Bigg Boss Kannada OTT: ಸೋನು ಕೊಟ್ಟ ಶಾಕ್‌ಗೆ ಆರ್ಯವರ್ಧನ್ ನಿಜವಾಗಿಯೂ ಪ್ರಜ್ಞೆ ತಪ್ಪಿದ್ರಾ?

By ಎಸ್ ಸುಮಂತ್

ಲೈಫ್ ನಲ್ಲಿ ತಮಾಷೆ, ಹುಡುಗಾಟ ಎಲ್ಲವೂ ಇರಬೇಕು. ಆಗಲೇ ಲೈಫ್ ಮಜವಾಗಿರುವುದು. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಇರುವುದು ಸದ್ಯ ಹನ್ನೊಂದು ಜನ. ಹನ್ನೊಂದು ಜನರ ನಡುವೆಯೇ ಸ್ನೇಹ, ಪ್ರೀತಿ, ಆಟ, ಟೈಮ್ ಪಾಸ್ ಎಲ್ಲವೂ ಇರಲಿದೆ. ಹೊರಗಿನ ಪ್ರಪಂಚದ ಟಚ್ ಕೂಡ ಅವರಿಗೆ ಇರುವುದಿಲ್ಲ. ಹೀಗಾಗಿ ಒಂದಷ್ಟು ತಮಾಷೆ ಇದ್ದರೆ ಸಮಯವನ್ನು ಬಹಳ ಸುಲಭದಲ್ಲಿ ಕಳೆಯಬಹುದು. ಅದೇ ರೀತಿ ಯೋಚನೆ ಮಾಡಿದ ಸೋನು ತಮಾಷೆ ಮಾಡಲು ಹೋಗಿ ಆರ್ಯವರ್ಧನ್ ಜೀವಕ್ಕೆ ಕಂಟಕ ತಂದು ಬಿಟ್ಟಿದ್ದಳು.

ಆರ್ಯವರ್ಧನ್ ಅವರ ನಿಜವಾದ ಸ್ಥಿತಿ ನೋಡಿದವರು ಇದು ಸೂಪರ್ ಆಕ್ಟಿಂಗ್ ಎಂದೇ ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದು ಬೇರೆಯೇ ಆಗಿತ್ತು. ಇನ್ನೊಂದು ಸ್ವಲ್ಪ ಸಮಯ ತಮಾಷೆ ಎಂದು ಭಾವಿಸಿದ್ದರೆ ಆರ್ಯವರ್ಧನ್ ಗುರೂಜಿ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಪ್ಲ್ಯಾನ್ ಏನಾಗಿತ್ತು..? ಸುಳ್ಳಾಗಬೇಕಿದ್ದ ಜಾಗದಲ್ಲಿ ಸತ್ಯ ಆಗಿದ್ದು ಹೇಗೆ ಎಂಬುದಕ್ಕೆಲ್ಲಾ ಉತ್ತರ ಸಿಕ್ಕಿದೆ.

ಸೋನು ಯಡವಟ್ಟಿನಿಂದಾಗಿದ್ದು ಏನು?

ಸೋನು ಯಡವಟ್ಟಿನಿಂದಾಗಿದ್ದು ಏನು?

ಸೋನುಗೆ ಸೀರಿಯಸ್ ಆಗಿ ಇರುವುದು ಗೊತ್ತಿಲ್ಲದೆ ಇರುವಂಥ ಸತ್ಯ. ಅದೇ ಕ್ರೇಜ್ ನಲ್ಲಿ ಆರ್ಯವರ್ಧನ್ ಗುರೂಜಿಗೆ ಪ್ರಾಂಕ್ ಮಾಡಲು ಫ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ದೆವ್ವದಂತೆ ವೇಷ ಧರಿಸಿ ಅವರನ್ನು ಹೆದರಿಸುವ ಟಾಸ್ಕ್ ಅದಾಗಿತ್ತು. ಅದರಂತೆ ಸೋನು ಪಕ್ಕಾ ದೆವ್ವದಂತೆ ರೆಡಿ ಆಗಿದ್ದಳು. ಆದರೆ ಅದು ತಮಾಷೆ ಮಾಡಲು ಹೋಗಿ ಸೀರಿಯಸ್ ಸಮಸ್ಯೆ ಉಂಟಾಗಿತ್ತು.

ನಿಜವಾಗಲೂ ಹೆದರಿದರಾ?

ನಿಜವಾಗಲೂ ಹೆದರಿದರಾ?

ಈ ಫ್ಲ್ಯಾನ್ ರಾಕೇಶ್ ಹಾಗೂ ರೂಪೇಶ್‌ಗೆ ಗೊತ್ತಿತ್ತು. ಉಲ್ಟಾ ಪ್ರಾಂಕ್ ಮಾಡುವ ಫ್ಲ್ಯಾನ್ ಮಾಡಿದ್ದರು. ಅದರ ಭಾಗವಾಗಿ ಇದನ್ನು ಹೋಗಿ ಆರ್ಯವರ್ಧನ್ ಅವರಿಗೂ ಹೇಳಿದ್ದರು. ಒಳ್ಳೆ ಆಕ್ಟಿಂಗ್ ಮಾಡಿ, ಅವರಿಗೆ ಹೆದರಿಸಬೇಕು ಎಂದಿದ್ದರು. ಅದರಂತೆ ಸೋನು ಬಂದಾಗ ಗುರೂಜಿ ಬಿದ್ದೆ ಹೋದರು. ಎಷ್ಟು ಸಲ ಎಚ್ಚರಿಸಿದರು ಎದ್ದೇಳುತ್ತಿಲ್ಲ. ಮನೆಯವರೆಲ್ಲಾ ಹೆದರಿಯೇ ಬಿಟ್ಟಿದ್ದರು. ಆದರೆ ಅದು ಸತ್ಯ ಕೂಡ ಆಗಿತ್ತು.

ಆರ್ಯವರ್ಧನ್ ಬಳಿ ಕ್ಷಮೆ

ಆರ್ಯವರ್ಧನ್ ಬಳಿ ಕ್ಷಮೆ

ಆರ್ಯವರ್ಧನ್ ನಿಜವಾಗಲೂ ಈ ರೀತಿಯ ಸಮಸ್ಯೆ ಎದುರಿಸಿದ್ದಾರೆ ಎಂದು ಗೊತ್ತಾಗಿದ್ದು ಸುದೀಪ್ ಸಮ್ಮುಖದಲ್ಲಿ. ಸುದೀಪ್ ಅವತ್ತು ಏನಾಯಿತು ಎಂದು ಕ್ಲಾರಿಟಿ ಕೇಳಿದಾಗ ಆರ್ಯವರ್ಧನ್ ಗೆ ನಿಜವಾಗಲೂ ಪ್ರಜ್ಞೆ ತಪ್ಪಿದ್ದನ್ನು ರೂಪೇಶ್ ಮತ್ತು ರಾಕೇಶ್ ಹೇಳಿದ್ದರು. ಬಳಿಕ ಸೋನುಗೆ ಈ ರೀತಿಯ ಫ್ರಾಂಕ್ ಇನ್ನು ಮುಂದೆ ಮಾಡಬೇಡಿ ಎಂದು ಸುದೀಪ್ ಸಲಹೆ ನೀಡಿದರು. ಆಗ ಸೋನು ಮತ್ತು ಅಕ್ಷತಾ ಇಬ್ಬರು ಕ್ಷಮೆಯಾಚಿಸಿದ್ದಾರೆ.

ಆರ್ಯವರ್ಧನ್‌ಗೆ ದೆವ್ವದ ಭಯ

ಆರ್ಯವರ್ಧನ್‌ಗೆ ದೆವ್ವದ ಭಯ

ನನಗೆ ದೆವ್ವ ಎಂದರೆ ತುಂಬಾ ಭಯ ಪಡುತ್ತೀನಿ. ಸೋನು ಬಂದಾಗ ವಿಕಾರವಾಗಿ ಕಂಡಿತು ತಕ್ಷಣ ಬಿದ್ದು ಬಿಟ್ಟೆ, ಆಮೇಲೆ ಇವರೆಲ್ಲ ಕರೆದು ತಂದು ಮಲಗಿಸಿದ್ದರು ಎಂದು ಗುರೂಜಿ ಹೇಳಿದ್ದಾರೆ. ಆಗ ಸುದೀಪ್ ನಿಮಗೆ ಏನು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ. ನೀವೂ ಯಾವುದಕ್ಕೂ ಹೆದರಬೇಡಿ. ಇಲ್ಲಿ ನಮ್ಮನ್ನು ಹೊರತುಪಡಿಸಿ 300 ಜನ ನಿಮ್ಮ ಕಾವಲಿಗಿದ್ದಾರೆ ಎಂದು ಧೈರ್ಯ ತುಂಬಿದರು. ಇಲ್ಲಿ ಎರಡೇ ದೆವ್ವ ಇರುವುದು. ಪಿಂಕ್ ಕಲರ್ ಹಾಕಿರುವ ದೆವ್ವ ಹಾಗೂ ಹಸಿರು ಬಣ್ಣ ತೊಟ್ಟಿರುವ ದೆವ್ವ. ಹೀಗಾಗಿ ಹೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

More from Filmibeat

English summary
Bigg Boss Kannada OTT August 28th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X