನೇ ನಿರ್ಲಕ್ಷ್ಯ ಮಾಡಿವೆ

    |

    ಒಟಿಟಿಗಳು ಈಗ ನಾಯಿಕೊಡೆಗಳಂತಾಗಿವೆ. ಎರಡು ವರ್ಷದ ಹಿಂದೆ ಅಮೆಜಾನ್, ನೆಟ್‌ಫ್ಲಿಕ್ಸ್ ಹೊರತಾಗಿ ಇನ್ನಾವ ಒಟಿಟಿಗಳ ಪರಿಚಯ ಸಹ ಇರಲಿಲ್ಲ. ಈಗ ಕನಿಷ್ಟ 30ಕ್ಕೂ ಹೆಚ್ಚು ಒಟಿಟಿಗಳು ಭಾರತ ಒಂದರಲ್ಲಿಯೇ ಸಕ್ರಿಯವಾಗಿವೆ.

    ಒಟಿಟಿಗಳು ಮನೊರಂಜನಾ ಮಾಧ್ಯಮಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನದಲ್ಲಿವೆ. ಹಲವು ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಸಾಧ್ಯತೆಗಳನ್ನು ಪರಿಚಯಿಸಿದೆ. ಒಟಿಟಿಗಳಿಗಾಗಿಯೆಂದೇ ಸಿನಿಮಾಗಳು, ವೆಬ್ ಸರಣಿಗಳು ನಿರ್ಮಾಣ ಮಾಡುತ್ತಿವೆ. ಚಿತ್ರಮಂದಿರದಲ್ಲಿ 'ಎ, ಬಿ,ಸಿ' ಕ್ಲಾಸ್‌ ವೀಕ್ಷಕರು ಇದ್ದಂತೆ, ಒಟಿಟಿ ವೀಕ್ಷಕರೆಂಬ ಹೊಸ ವಿಭಾಗವೇ ಹುಟ್ಟಿದೆ.

    ಒಟಿಟಿಗಳಿಂದ ಸಾಕಷ್ಟು ಬದಲಾವಣೆ ಆಗುತ್ತಿದೆ ಆದರೆ ಒಟಿಟಿಗಳ ಮುಖ್ಯ ಸಮಸ್ಯೆ ಎಂದರೆ ಕನ್ನಡಕ್ಕೆ ಸೂಕ್ತ ಪ್ರಾಶಸ್ತ್ಯವನ್ನು ಯಾವ ಪ್ರಮುಖ ಒಟಿಟಿಗಳು ಸಹ ನೀಡುತ್ತಿಲ್ಲ. ಆಸಕ್ತಿಕರ ಅಂಶವೆಂದರೆ ಭಾರತದಲ್ಲಿ ಅತಿ ಹಚ್ಚು ಒಟಿಟಿ ಸಬ್‌ಸ್ಕ್ರೈಬರ್‌ಗಳು ಇರುವುದೇ ಬೆಂಗಳೂರಿನಲ್ಲಿ ಆದರೂ ಸಹ ಒಟಿಟಿಗಳಲ್ಲಿ ಕನ್ನಡದ ಕಂಟೆಂಟ್‌ಗಳಿಲ್ಲ.

    ಒರ್‌ಮ್ಯಾಕ್ಸ್ ಮೀಡಿಯಾ ಮಾಹಿತಿ ಪ್ರಕಾರ ಇಡೀಯ ದೇಶದಲ್ಲಿ ಬೆಂಗಳೂರಿನಲ್ಲಿದ್ದಷ್ಟು ಒಟಿಟಿ ಸಬ್‌ಸ್ಕ್ರೈಬರ್‌ಗಳು ದೇಶದ ಇನ್ನಾವ ನಗರದಲ್ಲಿ ಸಹ ಇಲ್ಲ. ಬೆಂಗಳೂರಿನಲ್ಲಿ ಬರೋಬ್ಬರಿ 89 ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಅದರಲ್ಲೂ ಪ್ರತಿಯೊಬ್ಬರು ಸರಾಸರಿ 3.8 ಒಟಿಟಿಗಳ ಸಬ್‌ಕ್ರಿಪ್ಷನ್ ಅನ್ನು ಹೊಂದಿದ್ದಾರೆ. ಇದು ಕಡಿಮೆ ಮೊತ್ತವಲ್ಲ. ಬೆಂಗಳೂರು ಒಂದರಿಂದಲೇ ಒಟಿಟಿಗಳು ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಿವೆ.

    ದೆಹಲಿಯಲ್ಲಿರುವ ಚಂದಾದಾರರೆಷ್ಟು?

    ದೆಹಲಿಯಲ್ಲಿರುವ ಚಂದಾದಾರರೆಷ್ಟು?

    ಒಟಿಟಿ ಚಂದಾದಾರ ಅಂಕಿ-ಅಂಶದ ದೇಶದ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಹೊರತುಪಡಿಸಿದರೆ ದೆಹಲಿಯಲ್ಲಿ ಬಹಳ ಹೆಚ್ಚು ಮಂದಿ ಒಟಿಟಿ ಚಂದಾದಾರರಿದ್ದಾರೆ. ದೆಹಲಿಯಲ್ಲಿ ಬರೋಬ್ಬರಿ 85 ಲಕ್ಷಕ್ಕೂ ಹೆಚ್ಚು ಮಂದಿ ಒಟಿಟಿಗೆ ಚಂದಾದಾರರಾಗಿದ್ದಾರೆ. ದೆಹಲಿಯ ಜನಸಂಖ್ಯೆ ಹೆಚ್ಚಿದ್ದರೂ ಸಹ ಚಂದಾದಾರರ ಸಂಖ್ಯೆಯಲ್ಲಿ ಬೆಂಗಳೂರಿಗಿಂತಲೂ ಕೆಳಗಿನ ಸ್ಥಾನದಲ್ಲಿಯೇ ಇದೆ ದೆಹಲಿ.

    ಮುಂಬೈನಲ್ಲಿರುವ ಚಂದಾದಾರರು ಎಷ್ಟು?

    ಮುಂಬೈನಲ್ಲಿರುವ ಚಂದಾದಾರರು ಎಷ್ಟು?

    ಭಾರತದ ಮನರಂಜನಾ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈನಲ್ಲಿ ಒಟಿಟಿ ಸಬ್‌ಸ್ಕ್ರಿಪ್ಷನ್‌ ಬೆಂಗಳೂರಿಗೆ ಹೋಲಿಸಿದರೆ ಕಡಿಮೆ ಇದೆ. ಮುಂಬೈ ನಗರದಲ್ಲಿ 83 ಲಕ್ಷ ಮಂದಿ ಒಟಿಟಿ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಮಹಾರಾಷ್ಟ್ರಕ್ಕೆ ಸೇರಿರುವ ಪುಣೆಯಲ್ಲಿ 1೦ ಲಕ್ಷ ಸಬ್‌ಸ್ಕೈಬರ್‌ಗಳಿದ್ದಾರೆ. ರಾಜ್ಯವಾರು ಲೆಕ್ಕ ಹಿಡಿದರೆ ಬಹುಷಃ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿರಬಹುದು ಆದರೆ ನಗರಗಳನ್ನಷ್ಟೆ ಲೆಕ್ಕ ಹಿಡಿದರೆ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

    ದಕ್ಷಿಣ ಭಾರತದ ನಗರಗಳಲ್ಲಿ ಎಷ್ಟಿದೆ ಸಂಖ್ಯೆ

    ದಕ್ಷಿಣ ಭಾರತದ ನಗರಗಳಲ್ಲಿ ಎಷ್ಟಿದೆ ಸಂಖ್ಯೆ

    ಬೆಂಗಳೂರು, ದೆಹಲಿ, ಮುಂಬೈಗಳನ್ನು ಹೊರತುಪಡಿಸಿದರೆ ಭಾರತದ ಇನ್ಯಾವ ನಗರಗಳಲ್ಲೂ ದೊಡ್ಡ ಸಂಖ್ಯೆಯ ಒಟಿಟಿ ಚಂದಾದಾರರಿಲ್ಲ. ಹೈದರಾಬಾದ್‌ನಲ್ಲಿ 56 ಲಕ್ಷ ಚಂದಾದಾರಿದ್ದಾರೆ. ಹೈದರಾಬಾದ್‌ನಲ್ಲಿ 'ಆಹಾ' ಹೆಸರಿನ ಪ್ರಾದೇಶಿಕ ಭಾಷೆಯ ಒಟಿಟಿ ಜನಪ್ರಿಯವಾಗಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದಕ್ಷಿಣ ಭಾರತದ ಮತ್ತೊಂದು ಪ್ರಮುಖ ನಗರ ಚೆನ್ನೈನಲ್ಲಿ 19 ಲಕ್ಷ ಒಟಿಟಿ ಸಬ್‌ಸ್ಕ್ರೈಬರ್‌ಗಳಿದ್ದಾರೆ. ವಿಶಾಖಪಟ್ಟಣದಲ್ಲಿ ಎಂಟು ಲಕ್ಷ ಚಂದಾದಾರರಿದದ್ದಾರೆ.

    ಉಳಿದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಸಂಖ್ಯೆ

    ಉಳಿದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಸಂಖ್ಯೆ

    ಇನ್ನುಳಿದಂತೆ ಜೈಪುರದಲ್ಲಿ 15 ಲಕ್ಷ, ಅಹ್ಮದಾಬಾದ್‌ನಲ್ಲಿ 22 ಲಕ್ಷ, ಸೂರತ್‌ನಲ್ಲಿ 13 ಲಕ್ಷ, ಪುಣೆಯಲ್ಲಿ 11 ಲಕ್ಷ, ಕಾನ್ಪುರದಲ್ಲಿ ಆರು ಲಕ್ಷ, ಲಖನೌನಲ್ಲಿ 8 ಲಕ್ಷ, ಕೊಲ್ಕತ್ತದಲ್ಲಿ 16 ಲಕ್ಷ, ಭೋಪಾಲ್‌ನಲ್ಲಿ 8 ಲಕ್ಷ ಇಂಧೋರ್‌ನಲ್ಲಿ ಹತ್ತು ಲಕ್ಷ ಒಟಿಟಿ ಚಂದಾದಾರಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿರುವ ವಿವಿಧ ಒಟಿಟಿಗಳ ಚಂದಾದಾರರ ಈ ಮಾಹಿತಿಯನ್ನು ನೀಡಿರುವುದು ಒರ್‌ಮ್ಯಾಕ್ಸ್‌ ಸಂಸ್ಥೆ.

    ಆದರೆ ಕನ್ನಡಕ್ಕೆ ಇಲ್ಲ ಆದ್ಯತೆ

    ಆದರೆ ಕನ್ನಡಕ್ಕೆ ಇಲ್ಲ ಆದ್ಯತೆ

    ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತ್ಯಧಿಕ ಸಂಖ್ಯೆಯ ಒಟಿಟಿ ಚಂದಾದಾರರಿದ್ದರೂ ಸಹ ಪ್ರಮುಖ ಒಟಿಟಿಗಳಾದ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಸೋನಿ ಲಿವ್, ಜೀ 5 ಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆಯೇ ಇಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಇರುವುದು ಕನ್ನಡದ ಕೇವಲ ಎರಡು ಸಿನಿಮಾ. ಅಮೆಜಾನ್ ಪ್ರೈಂ ನವರು ಕನ್ನಡ ಸಿನಿಮಾ ನಿರ್ಮಾಪಕರನ್ನು ಬಾಗಿಲ ಒಳಗೂ ಬಿಟ್ಟುಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಪೇ ಪರ್ ವ್ಯೂ ಮಾದರಿಯಲ್ಲಿ ಕೆಲವು ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದಾರೆ. ಡಿಸ್ನಿ ಹಾಟ್‌ ಸ್ಟಾರ್, ಸೋನಿ ಲಿವ್, ಜೀಗಳ ಕನ್ನಡದ ಬಗ್ಗೆ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿವೆ. ತೆಲುಗಿಗೆ 'ಆಹಾ' ಇರುವಂತೆ ಕನ್ನಡದಕ್ಕೆ ನಮ್ಮದೇ ಆದ ಪ್ರತ್ಯೇಕವಾದ ಗುಣಮಟ್ಟದ ಒಟಿಟಿ ಬೇಕು ಎಂಬ ಒತ್ತಾಯ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಅದಿನ್ನೂ ಸಾಕಾರವಾಗಿಲ್ಲ. ಕೆಲವು ಕನ್ನಡದ ಒಟಿಟಿಗಳು ಈಗಾಗಲೇ ಇವೆ ಆದರೆ ಅವುಗಳ ಗುಣಮಟ್ಟ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ.

    English summary
    Bengaluru city has highest OTT subscribers than any other Indian cities. Bengaluru only have 89 lakh ott subscribers.
    Monday, September 20, 2021, 10:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X