For Quick Alerts
  ALLOW NOTIFICATIONS  
  For Daily Alerts

  ಆರ್ಯವರ್ಧನ್‌ಗೆ ಪುಟ್ಟಗೌರಿ ಪ್ರಪೋಸ್: 2 ದಿನ ಟೈಂ ಕೇಳಿದ ನಂಬರ್ ಗುರೂಜಿ!

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್ ಬಾಸ್ ಕನ್ನಡ ಓಟಿಟಿ ಕರ್ನಾಟಕದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಇಲ್ಲಿವರೆಗೂ ಟಿವಿಯಲ್ಲಿ ನೋಡಿದಕ್ಕಿಂತಲೂ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿದೆ. 16 ಕಂಟೆಸ್ಟೆಂಟ್‌ಗಳೂ ಬಿಗ್ ಬಾಸ್ ಮನೆಯಲ್ಲಿ ಬೋಲ್ಡ್ ಆಗಿ ಆಡುತ್ತಿದ್ದಾರೆ. ಮನೆಯೊಗೆ ಎಂಟ್ರಿ ಕೊಟ್ಟ ಎರಡೇ ದಿನಗಳಲ್ಲಿ ಕಾವು ಏರಿದೆ.

  ಮನೆಯೊಳಗೆ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಆಕ್ಟಿವ್ ಆಗಿದ್ದಾರೆ. ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಟಾಸ್ಕ್ ಕೂಡ ಶುರುವಾಗಿದೆ. ಈ ಟಾಸ್ಕ್‌ನಲ್ಲಿ ಕೆಲವರಿಗೆ ಪೆಟ್ಟಾಗಿದೆ. ಮತ್ತೆ ಕೆಲವರ ನಡುವೆ ಕಿತ್ತಾಟ ಶುರುವಾಗಿದೆ. ಅಸಮಧಾನ, ಬೈಗುಳ, ಫೈಟ್ ಎಲ್ಲವನ್ನೂ ನೋಡುವುದಕ್ಕೆ ಸಿಗುತ್ತಿದೆ. ಅದರಲ್ಲೂ ಆರ್ಯವರ್ಧನ್, ಸೋನು ಶ್ರೀನಿವಾಸ್ ಗೌಡ, ಸಾನ್ಯಾ ಐಯ್ಯರ್ ಹಾಗೂ ರಾಕೇಶ್ ಅಡಿಗ ಈಗಾಗಲೇ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

  Bigg Boss Kannada OTT: ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಅರ್ಜುನ್ ರಮೇಶ್!Bigg Boss Kannada OTT: ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಅರ್ಜುನ್ ರಮೇಶ್!

  ಆರ್ಯವರ್ಧನ್ ಹಾಗೂ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಚರ್ಚೆಯಾಗುತ್ತಿದೆ. ಆರ್ಯವರ್ಧನ್ ಹಾಗೂ ಸೋನು ಇಬ್ಬರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿದ್ದಕ್ಕೆ ಕಿಡಿಕಾರುತ್ತಿದ್ದಾರೆ. ಹೊರಗಡೆ ವಿರೋಧ ಇದ್ದರೂ, ಮನೆಯೊಳಗೆ ಇವರಿಬ್ಬರೂ ಮನರಂಜನೆ ನೀಡುತ್ತಿದ್ದಾರೆ. ಈ ಮಧ್ಯೆ ಆರ್ಯವರ್ಧನ್ ಹಾಗೂ ಸಾನ್ಯಾ ಐಯ್ಯರ್ ನಡುವೆ ನಡೆದ ಸಂಭಾಷಣೆ ಇದೂವರೆಗಿನ ಹೈಲೈಟ್ ಎನಿಸಿಕೊಂಡಿದೆ.

   ಗುರೂಜಿಗೆ ಪುಟ್ಟಗೌರಿ ಪ್ರಪೋಸ್

  ಗುರೂಜಿಗೆ ಪುಟ್ಟಗೌರಿ ಪ್ರಪೋಸ್

  ನಂಬರ್ ಗುರೂಜಿ ಆರ್ಯವರ್ಧನ್ ಬಗ್ಗೆ ಮನೆ ಹೊರಗಡೆ ವಿರೋಧವಿದೆ. ಆದರೆ, ಮನೆಯೊಳಗೆ ಎಲ್ಲರೂ ಗುರೂಜಿ ಜೊತೆ ಹೊಂದಿಕೊಂಡಿದ್ದಾರೆ. ಆರ್ಯವರ್ಧನ್ ಗುರೂಜಿ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಗೆಟಪ್ ಬದಲಾಯಿಸಿಕೊಂಡಿದ್ದಾರೆ. ತಲೆ ಬೋಳಿಸಿಕೊಂಡು, ಶೇವ್ ಮಾಡಿಕೊಂಡು ಕ್ಲೀನ್ ಆಗಿದ್ದಾರೆ. ಇದೇ ವೇಳೆ ಉಳಿದ ಸ್ಪರ್ಧಿಗಳೊಂದಿಗೆ ಬೆರೆಯುತ್ತಿದ್ದಾರೆ. ಈ ವೇಳೆ ಆರ್ಯವರ್ಧನ್ ಉತ್ಸಾಹಕ್ಕೆ ಹಾಗೂ ಹಾಸ್ಯ ಪ್ರವೃತ್ತಿ ಎಲ್ಲರಿಗೂ ಇಷ್ಟ ಆಗಿದೆ. ಹೀಗಾಗಿ ಉಳಿದ ಸ್ಪರ್ಧಿಗಳು ಗುರೂಜಿಯನ್ನು ರೋಮ್ಯಾಂಟಿಕ್ ಮೂಡಿಗೆ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ. ಹಾಗಾಗಿಯೇ 22 ವರ್ಷದ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಐಯ್ಯರ್ ಗುರೂಜಿಗೆ ಪ್ರಪೋಸ್ ಮಾಡಿದ್ದಾರೆ.

  Bigg Boss Kannada OTT: ಕ್ಯಾಪ್ಟೆನ್ಸಿಗಾಗಿ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್!Bigg Boss Kannada OTT: ಕ್ಯಾಪ್ಟೆನ್ಸಿಗಾಗಿ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್!

   'ನನ್ನ ಬಾಳಲ್ಲಿ ಬರುತ್ತೀರಾ?'

  'ನನ್ನ ಬಾಳಲ್ಲಿ ಬರುತ್ತೀರಾ?'

  ಆರ್ಯವರ್ಧನ್ ಗುರೂಜಿಯನ್ನು ರೊಮ್ಯಾಂಟಿಕ್ ಮೂಡ್‌ಗೆ ತಂದು ಮಜಾ ತಂದು ಕೊಡಲು ಉಳಿದವರು ಯತ್ನ ನಡೆಸಿದ್ದರು. ಆಗ ಆರ್ಯವರ್ಧನ್ ಕೂಡ ಇದನ್ನು ಸವಾಲಾಗಿ ಸ್ವೀಕರಿಸಿದ್ದರು. ಈ ವೇಳೆ ಸಾನ್ಯಾ ಹಾಗೂ ಆರ್ಯವರ್ಧನ್ ನಡೆವೆ ರೋಮ್ಯಾಂಟಿಕ್ ಸಂಭಾಷಣೆ ನಡೀತು. ಸಾನ್ಯಾ ನಂಬರ್‌ ಗುರೂಜಿಗೆ ಆರ್ಯವರ್ಧನ್‌ಗೆ " ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಬಂದಿದ್ದೀರಾ. ಹಾಗೆ ನನ್ನ ಬಾಳಲ್ಲೂ ನೀವೆ ಮೊದಲನೆಯವರಾಗಿ ಬರಬೇಕು." ಎಂಬರ್ಥದಲ್ಲಿ ಮಾತು ಆರಂಭಿಸಿದ್ದರು. ಈ ವೇಳೆ ಆರ್ಯವರ್ಧನ್ ಕೂಡ ರೊಮ್ಯಾಂಟಿಕ್ ಆಗಿ ಮನೆಯಲ್ಲಿ ದೀಪ ಹಚ್ಚುವವರಿರಲಿಲ್ಲ. ಅಡುಗೆ ಮಾಡುವವರಿಲ್ಲ. ಆ ಸ್ಥಾನ ನಿಮಗೆ." ಎಂದು ಹೇಳಿದ್ದರು. ತಕ್ಷಣವೇ " ನೀವು ಕಂದನಂತೆ ಇದ್ದಿರಿ.. ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುತ್ತೀರಾ?" ಎಂದಾಗ ಆರ್ಯವರ್ಧನ್ ಜಾರಿಕೆಯ ಉತ್ತರ ನೀಡಿ ಎಸ್ಕೆಪ್ ಆಗಿದ್ದಾರೆ.

   ಆರ್ಯವರ್ಧನ್‌ರಿಂದ 2 ದಿನ ಗಡುವು

  ಆರ್ಯವರ್ಧನ್‌ರಿಂದ 2 ದಿನ ಗಡುವು

  ಸಾನ್ಯಾ ಐಯ್ಯರ್ ಪ್ರಪೋಸ್ ಮಾಡುತ್ತಿದ್ದಂತೆ ಆರ್ಯವರ್ಧನ್ ಹುಷಾರಾಗಿದ್ದಾರೆ. ತಮ್ಮ ಇಮೇಜಿಗೂ ಧಕ್ಕೆ ಆಗದಂತೆ. ಇತ್ತ ಮನೆಯಲ್ಲೂ ಡಮ್ಮಿ ಆಗದಂತೆ ಎಚ್ಚರಿಕೆಯ ಉತ್ತರ ನೀಡಿದ್ದಾರೆ. " ನಾನು ತುಂಬಾ ಮುದ್ದಾಗಿದ್ದೀನಿ, ಕಂದನ ತರ ಇದ್ದೀರಾ, ಕ್ಯೂಟ್ ಆಗಿ ಇದ್ದೀರಾ ಅಂತ ನೀವು ಹೇಳಿದ್ದೀರ.. ಅದನ್ನು ಒಪ್ಪಿಕೊಳ್ಳೋಕೆ ಎರಡು ದಿನ ಸಮಯ ಕೊಡಿ." ಅಂತ ಹೇಳಿದ್ದಾರೆ. ಆರ್ಯವರ್ಧನ್ ರೊಮ್ಯಾಂಟಿಕ್ ಆಗದೇ ಹೋದರೂ, ಸ್ಪರ್ಧಿಗಳನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಸಾನ್ಯಾಗೆ ಜಿರಳೆ ವೀಕ್ನೆಸ್

  ಸಾನ್ಯಾಗೆ ಜಿರಳೆ ವೀಕ್ನೆಸ್

  ಸಾನ್ಯಾ ಐಯ್ಯರ್‌ಗೆ ವೀಕ್ನೆಸ್ ಬಿಗ್ ಬಾಸ್ ಕಂಟೆಸ್ಟೆಂಟ್ ರೂಪೇಶ್ ಹಾಗೂ ಹಲವರಿಗೆ ಗೊತ್ತಾಗಿ ಹೋಗಿದೆ. ಅವರಿಗೆ ಜಿರಳೆ ಹಾಗೂ ಹಾವು ಅಂದರೆ ಆಗಲ್ಲ ಅನ್ನೋ ರಿವೀಲ್ ಆಗಿದೆ. ಹೀಗಾಗಿ ಸಾನ್ಯಾರನ್ನು ರೂಪೇಶ್ ಶೆಟ್ಟಿ ಗೋಳಾಡಿಸಿದ್ದಾರೆ. ಸಾನ್ಯಾರನ್ನು ಕಿಚಾಯಸಿದ್ದಾರೆ. ಆರ್ಯವರ್ಧನ್, ಸಾನ್ಯಾ ಹಾಗೂ ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಮೂರು ಮಂದಿ ಸಖತ್ ಎಂಟರ್‌ಟೈನ್ ಮಾಡುತ್ತಿದ್ದಾರೆ.

  English summary
  Bigg Boss Kannada OTT: Aryavardhan Took 2 Days Time For Sanya Iyer Proposal, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X