ಟಿವಿಗೂ ಮೊದಲೇ ಒಟಿಟಿಯಲ್ಲಿ 'ಬಿಗ್ ಬಾಸ್' ಪ್ರಸಾರ

ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುತ್ತಿದೆ. 14 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್ ಬಾಸ್ 15ನೇ ಅವೃತ್ತಿಗೆ ತಯಾರಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ.

ಈ ನಡುವೆ ಕಾರ್ಯಕ್ರಮದಲ್ಲಿ ಪ್ರಸಾರದಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದಾರೆ ಆಯೋಜಕರು. ಹೌದು, ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ಮುಂಚೆಯೇ ಒಟಿಟಿಯಲ್ಲಿ ಟೆಲಿಕಾಸ್ಟ್ ಮಾಡಲು ಕಾರ್ಯಕ್ರಮ ರೂವಾರಿ ತೀರ್ಮಾನಿಸಿದ್ದಾರೆ.

ಅಂದ್ರೆ, ಬಿಗ್ ಬಾಸ್ 15ನೇ ಆವೃತ್ತಿಯ ಮೊದಲ ಆರು ವಾರಗಳ ಎಪಿಸೋಡ್ ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲಿ ಟೆಲಿಕಾಸ್ಟ್ ಆಗಲಿದೆ. ಆರು ವಾರದ ಬಳಿಕ ಟಿವಿಯಲ್ಲಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಬಿಗ್ ಬಾಸ್ ಜೊತೆ ವೂಟ್ ಸಹಭಾಗಿತ್ವದ ಹೊಂದಿರುವ ಕಾರಣ ವೂಟ್ ವೇದಿಕೆಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ.

Bigg Boss 15 to be launched on OTT before TV premiere

ಈ ಕುರಿತು ವೂಟ್ ಸೆಲೆಕ್ಟ್‌ನ ಮುಖ್ಯಸ್ಥ ಫರ್ಜಾಡ್ ಪಾಲಿಯಾ ಪ್ರತಿಕ್ರಿಯಿಸಿ, ''ಬಿಗ್ ಬಾಸ್ ಭಾರತದ ಅತಿ ದೊಡ್ಡ ಮನರಂಜನಾ ಕಾರ್ಯಕ್ರಮವಾಗಿ ಬೆಳೆದಿದೆ. ಕಳೆದ ಆವೃತ್ತಿಗಳು ಅದ್ಭುತ ಯಶಸ್ಸು ಪಡೆದುಕೊಂಡಿದೆ. ಡಿಜಿಟಲ್ ಫೆಸ್ಟ್ ವಿಧಾನವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರ ಮಾಡಲು ಮುಂದಾಗಿದ್ದೇವೆ. ದಿನದ 24 ಗಂಟೆಯೂ ನಮ್ಮ ಪ್ರೇಕ್ಷಕರು ಕಾರ್ಯಕ್ರಮ ವೀಕ್ಷಿಸುವ ಮೂಲಕ ಮನರಂಜನೆ ಪಡೆಯಬಹುದು'' ಎಂದು ಹೇಳಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಬಿಗ್ ಬಾಸ್ 4ರ ವಿಜೇತೆ ಶ್ವೇತಾ ತಿವಾರಿ ಒಟಿಟಿ ಸ್ಟ್ರೀಮಿಂಗ್ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ್ದಾರೆ.

''ನನ್ನ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದು ಉತ್ಸುಕನಾಗಿದ್ದೇನೆ. ನನ್ನ ಪಾಲಿಗೆ ಬಿಗ್ ಬಾಸ್ ಜೀವನ ಬದಲಿಸಿದ ಶೋ. ನನಗೆ ಕುಟುಂಬದಂತಹ ಸ್ನೇಹಿತರನ್ನು ನೀಡಿದೆ. ಪ್ರತಿ ವರ್ಷ ನಾನು ಬಿಗ್ ಬಾಸ್ ವೀಕ್ಷಿಸುತ್ತೇನೆ. ಈಗ ಒಟಿಟಯಲ್ಲಿ ಮೂಡಿಬರುವ ಸುದ್ದಿ ನನ್ನನ್ನು ಮತ್ತಷ್ಟು ರೋಮಾಂಚನಗೊಳಿಸಿದೆ'' ಎಂದು ಶ್ವೇತಾ ತಿವಾರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸದ್ಯ ಬಿಗ್ ಬಾಸ್‌ಗಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಕಾಮನ್‌ಮ್ಯಾನ್ ಹಾಗು ಸೆಲೆಬ್ರಿಟಿಗಳು ಎಂಬ ಸೂತ್ರವನ್ನು ಆಧರಿಸಿ ಸ್ಪರ್ಧಿಗಳ ಹುಡುಕಾಟ ಆರಂಭಿಸಿದೆ ಬಿಗ್ ಬಾಸ್ ತಂಡ.

More from Filmibeat

English summary
Bigg Boss season 15 to be launched on OTT ahead of television premiere. Confirms Voot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X