For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಮ್‌ನಲ್ಲಿ 'ಭೀಮಸೇನಾ ನಳಮಹಾರಾಜ' ಬಿಡುಗಡೆ

  |

  ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ತೆರೆಯುತ್ತಿದೆ. ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಮೂಲಕ ಸಿನಿಮಾ ಹಾಲ್‌ಗಳು ಕಾರ್ಯನಿರ್ವಹಿಸಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

  ಚಿತ್ರಮಂದಿರಕ್ಕೆ ಅವಕಾಶ ಸಿಕ್ಕರೂ ಹೊಸ ಸಿನಿಮಾಗಳು ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಚಿತ್ರಮಂದಿರಕ್ಕೆ ಜನರು ಬರುವುದು ಅನುಮಾನ ಎಂಬ ಆತಂಕದಿಂದ ಆನ್‌ಲೈನ್ ರಿಲೀಸ್ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಕೆಲವು ನಿರ್ಮಾಪಕರು ಬಂದಿದ್ದಾರೆ.

  ಸಿನಿ ಪ್ರಿಯರಿಗೆ ಮಸ್ತ್ ಮನರಂಜನೆ: ಒಟಿಟಿಯಲ್ಲಿ ಬರ್ತಿವೆ 9 ಸಿನಿಮಾಗಳುಸಿನಿ ಪ್ರಿಯರಿಗೆ ಮಸ್ತ್ ಮನರಂಜನೆ: ಒಟಿಟಿಯಲ್ಲಿ ಬರ್ತಿವೆ 9 ಸಿನಿಮಾಗಳು

  ಥಿಯೇಟರ್ ತೆರೆಯಲು ಅನುಮತಿ ನೀಡಿದ ಬಳಿಕ 'ಭೀಮಸೇನಾ ನಳಮಹಾರಾಜ' ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದು, ಅಕ್ಟೋಬರ್ 29ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  ಚಿತ್ರಮಂದಿರದಲ್ಲಿ ರಿಲೀಸ್ ಮಾಡಿದರೆ ಜನರು ಬರುವುದು ಅನುಮಾನ. ಹಾಕಿದ ಬಂಡವಾಳ ಗಳಿಸುವುದು ಕಷ್ಟ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿರುವುದರಿಂದ ಹಾಕಿದ ಬಂಡವಾಳ ಜೊತೆಗೆ ನಿರ್ಮಾಪಕರಿಗೆ ಲಾಭವೂ ಬಂದಿದೆಯಂತೆ. ಹಾಗಾಗಿ, ಆನ್‌ಲೈನ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  3 ಅವತಾರವೆತ್ತಿದ ಡಿ ಬಾಸ್ ದರ್ಶನ್ | Roberrt Poster | Filmibeat Kannada

  ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಕಾರ್ತಿಕ್ ಸರಗೂರ್ ನಿರ್ದೇಶಿಸಿದ್ದಾರೆ. ನಾಯಕನಾಗಿ ಅರವಿಂದ್ ಅಯ್ಯರ್ ನಟಿಸಿದ್ದು, ಪ್ರಿಯಾಂಕಾ ತಿಮ್ಮೇಶ್ ಮತ್ತು ಆರೋಹಿ ನಾರಾಯಣ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಚ್ಯುತ್ ಕುಮಾರ್, ವಿಜಯ್ ಚೆಂಡೂರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada movie Bheemasena Nalamaharaja movie will release on amazon prime at october 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X