For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಆರ್ಯವರ್ಧನ್ ಕೊಡ್ತಿರೋ ಮನರಂಜನೆಗೆ ವೀಕ್ಷಕರು ಸುಸ್ತೋ ಸುಸ್ತು!

  |

  ಈ ಬಾರಿ ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ಇಂಟ್ರಡ್ಯೂಸ್ ಆಗಿದೆ. ದಕ್ಷಿಣ ಭಾರತದಲ್ಲೇ ಈ ಪ್ರಯತ್ನಕ್ಕೆ ಮುಂದಾಗಿದ್ದು ಇದೇ ಮೊದಲು. ಈಗಾಗಲೇ ಹಲವು ವಾರಗಳು ಕಳೆದಿದ್ದು ಕೊನೆಯ ಹಂತಕ್ಕೆ ಪ್ರವೇಶಿಸಿದೆ. 24 ಗಂಟೆಗಳ ಕಾಲ ನಿರಂತರವಾಗಿ ಬಿಗ್ ಬಾಸ್ ಕನ್ನಡ ಓಟಿಟಿ ಪ್ರಸಾರ ಆಗಿದೆ.

  ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್‌ನಲ್ಲಿ ಬಂದಿರೋ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಡಿಫ್ರೆಂಟ್. ಇವರೆಲ್ಲರೂ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಆಟ ಆಡೋದರಲ್ಲಿ, ಕಿತ್ತಾಡೋದರಲ್ಲಿ, ಪ್ರೇಕ್ಷಕರಿಗೆ ಮನರಂಜನೆ ನೀಡೋದರಲ್ಲಿ ಹಿಂದೆ ಬಿದ್ದಿಲ್ಲ. ಎಂದಿನಂತೆ ನಾವೇನು ಕಮ್ಮಿ ಇಲ್ಲ ಅಂತಾನೇ ಭರ್ಜರಿಯಾಗಿ ಆಟ ಆಡುತ್ತಿದ್ದಾರೆ. ಅದರಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಒಬ್ಬರು.

  Bigg Boss Kannada OTT : ನಾವೇನು ನಿನ್ನ ಗುಲಾಮರಲ್ಲ ಎಂದು ಸೋನು ವಿರುದ್ಧ ರೊಚ್ಚಿಗೆದ್ದ ಸಾನ್ಯಾBigg Boss Kannada OTT : ನಾವೇನು ನಿನ್ನ ಗುಲಾಮರಲ್ಲ ಎಂದು ಸೋನು ವಿರುದ್ಧ ರೊಚ್ಚಿಗೆದ್ದ ಸಾನ್ಯಾ

  ನಂಬರ್ ಗುರೂಜಿ ಆರ್ಯವರ್ಧನ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗ ಬೈದವರೇ ಹೆಚ್ಚು. ಆದ್ರೀಗ ಇದೇ ಆರ್ಯವರ್ಧನ್ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್ ಫೈನಲ್ ಪ್ರವೇಶಿಸುತ್ತಿದ್ದಂತೆ ಆರ್ಯವರ್ಧನ್ ಗಮನ ಸೆಳೆಯಲು ಆರಂಭಿಸಿದ್ದಾರೆ. ಇಲ್ಲಿವರೆಗೂ ಆರ್ಯವರ್ಧನ್ ಬಿಗ್ ಬಾಸ್ ಮನೆಯೊಳಗಿನ ಜರ್ನಿ ಹೀಗಿದೆ.

  ಸ್ವಿಮ್ಮಿಂಗ್ ಪೂಲ್‌ನಲ್ಲಿ ಆರ್ಯವರ್ಧನ್

  ಸ್ವಿಮ್ಮಿಂಗ್ ಪೂಲ್‌ನಲ್ಲಿ ಆರ್ಯವರ್ಧನ್

  ಆರ್ಯವರ್ಧನ್ ಮಾತಿನ ಶೈಲಿಗೆ ಮನೆಯೊಳಗಿರುವ ಸ್ಪರ್ಧಿಗಳು ಫಿದಾ ಆಗಿದ್ದಾರೆ. ತಮ್ಮ ಮಾತಿನಿಂದ ನಗೆಗಡಲಲ್ಲಿ ತೇಲಿಸುವ ಆರ್ಯವರ್ಧನ್ ಮನರಂಜನೆ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ನಾನು ಅಂದರೆ, ನಂಬರ್.. ನಂಬರ್ ಅಂದರೆ ನಾನು ಅನ್ನೋ ಆರ್ಯವರ್ಧನ್ ಪ್ರತಿಸ್ಪರ್ಧಿಗಳಿಗಿಂತ ಮೊದಲೇ ಸ್ವಿಮ್ಮಿಂಗ್ ಪೂಲ್‌ಗೆ ಧುಮುಕಿ ವೀಕ್ಷಕರನ್ನು ರಂಜಿಸಿದ್ದಾರೆ.

  Bigg Boss Kannada OTT: ಜಶು & ನಂದು ದೂರ ಮಾಡಲು ಕಾಯುತ್ತಿದ್ದವರಿಗೆ ಖುಷಿ ಆಯ್ತಾ..?Bigg Boss Kannada OTT: ಜಶು & ನಂದು ದೂರ ಮಾಡಲು ಕಾಯುತ್ತಿದ್ದವರಿಗೆ ಖುಷಿ ಆಯ್ತಾ..?

  ಆರ್ಯವರ್ಧನ್ ಹೊಸ ಲುಕ್

  ಆರ್ಯವರ್ಧನ್ ಹೊಸ ಲುಕ್

  ಆರ್ಯವರ್ಧನ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕಿಂತ ಮುನ್ನ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆರ್ಯವರ್ಧನ್ ಫುಲ್ ಸ್ಟೈಲಿಶ್ ಆಗಿದ್ದಾರೆ. ಗಡ್ಡ ತೆಗೆದು ಹೊಸ ಲುಕ್ ಕೊಟ್ಟಿದ್ದರು. ಈ ಲುಕ್ ಬಿಗ್ ಬಾಸ್ ಸ್ಪರ್ಧಿಗಳಿಗೂ ಇಷ್ಟ ಆಗಿತ್ತು. ಆರ್ಯವರ್ಧನ್ ತಮ್ಮ ಆಟವನ್ನು ತಾವು ಆಡುತ್ತಾ, ಸೋಲು ಗೆಲುವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ವೀಕ್ಷಕರಿಗಷ್ಟೇ ಅಲ್ಲ ಸ್ಪರ್ಧಿಗಳಿಗೂ ಕಿಕ್ ಕೊಟ್ಟಿದೆ.

  ಹೊಟ್ಟೆ ಕರಗಿಸೋ ಸವಾಲು

  ಹೊಟ್ಟೆ ಕರಗಿಸೋ ಸವಾಲು

  ಆರ್ಯವರ್ಧನ್ ಟಾಸ್ಕ್ ವೇಳೆ ಹೊಟ್ಟೆ ಬಿಟ್ಟುಕೊಂಡೇ ಕುಣಿದಾಡಿದ್ದರು. ಈ ವೇಳೆ ಬಿಗ್ ಬಾಸ್ ಓಟಿಟಿ ಸ್ಪರ್ಧಿಗಳು ಆರ್ಯವರ್ಧನ್ ಬಳಿ ಹೊಟ್ಟೆ ಬಗ್ಗೆ ಕಿಚಾಯಿಸಿದ್ದರು. ಅದನ್ನು ಸ್ಪೋಟಿವ್ ಆಗಿ ತೆಗೆದುಕೊಂಡ ಆರ್ಯವರ್ಧನ್ ಈ ಶೋ ಮುಗಿಯುವುದರೊಳಗಾಗಿ ಹೊಟ್ಟೆ ಕರಗಿಸುವುದಾಗಿ ಸವಾಲು ಹಾಕಿದ್ದಾರೆ. ಹೊಟ್ಟೆ ಸಿಕ್ಸ್ ಪ್ಯಾಕ್ ತರಿಸುತ್ತೇನೆ ಎಂದಿದ್ದು, ಆರ್ಯವರ್ಧನ್ ಮೆಚ್ಚುಗೆಗೆ ಕಾರಣವಾಗಿತ್ತು.

  Bigg boss Kannada OTT: ರಾಕೇಶ್ ಅಡಿಗ ಎದುರಾಳಿಗೆ ಶುಭಕೋರಿದ ಎಕ್ಸ್ ಗರ್ಲ್‌ಫ್ರೆಂಡ್ ದಿವ್ಯಾ ಸುರೇಶ್!Bigg boss Kannada OTT: ರಾಕೇಶ್ ಅಡಿಗ ಎದುರಾಳಿಗೆ ಶುಭಕೋರಿದ ಎಕ್ಸ್ ಗರ್ಲ್‌ಫ್ರೆಂಡ್ ದಿವ್ಯಾ ಸುರೇಶ್!

  ಆರ್ಯವರ್ಧನ್‌ಗೆ ಮೇಕ್‌ ಓವರ್

  ಆರ್ಯವರ್ಧನ್‌ಗೆ ಮೇಕ್‌ ಓವರ್

  ಆರ್ಯವರ್ಧನ್ ಮನರಂಜನೆ ನೀಡಿದ ಹಲವು ಘಟನೆಗಳಲ್ಲಿ ಜಯಶ್ರೀ ಮೇಕ್‌ ಓವರ್ ಕೂಡ ಒಂದು. ಬಿಗ್ ಬಾಸ್ ಕನ್ನಡ ಓಟಿಟಿ ಆರಂಭದ ದಿನಗಳಲ್ಲಿಯೇ ಆರ್ಯವರ್ಧನ್ ಗುರೂಜಿಗೆ ಜಯಶ್ರೀ ಮೇಕಪ್ ಮಾಡಿದ್ದರು. ಆ ಕ್ಷಣವನ್ನು ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿದ್ದರು.

  ಅಡುಗೆ ಮಾಡುವುದರಲ್ಲೂ ಎಕ್ಸ್‌ಪರ್ಟ್

  ಅಡುಗೆ ಮಾಡುವುದರಲ್ಲೂ ಎಕ್ಸ್‌ಪರ್ಟ್

  ಆರ್ಯವರ್ಧನ್ ಮೊದಲಿನಿಂದಲೂ ತಾವು ಬೇಕರಿಯಲ್ಲಿ ಕೆಲಸ ಮಾಡಿದ್ದರ ಬಗ್ಗೆ ಹೇಳಿದ್ದಾರೆ. ತಾವೊಬ್ಬ ಒಳ್ಳೆ ಕುಕ್ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಆರ್ಯವರ್ಧನ್ ಮಾಡುವ ವಡೆಗಳು, ಪಾಯಸ, ಸರಳ ವಿಧಾನದ ಅನ್ನ ಮತ್ತು ಸಾಂಬಾರ್‌ನಂತಹ ಖಾದ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. 'ವಾಗಲೂ ಪ್ರೀತಿಯಿಂದ ಅಡುಗೆ ಮಾಡು' ಅನ್ನೋ ಆರ್ಯವರ್ಧನ್ ಅಡುಗೆಯಲ್ಲೂ ಮಸ್ತ್ ಮನರಂಜನೆ ನೀಡೋದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಬಿಗ್ ಬಾಸ್ ಓಟಿಟಿ ಕನ್ನಡ ಗೆಲ್ಲುತ್ತಾರಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

  English summary
  Bigg Boss Kannada OTT Contestant Aryavardhan Guruji Is The Entertainer, Know More.
  Wednesday, September 14, 2022, 15:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X