ಒಟಿಟಿ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಿ: ಆಗ್ರಹ

ಒಟಿಟಿ ಪ್ಲಾಟ್‌ಫಾರ್ಮ್‌ ಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಿ ಎಂಬ ಒತ್ತಾಯ ಜೋರಾಗಿಯೇ ಕೇಳಿಬರುತ್ತಿದೆ.

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಸಹ ಇದಕ್ಕೆ ದನಿ ಗೂಡಿಸಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲು ಇದು ಸಕಾಲ. ಹೀಗೆ ಪ್ರಶಸ್ತಿಗೆ ಪರಿಗಣಿಸುವುದು ಪ್ರಗತಿಶೀಲ ನಡೆ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.

ಭೂಮಿ ಪಡ್ನೇಕರ್ ನಟನೆಯ ಜಾಲಿ ಕಿಟ್ಟಿ ಔರ್ ಚಮಕ್ತೆ ಸಿತಾರೆ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈಗ ದುರ್ಗಾಮತಿ ಸಿನಿಮಾ ಸಹ ಒಟಿಟಿಯಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ.

Bhumi Padnekar Demands To Consider OTT Release Movies For Awards

ಒಟಿಟಿಯಲ್ಲಿ ಬಿಡುಗಡೆ ಆಗುವ ಸಿನಿಮಾಗಳು ಒಳ್ಳೆಯ ಗುಣಮಟ್ಟದ್ದಾಗಿರುತ್ತವೆ, ಹೀರೋಯಿಸಂ ಹೊರತಾಗಿ ಕತೆ-ಚಿತ್ರಕತೆಯನ್ನು ಆಧರಿಸಿದ ಸಿನಿಮಾಗಳು ಅವಾಗಿರುತ್ತವೆ ಹಾಗಾಗಿ ಒಟಿಟಿಯಲ್ಲಿ ಬಿಡುಗಡೆ ಆಗುವ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸುವುದು ಹೆಚ್ಚು ಸೂಕ್ತ ಎಂದಿದ್ದಾರೆ ಭೂಮಿ.

ವಿದೇಶಗಳಲ್ಲಿ ಈಗಾಗಲೇ ಒಟಿಟಿ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲು ಆರಂಭಿಸಿದ್ದಾರೆ. ಭಾರತಕ್ಕೂ ಇದು ಸಕಾಲ, ವೆಬ್ ಸರಣಿ ಮಾಡುವ ನಟ-ನಟಿಯರ, ತಂತ್ರಜ್ಞರ ಶ್ರಮವನ್ನು ಗುರುತಿಸಬೇಕಿದೆ ಎಂದಿದ್ದಾರೆ ಭೂಮಿ.

ಭೂಮಿ ಪಡ್ನೇಕರ್ ಅವರ ದದುರ್ಗಾಮತಿ ಸಿನಿಮಾವು ಡಿಸೆಂಬರ್ 11 ರಂದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ಕೊರೊನಾ ಪ್ರಾರಂಭವಾಗುವ ಮುನ್ನಾ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿತ್ತು, ಕೊರೊನಾ ಲಾಕ್‌ಡೌನ್ ಕಾರಣದಿಂದ ನಿಂತಿದ್ದ ಸಿನಿಮಾ ಈಗ ಪೂರ್ಣಗೊಂಡು ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ ಆಗುತ್ತಿದೆ.

More from Filmibeat

English summary
Actress Bhumi Padnekar demands to consider OTT release movies for Awards. Here Durgamati movie releasing on OTT soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X