Jayashree Aradhya: ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ 12ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ!
ಬಿಗ್ ಬಾಸ್ ಮನೆಗೆ ಮಾರಿಮುತ್ತು ಮೊಮ್ಮಗಳು ಎಂಟ್ರಿ ಕೊಟ್ಟಿದ್ದಾರೆ. ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ ಈಗಾಗಲೇ ಹಲವು ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಈಗ ಬಿಗ್ ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಉಪೇಂದ್ರ ಸಿನಿಮಾದಲ್ಲಿ 'ಮಾರಿಮುತ್ತು' ಪಾತ್ರ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಪರಿಚಯ ಆದವರು ಸರೋಜಮ್ಮ. ಇವರ ಮೊಮ್ಮಗಳೇ ಜಯಶ್ರೀ ಆರಾಧ್ಯ. ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವುದು ಕೆಲವರಿಗೆ ಗೊತ್ತಿರಬಹುದು. ಈಗ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಕೆಲವು ವಿಚಾರಗಳನ್ನು ಜಯಶ್ರೀ ರಿವೀಲ್ ಮಾಡಿದ್ದಾರೆ. ಜಯಶ್ರೀಗೆ 19ನೇ ವಯಸ್ಸಿಗೆ ಮನೆ ಬಿಟ್ಟು ಬಂದವರು. ಜಯಶ್ರೀ ಕಾಸ್ಮೆಟಿಕ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಕಾಸ್ಮೆಟಿಕ್ ಉದ್ಯಮದಲ್ಲಿ ಸಕ್ರಿಯವಾದರು. ಮೊದಲ ತಿಂಗಳು 7 ಲಕ್ಷ ರೂಪಾಯಿ ಹಣ ಪಡೆದ ಜಯಶ್ರೀ ಅವರು, ಈಗ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಂತೆ.

ಜಯಶ್ರೀ ಆರಾಧ್ಯ ಅವರು ಜನಪ್ರಿಯತೆ ಬೇಕು, ಗ್ಲಾಮರ್ ಬೇಕು, ಯುವಜನತೆಗೆ ಸ್ಫೂರ್ತಿ ಆಗಬೇಕು ಎಂದು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರಂತೆ. ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದಲ್ಲಿ ನಾಯಕಿಯಾಗಿ ಜಯಶ್ರೀ ಅಭಿನಯಿಸುತ್ತಿದ್ದಾರೆ.
ಈಗ ಜಯಶ್ರೀ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಹೇಗೆ ಆಟ ಆಡಲಿದ್ದಾರೆ. ಜೊತೆಗೆ ಬಿಗ್ ಬಾಸ್ ಒಟಿಟಿ ಗೆದ್ದು, ಬಿಗ್ ಬಾಸ್ 9ನೇ ಸೀಸನ್‌ಗೆ ಸೆಲೆಕ್ಟ್ ಆಗುತ್ತಾರಾ ಎನ್ನುವುದನ್ನೂ ನೋಡಬೇಕಿದೆ.


Click it and Unblock the Notifications











