For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ನಿಲ್ತಿಲ್ಲಪ್ಪಾ ನಂದಿನಿ ಮತ್ತು ಜಯಶ್ರೀ ಫೈಟ್!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಪಕ್ಕಾ ದುಷ್ಮನ್ ಗಳಂತೆ ಆಗಿರುವುದು ನಂದಿನಿ ಹಾಗೂ ಜಯಶ್ರೀ. ನಂದಿನಿ ಯಾವುದನ್ನು ಕ್ಯಾರೆ ಮಾಡುವುದಕ್ಕೆ ಹೋಗುವುದಿಲ್ಲ. ಆದಷ್ಟು ಅಲ್ಲಿರುವ ಸಮಸ್ಯೆ ಏನು ಎಂದು ಅರ್ಥ ಮಾಡಿಕೊಂಡು ಸರಿ ಮಾಡುವುದಕ್ಕೆ ಯತ್ನಿಸುತ್ತಾಳೆ. ಅದೇ ಹಾದಿಯಲ್ಲಿ ಯೋಚನೆ ಮಾಡಿದಾಗ ಜಯಶ್ರೀ ವಿಚಾರವೂ ಸಿಗುತ್ತದೆ. ಅದಕ್ಕೆಂದೇ ನಂದಿನಿ ಹಲವು ಬಾರಿ ಮಾತುಕತೆಯಲ್ಲಿ ಸರಿ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದಾಳೆ. ಆದರೆ ಅದು ಯಾವತ್ತಿಗೂ ಫಲಪ್ರದವಾಗಿ ಕಂಡಿಲ್ಲ. ಜಯಶ್ರೀ ಮೆಂಟಾಲಿಟಿಯೂ ಬದಲಾಗುವುದಿಲ್ಲ.

  ಜಯಶ್ರೀಗೆ ನಂದಿನಿ ಮುಖ ಕಂಡರು ಆಗುತ್ತಿಲ್ಲ. ಅವಳನ್ನು ನೋಡಿದರೂ ಏನಾದರೊಂದು ಜಗಳ ಮಾಡುತ್ತಿದ್ದಾಳೆ. ಅದ್ಯಾಕೋ ಪಕ್ಕಾ ಟಾರ್ಗೆಟ್ ಆದಂತೆ ಆಗಿದ್ದಾರೆ ಒಬ್ಬರಿಗೊಬ್ಬರು. ಕಳೆದ ವಾರದ ಕಿಚ್ಚ ಸುದೀಪ್ ಎಪಿಸೋಡಿನಲ್ಲಿ ಜಯಶ್ರೀಯ ಕೆಲವೊಂದು ರೂಡ್ ಎನಿಸುವ ನಡವಳಿಕೆಯ ಬಗ್ಗೆ ಈಗಾಗಲೇ ಸುದೀಪ್ ಬುದ್ಧಿ ಮಾತು ಹೇಳಿದ್ದಾರೆ. ಆದರೆ ಬದಲಾಗುತ್ತೀನಿ ಎಂದಿದ್ದ ಜಯಶ್ರೀ ಅದ್ಯಾಕೋ ಬದಲಾಗುವ ಲಕ್ಷಣಗಳೇ ಕಾಣುತ್ತಿಲ್ಲ.

  Bigg Boss Kannada OTT: ರೂಪೇಶ್‌ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!Bigg Boss Kannada OTT: ರೂಪೇಶ್‌ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!

  ಜಯಶ್ರೀಗ್ಯಾಕೆ ನಂದಿನಿ ಕಂಡರೆ ಆಗಲ್ಲ?

  ಜಯಶ್ರೀಗ್ಯಾಕೆ ನಂದಿನಿ ಕಂಡರೆ ಆಗಲ್ಲ?

  ನಂದಿನಿ ಬಂದಾಗಿನಿಂದ ಆಕ್ಟಿವ್‌ ಆಗಿಯೇ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಾರೆ. ಆದರೆ ಸ್ವಲ್ಪ ಮನೆಯಲ್ಲಿ ರೋಡೀಸ್ ಶೋ ಬಳಕೆಯಾಗಿದ್ದೆ ಜಯಶ್ರೀಯ ಕೋಪಕ್ಕೆ ಕಾರಣವಾಗಿರಬಹುದು ಅಥವಾ ನಂದಿನಿ ಆ ರೀತಿ ಇರುವುದನ್ನು ಜಯಶ್ರೀ ಸಹಿಸಿಕೊಳ್ಳಲು ಆಗದೆ ಇರಬಹುದು. ಅದರ ಜೊತೆಗೆ ಜಶ್ವಂತ್ ಕ್ಯಾಪ್ಟನ್ ಆದ ಬಳಿಕ ನಂದಿನಿಗೆ ಕೊಟ್ಟ ಪ್ರಿಫರೆನ್ಸ್ ಜಯಶ್ರೀಗೆ ಮತ್ತಷ್ಟು ದ್ವೇಷದ ಭಾವನೆ ಹೆಚ್ಚು ಮಾಡಿದೆ.

  ನಂದಿನಿಯ ತಮಾಷೆಗೂ ಕಿರಿಕಿರಿ

  ನಂದಿನಿಯ ತಮಾಷೆಗೂ ಕಿರಿಕಿರಿ

  ನಂದಿನಿಯನ್ನು ಬಿಗ್ ಬಾಸ್ ಮನೆಯಲ್ಲಿ ಗಮನಿಸಿದರೆ ಎಷ್ಟು ಖುಷಿ ಖುಷಿಯಾಗಿರುತ್ತಾಳೆ ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಟೀಂ ಗೆದ್ದರಂತು ಕುಣಿದು ಕುಪ್ಪಳಿಸಿ ಬಿಡುತ್ತಾಳೆ. ಅದರಂತೆ ಜಶ್ವಂತ್ ಬಗ್ಗೆಯೂ ಆಗಾಗ ರೇಗಿಸುತ್ತಾ ಇರುತ್ತಾಳೆ. ಆಟ ಗೆದ್ದ ಬಳಿಕ ನಮ್ಮ ಹುಡುಗ ಇದ್ದಿದ್ದಕ್ಕೆ ಗೆದ್ದಿದ್ದು ಎಂದಿದ್ದಾಳೆ. ಈ ಮಾತು ಜಯಶ್ರೀಗೆ ಕೆಂಡಾಮಂಡಲವಾಗುವಂತೆ ಮಾಡಿದೆ. ಎಷ್ಟೇ ಬಿಡಿಸಿ ಹೇಳಿದರೂ ಕೇಳುವ ಉಸಾಬರಿಗೆ ಜಯಶ್ರೀ ಹೋಗುತ್ತಿಲ್ಲ. ಆದರೆ ಹೇಳಿದ್ದನ್ನಷ್ಟೇ ವಾದವಾಗಿ ಮಾಡುತ್ತಿದ್ದಾಳೆ.

  ಯಾವ ಆಟದಿಂದ ಶುರುವಾಯ್ತು ಜಗಳ?

  ಯಾವ ಆಟದಿಂದ ಶುರುವಾಯ್ತು ಜಗಳ?

  ಯಾವುದೇ ಆಟ ಅಂತ ಬಂದಾಗಲೂ ಎರಡು ಟೀಂ ಆಗಲೇಬೇಕು. ಅದೇ ರೀತಿ ಆಗುತ್ತೆ. ಈಗ ಎರಡು ಕೈನಲ್ಲಿ ಬಾಲ್ ಬ್ಯಾಲೆನ್ಸ್ ಮಾಡುವ ಆಟದಲ್ಲಿ ರೂಪೇಶ್ ಒಂದು ಟೀಂ ಜಶ್ವಂತ್ ಒಂದು ಟೀಂ ಆಗಿದ್ದರು. ಆದರೆ ಬ್ಯಾಲೆನ್ಸ್‌ನಲ್ಲಿ ಸ್ವಲ್ಪ ಮಿಸ್ ಆಗಿದ್ದಕ್ಕೆ ರೂಪೇಶ್ ಫೇಲ್ ಆದರೂ ಜಶ್ವಂತ್ ಗೆದ್ದರು. ಈ ಸಂದರ್ಭದಲ್ಲಿ ನಂದಿನಿ ನನ್ನ ಹುಡುಗ ಇದ್ದಿದ್ದಕ್ಕೆ ಗೆದ್ದಿದ್ದು ಎಂದಿದ್ದಾಳೆ. ಇದನ್ನು ಜಯಶ್ರೀ ಹಿಡಿದುಕೊಂಡು ಅದು ತಪ್ಪು ಅದು ತಪ್ಪು ಎಂದು ವಾಸಿಸುತ್ತಿದ್ದಾಳೆ.

  ರೂಪೇಶ್ ಮಾತಿನಿಂದ ಸುಮ್ಮನಾಗುತ್ತಾರಾ?

  ರೂಪೇಶ್ ಮಾತಿನಿಂದ ಸುಮ್ಮನಾಗುತ್ತಾರಾ?

  ಜಯಶ್ರೀ ಅಷ್ಟೆಲ್ಲಾ ಹೇಳಿದರೂ ನಂದಿನಿ ಕ್ಲಾರಿಟಿ ಕೊಡುವುದಕ್ಕೆ ನೋಡಿದ್ದಾಳೆ. ನಿಂಗೆ ರೇಗಿಸಬಹುದಾ? ನಾನು ಫನ್ ಆಗಿ ಹೇಳಿದ್ದು ನೀನು ಹೇಗೆ ಬೇಕಾದರೂ ತಗೋ ಅಂತ ನಂದಿನಿ ಹೇಳಿದ್ದಾರೆ. ಆದರೆ ಜಯಶ್ರೀ ಅದೇ ವಾದ ಮಂಡಿಸಿದ್ದು, ನಮ್ಮ ಹುಡುಗ ಇದ್ದಿದ್ದಕ್ಕೆ ಗೆದ್ದಿದ್ದು ಎಂದು ಹೇಳುವುದು ಬೇರೆ. ನಮ್ಮ ಹುಡುಗನಿಂದಲೇ ಗೆದ್ದಿದ್ದು ಅಂತ ಹೇಳುವುದು ಬೇರೆ ಎಂದಾಗ, ಅಲ್ಲೆ ಇದ್ದ ರೂಪೇಶ್ ಮಧ್ಯ ಪ್ರವೇಶಿಸಿದ್ದಾರೆ. ನಂದಿನಿಗೆ ಸಮಾಧಾನ ಮಾಡಿದ ರೂಪೇಶ್ ಸರಿ ಬಿಡು ನೀನು ತಮಾಷೆಯಾಗಿ ತಾನೇ ಹೇಳಿದ್ದು. ಅದು ಅವಳಿಗೆ ಅರ್ಥ ಆಗಲ್ಲ ಎಂದಾಗ ಬಿಟ್ಟು ಬಿಡು ಎಂದಿದ್ದಾನೆ.

  English summary
  Bigg Boss Kannada OTT August 30th Episode Written Update. Here is the details about Nandini and Jayashree fight.
  Tuesday, August 30, 2022, 18:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X