OTT: ಕುಟುಂಬ ಸಮೇತರಾಗಿ ಮನೆಯಲ್ಲೇ ಕುಳಿತು ನೋಡಬಹುದಾದ ಹಿಂದಿ ಕೌಟುಂಬಿಕ ಸಿನಿಮಾಗಳು

ಕೌಟುಂಬಿಕ ಸಿನಿಮಾಗಳಿಗೆ ಭಾರತೀಯ ಚಿತ್ರರಂಗದಲ್ಲಿ ವಿಶೇಷ ಸ್ಥಾನವಿದೆ. ಮನೆಯಲ್ಲಿ ಕುಳಿತು ಕುಟುಂಬ ಸಮೇತರಾಗಿ, ವಯಸ್ಕರು ಮತ್ತು ಮಕ್ಕಳ ಜೊತೆಗೆ ನೋಡಬಹುದಾದ ಸಿನಿಮಾಗಳಿಗೆ ಹೆಚ್ಚು ಬೇಡಿಕೆಯಿದೆ. ಹಾಸ್ಯ, ರೊಮ್ಯಾನ್ಸ್ ಕುಟುಂಬ ಎಂಬ ಸೆಂಟಿಮೆಂಟ್‌ಗಳನ್ನು ಸೇರಿಸಿ ಬಾಲಿವುಡ್ ಹಲವು ಚಿತ್ರಗಳನ್ನು ಸಿನಿರಸಿಕರ ಮುಂದಿಟ್ಟಿದೆ. ಈಗ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಮನೆಯಲ್ಲೇ ಕುಳಿತು ಎಲ್ಲರು ಸಿನಿಮಾ ನೋಡಬಹುದು.

ಇಂತಹ ಕೌಟುಂಬಿಕ ಸಿನಿಮಾಗಳನ್ನು ನೀವು ಹುಡುಕುತ್ತಿದ್ದರೇ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ ಅತ್ಯುತ್ತಮ ಹಿಂದಿ ಸಿನಿಮಾಗಳಲ್ಲಿ ಕೆಲವು ಇಲ್ಲಿವೆ.

Best Hindi family movies on Amazon Prime Video OTT

1. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (2023)

ಕಳೆದ ವರ್ಷ ಬಿಡುಗಡೆಯಾದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಎರಡು ಸಂಸ್ಕೃತಿ ಮತ್ತು ವ್ಯಕ್ತಿತ್ವಗಳಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿರುವ ಇಬ್ಬರು ಪ್ರೀತಿಯಲ್ಲಿ ಬೀಳುವ ಪ್ರೇಮಿಗಳ ಕತೆ ಹೇಳುತ್ತೆ. ಪರಸ್ಪರರ ಕುಟುಂಬಗಳನ್ನು ಗೆಲ್ಲಲು ಅವರು ನಡೆಸುವ ಪ್ರಯತ್ನಗಳ ಬಗ್ಗೆ ತಿಳಿಸುತ್ತದೆ. ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿದ್ದಾರೆ. ಧರ್ಮೇಂದ್ರ, ಶಬಾನಾ ಅಜ್ಮಿ, ಜಯಾ ಬಚ್ಚನ್ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳಿದ್ದಾರೆ.

2. ಕಪೂರ್ ಮತ್ತು ಸನ್ಸ್ (2016)

ನಟ ಸಿದ್ಧಾರ್ಥ್ ಮಲ್ಹೋತ್ರಾ, ಫವಾದ್ ಖಾನ್, ರಿಷಿ ಕಪೂರ್ ಮತ್ತು ನಟಿ ಆಲಿಯಾ ಭಟ್ ಅಭಿನಯದ ಕಪೂರ್ ಮತ್ತು ಸನ್ಸ್ ಸಿನಿಮಾ 2016ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಆಮೆಜಾನ್ ಪ್ರೈಮ್‌ನಲ್ಲಿದ್ದು, ಅಮರ್ಜೀತ್ ಕಪೂರ್ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಕುಟುಂಬದ ಚಿತ್ರಣವನ್ನು ನೀಡಲಿದೆ. ನಿರ್ದೇಶಕ ಶಕುನ್ ಬಾತ್ರಾ ಆಕ್ಷನ್ ಕಟ್ ಹೇಳಿದ್ದಾರೆ.

3. ದಿಲ್ ಧಡಕ್ನೆ ದೋ (2015)

ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್, ಶೆಫಾಲಿ ಶಾ, ಅನುಷ್ಕಾ ಶರ್ಮಾ, ಫರ್ಹಾನ್ ಅಖ್ತರ್ ನಟಿಸಿರುವ, ಜೋಯಾ ಅಖ್ತರ್ ನಿರ್ದೇಶನದ 'ದಿಲ್ ಧಡಕ್ನೆ ದೋ' ಕಂಪ್ಲೀಟ್ ಫ್ಯಾಮಿಲಿ ಎಂಟಟೈನರ್. ತಮ್ಮ ಕುಟುಂಬದಲ್ಲಿನ ಬಿಕ್ಕಟ್ಟುಗಳು, ವೈಯಕ್ತಿಕ ಸಮಸ್ಯೆಗಳಿಗೆ ಕುಟುಂಬ ಹೇಗೆ ಒಂದಾಗಿರಬೇಕು ಎಂಬುದನ್ನು ತಿಳಿಸುತ್ತದೆ. ಕಾಮಿಡಿ, ಎಮೋಷನ್ ಜೊತೆಗೆ ಮನರಂಜನೆ ನೀಡುತ್ತದೆ.

4. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (1995)

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾ ಆಲ್ ಟೈಂ ಕ್ಲಾಸಿಕ್. ರಾಜ್ ಮತ್ತು ಸಿಮ್ರಾನ್ ನಡುವಿನ ಪ್ರೇಮಕಥೆ. ಯಶ್ ಚೋಪ್ರಾ ನಿರ್ದೇಶನದ ಆದಿತ್ಯ ಚೋಪ್ರಾ ಬರೆದಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ನಾಯಕ ನಾಯಕಿ. ಇದೊಂದು ದೊಡ್ಡ ಫ್ಯಾಮಿಲಿ ಎಂಟಟೈನರ್ ಎಂಬುದು ಇಂದಿಗೂ ನಿಜ.

Best Hindi family movies on Amazon Prime Video OTT

5. ಕಭಿ ಖುಷಿ ಕಭಿ ಗಮ್ (2001)

ಶಾರುಖ್ ಖಾನ್, ಕಾಜೋಲ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಕರೀನಾ ಕಪೂರ್ ಖಾನ್, ಹೃತಿಕ್ ರೋಷನ್ ಅವರನ್ನಿ ಒಳಗೊಂಡ ದೊಡ್ಡ ತಾರಾಗಣ ಇರುವ ಸಿನಿಮಾ ಒಂದು ಕ್ಲಾಸಿಕ್ ಹಿಟ್. ಕರಣ್ ಜೋಹಾರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಶ್ರೀಮಂತ ದಂಪತಿಯ ಹಿರಿಯ ಮಗ ಮಧ್ಯಮ ವರ್ಗದ ಹಿನ್ನೆಲೆಯ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದಾಗ ತಂದೆ ಆತನನ್ನು ಮನೆಯಿಂದ ಹೊರಹಾಕುವುದೇ ಇಲ್ಲಿ ದೊಡ್ಡ ತಿರುವು. ದೂರಾದ ಮನೆಯನ್ನು ಒಂದು ಮಾಡಲು ಪಣ ತೊಟ್ಟ ಕಿರಿಯ ಮಗ.

6. ಬಾಗ್ಬಾನ್ (2003)

ಅಮಿತಾಬ್ ಬಚ್ಚನ್ ಮತ್ತು ಹೇಮಾ ಮಾಲಿನಿ ಅಭಿನಯದ ಬಾಗ್ವಾನ್ ಸಿನಿಮಾ ನಾಲ್ಕು ಗಂಡು ಮಕ್ಕಳು ಮತ್ತು ತಂದೆ ತಾಯಿ ನಡುವಿನ ಸಂಬಂಧದ ಕತೆಯನ್ನು ವಿವರಿಸುತ್ತದೆ. ರವಿ ಚೋಪ್ರಾ ನಿರ್ದೇಶನದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೋಷಕರ ಸಂಬಂಧಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಭಾವನಾತ್ಮಕ ಕಥೆ.

7. ವಿವಾಹ (2006)

ಶಾಹಿದ್ ಕಪೂರ್, ಅಮೃತ ರಾವ್, ಅನುಪಮ್ ಖೇರ್ ನಟನೆಯ 'ವಿವಾಹ' ಚಿತ್ರ ಪ್ರೀತಿ, ಸಂಬಂಧಗಳ ಸುತ್ತ ಸುತ್ತುತ್ತದೆ. ಪೂನಂಗೆ ಶ್ರೀಮಂತ ಕುಟುಂಬದಿಂದ ಬಂದ ಪ್ರೇಮ್ ಜೊತೆಗೆ ನಿಶ್ಚಿತಾರ್ಥವಾಗಿರುತ್ತದೆ. ಆದರೆ, ಮದುವೆಗೆ ಕೇವಲ ಎರಡು ದಿನಗಳ ಮೊದಲು ಬೆಂಕಿ ದುರಂತದಲ್ಲಿ ಪೂನಂ ದೇಹದ ಬಹುಪಾಲು ಸುಟ್ಟು ಹೋಗುತ್ತದೆ. ಈ ಸನ್ನಿವೇಶಗಳ ಮಧ್ಯೆ ಉಂಟಾಗುವ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಸಂದಿಗ್ಧತೆ 'ವಿವಾಹ' ಸಿನಿಮಾದಲ್ಲಿದೆ.

8. ಕಲ್ ಹೋ ನಾ ಹೋ (2003)

ನಟ ಶಾರುಖ್ ಖಾನ್, ಪ್ರೀತಿ ಜಿಂಟಾ, ಸೈಫ್ ಅಲಿ ಖಾನ್, ಜಯಾ ಬಚ್ಚನ್ ಅಭಿನಯದ ಕಲ್ ಹೋ ನಾ ಹೋ ಒಂದು ಫ್ಯಾಮಿಲಿ ಎಂಟಟೈನರ್. ಕೌಟುಂಬಿಕ ಸಮಸ್ಯೆಗಳಲ್ಲಿ ಮುಳುಗಿದ್ದ ನೈನಾ ಜೀವನದಲ್ಲಿ ಆಮಾನ್ ಪ್ರವೇಶದಿಂದಾಗುವ ಬದಲಾವಣೆಗಳು. ಸ್ನೇಹಿತ ರೋಹಿತ್ ಸಂಬಂಧದ ಗೊಂದಲಗಳ ಸುತ್ತ ಸುತ್ತುತ್ತದೆ.

More from Filmibeat

English summary
Best Hindi family movies on Amazon Prime Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X