For Quick Alerts
  ALLOW NOTIFICATIONS  
  For Daily Alerts

  ಬಲು ಅಪರೂಪ ಈ ಜೋಡಿ: ಅದೆಂಥ ಶೋಗೂ ಇವರು ರೆಡಿ!

  |

  ಬಿಗ್‌ಬಾಸ್‌ ಓಟಿಟಿ ಕನ್ನಡ ಸೀಸನ್ 1ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ವಿಭಿನ್ನ ಕ್ಷೇತ್ರಗಳ 16 ಜನ ಭಿನ್ನ ವ್ಯಕ್ತಿತ್ವದ ಮಂದಿ ಮನೆ ಪ್ರವೇಶ ಪಡೆದಿದ್ದಾರೆ. ಈಗಾಗಲೇ ಅಸಲಿ ಶುರುವಾಗಿದೆ. ಸ್ಪರ್ಧಿಗಳ ಸರ್ಪ್ರೈಸ್ ಎಂಟ್ರಿ ಕೊಟ್ಟಿರೋ ಜೋಡಿ ಜಶ್ವಂತ್ ಹಾಗೂ ನಂದಿನಿ ಅಲಿಯಾಸ್ ನಂದು.

  14 ಹಾಗೂ 15ನೇ ಸ್ಪರ್ಧಿಗಳಾಗಿ ಇವರಿಬ್ಬರು ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಬೆಂಗಳೂರಿನ ನಂದಿನಿ ಫುಟ್‌ಬಾಲ್ ಆಟಗಾರ್ತಿ, ಕೊಡಗಿನ ಜಶ್ವಂತ್ ಮಾಡೆಲ್. ಇಬ್ಬರು ರಿಯಲ್ ಲೈಫ್‌ನಲ್ಲಿ ಪ್ರೇಮಿಗಳು. ಸಾಹಸ ಪ್ರಿಯರಾಗಿರುವ ಜೋಡಿಗಳಿಬ್ಬರು ಒಟ್ಟಿಗೆ ಮನೆ ಒಳಗೆ ಹೋಗಿದ್ದಾರೆ. ನಾವಿಬ್ಬರು ಸಿಕ್ಕಾಪಟ್ಟೆ ಸ್ಟ್ರಾಂಗ್‌ ಅನ್ನುವ ಜೋಡಿ ಬಿಗ್‌ ಬಾಸ್ ಮನೆಯಲ್ಲಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ. ಜಸ್ವಂತ್ ಹಾಗೂ ನಂದಿನಿ ಕ್ಯೂಟ್ ವಿಟಿ ಎಲ್ಲರ ಗಮನ ಸೆಳೆಯಿತು.

  ಬಿಗ್‌ಬಾಸ್‌ ಒಟಿಟಿ ಮನೆಗೆ ಸೇರಿದ 16 ಮಂದಿ ಇವರೇ: ಭಿನ್ನ-ಭಿನ್ನ ವ್ಯಕ್ತಿತ್ವಗಳು ಒಂದೆಡೆ!ಬಿಗ್‌ಬಾಸ್‌ ಒಟಿಟಿ ಮನೆಗೆ ಸೇರಿದ 16 ಮಂದಿ ಇವರೇ: ಭಿನ್ನ-ಭಿನ್ನ ವ್ಯಕ್ತಿತ್ವಗಳು ಒಂದೆಡೆ!

  ಎಂಟಿವಿ ರೋಡೀಸ್‌ ಸೀಸನ್‌ 19ರಲ್ಲಿ ಚಿನಕುರಳಿ, ಮಾತಿನ ಮಲ್ಲಿ ನಂದಿನಿ ಹಾಗೂ ಜಶ್ವಂತ್ ಇಬ್ಬರು ಭಾಗವಹಿಸಿದ್ದರು. ಘಟಾನುಘಟಿ ಸ್ಪರ್ಧಿಗಳಿದ್ದ ಶೋನಲ್ಲಿ ನಂದಿನಿ ಗೆದ್ದರೆ ಜಶ್ವಂತ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ದಕ್ಷಿಣ ಆಫ್ರಿಕಾದ ಪ್ರಮುಖ ಸ್ಥಳಗಳಲ್ಲಿ ನಡೆದಿದ್ದ ರೋಡಿಸ್ ಶೋನ ಸಾಹಸಮಯ ಟಾಸ್ಕ್ ಗಳನ್ನು ಇಬ್ಬರು ಸಮರ್ಥವಾಗಿ ನಿಭಾಯಿಸಿ ಉಳಿದ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದರು. ರೋಡೀಸ್‌ ಮೂಲಕ ಉತ್ತರ ಭಾರತದಲ್ಲಿ ಗೆದ್ದಿದ್ದಾಯ್ತು. ಈಗ ದಕ್ಷಿಣ ಭಾರತದಲ್ಲಿ ಹೆಸರು ಮಾಡಲು ಜೋಡಿ ಬಿಗ್‌ ಬಾಸ್‌ ಮನೆಗೆ ಬಂದಿದೆ. ಕೊನೆ ಕ್ಷಣದಲ್ಲಿ ಸುದೀಪ್ ಜೋಡಿಗೆ ಚಮಕ್ ಕೊಟ್ಟಿದ್ದರು. ಇಬ್ಬರಲ್ಲಿ ಇಬ್ಬರನ್ನು ಮಾತ್ರ ಮನೆಯೊಳಗೆ ಕಳುಹಿಸುವುದಾಗಿ ಹೇಳಿದ್ದರು. ಇಬ್ಬರು ಮಾತನಾಡಿ ಜಶ್ವಂತ್ ಹೋಗೋದು ಎಂದು ನಿರ್ಧರಿಸಿ, ಜಶ್ವಂತ್‌ನ ಕಳುಹಿಸಿಕೊಟ್ಟರು. ಕೊನೆಗೆ ಸುದೀಪ್ ನಂದಿನಿಗೂ ದೊಡ್ಮನೆ ಎಂಟ್ರಿಗೆ ಅವಕಾಶ ಇದೆ ಎಂದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.

  English summary
  Bigg Boss Kannada OTT Contestant Number 14 and 15 : Jashwanth and Nandini age, biography, photos and other personal details Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X