Somanna Machimada: 16ನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ಪತ್ರಕರ್ತ ಸೋಮಣ್ಣ ಮಾಚೀಮಡ

ಖ್ಯಾತ ಸುದ್ದಿ ವಾಹಿನಿ ನಿರೂಪಕ ಸೋಮಣ್ಣ ಮಾಚೀಮಾಡ ಬಿಗ್‌ಬಾಸ್ ಕನ್ನಡ ಓಟಿಟಿಯ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನ್ಯೂಸ್‌ ಫಸ್ಟ್‌ ಸುದ್ದಿವಾಹಿನಿಯಲ್ಲಿ ನಿರೂಪಕರಾಗಿ ಸೋಮಣ್ಣ ಕೆಲಸ ಮಾಡುತ್ತಿದ್ದು ಇದೀಗ ದೊಡ್ಮನೆಯ ದೊಡ್ಡ ಆಟಕ್ಕೆ ಮುಂದಾಗಿದ್ದಾರೆ. ಹಲವು ಸುದ್ದಿ ವಾಹಿನಿಯಲ್ಲಿ ವರದಿಗಾರನಾಗಿ, ನಿರೂಪಕನಾಗಿ ಕೆಲಸ ಮಾಡಿದ್ದಾರೆ.

ಕಳೆದೆರಡು ದಿನಗಳಿಂದ ಸೋಮಣ್ಣ ಮಾಚೀಮಾಡ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಸುಳಿವು ಸಿಕ್ಕಿತ್ತು. ಈಗ ಆ ಊಹೆ ನಿಜವಾಗಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಒಬ್ಬೊಬ್ಬರೇ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಿಂದ ಸೋಮಣ್ಣ ಶೋಗೆ ಆಯ್ಕೆ ಆಗಿದ್ದಾರೆ. ಸೋಮಣ್ಣ ಮಾಚೀಮಾಡ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಸೆಲೆಬ್ರೆಟಿಗಳ ಸಂದರ್ಶನಗಳಿಂದ ಮನೆ ಮಾತಾಗಿರುವ ಸೋಮಣ್ಣ ಮಾಚೀಮಾಡ ಬಿಗ್‌ ಬಾಸ್‌ ಮನೆಯಲ್ಲಿ ಹೇಗೆ ಆಟ ಆಡುತ್ತಾರೆ ಅನ್ನುವ ಕುತೂಹಲ ಇದೆ. ಇವರ ಹಿನ್ನೆಲೆ ಬಗ್ಗೆ ಹೇಳಬೇಕು ಅಂದರೆ ಮೈಸೂರಿನ ಮಹಾಜನ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಸೋಮಣ್ಣ ಮೊದಲಿಗೆ ಅಲ್ಲೇ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಿರೂಪಕರಾಗುವ ಆಸೆಯಿಂದ ಬೆಂಗಳೂರಿಗೆ ಬಂದರು. ಮೂರ್ನಾಲ್ಕು ಸುದ್ಧಿ ವಾಹಿನಿಗಳಲ್ಲಿ ಮೆಟ್ರೋ ವಿಭಾಗದ ವರದಿಗಾರರಾಗಿ, ಮೆಟ್ರೋ ವಿಭಾಗದ ಮುಖ್ಯಸ್ಥರಾಗಿ ನಂತರ ನಿರೂಪಕರಾಗಿ ಭಡ್ತಿ ಪಡೆದಿದ್ದರು.

 ಟಿವಿ9ನಲ್ಲಿ ವರದಿಗಾರರಾಗಿ ಸೇವೆ

ಟಿವಿ9ನಲ್ಲಿ ವರದಿಗಾರರಾಗಿ ಸೇವೆ

ಮೈಸೂರಿನಿಂದ ಬೆಂಗಳೂರಿಗೆ ಬರುವ ಸೋಮಣ್ಣ ಮಾಚೀಮಾಡ ಮೊದಲಿಗೆ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಮೆಟ್ರೋ ವಿಭಾಗದ ವರದಿಗಾರರಾಗಿ ಕೆಲಸಕ್ಕೆ ಸೇರಿದ್ದರು. ಬಳೀಕ ಮೆಟ್ರೋ ವಿಭಾಗದ ಮುಖ್ಯಸ್ಥರೂ ಆಗಿದ್ದರು. ತಮ್ಮ ವಿಭಿನ್ನ ರೀತಿಯ ವರದಿಗಾರಿಕೆಯಿಂದ ಚಾಪು ಮೂಡಿಸುತ್ತಾರೆ.

 ಸಮಯ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ

ಸಮಯ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ

ಟಿವಿ9ನಿಂದ ಸಮಯ ವಾಹಿನಿಗೆ ಮೆಟ್ರೋ ವಿಭಾಗದ ಮುಖ್ಯಸ್ಥರಾಗಿ ಹೋಗಿದ್ದ ಸೋಮಣ್ಣ ಅಲ್ಲಿ ನಿರೂಪಕರಾಗಿಯೂ ಗುರ್ತಿಸಿಕೊಳ್ಳುತ್ತಾರೆ. ನಿಧಾನವಾಗಿ ಸಂದರ್ಶನಗಳನ್ನು ಮಾಡಲು ಪ್ರಾರಂಭಿಸಿದ್ದರು. ಸಮಯ ಸುದ್ದಿ ವಾಹಿನಿ ನಂತರ ನ್ಯೂಸ್‌ 18 (ಈಟಿವಿ ಕನ್ನಡ ನ್ಯೂಸ್)ಗೆ ಮೆಟ್ರೋ ವಿಭಾಗದ ಮುಖ್ಯಸ್ಥರಾಗಿ ನಿರೂಪಕರಾಗಿ ಸೇರಿಕೊಂಡಿದ್ದರು.

 ಸೋಮಣ್ಣ ಏಕಾಂಗಿ ಜೀವನ

ಸೋಮಣ್ಣ ಏಕಾಂಗಿ ಜೀವನ

ಅಲ್ಲಿ ಒಂದಷ್ಟು ದಿನ ಕೆಲಸ ಮಾಡಿ ಬಳಿಕ ನ್ಯೂಸ್‌ ಫಸ್ಟ್‌ ವಾಹಿನಿಗೆ ನಿರೂಪಕರಾಗಿ ಸೇರುತ್ತಾರೆ. ಸಿನಿಮಾ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತಃ ಕೊಡಗಿನವರು. ತಂದೆ ನಿವೃತ್ತ ಸೈನ್ಯಾಧಿಕಾರಿ. ಅಕ್ಕ - ಭಾವ ಮೈಸೂರಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ತಮ್ಮ ನಿರರ್ಗಳ ಮಾತುಗಳಿಂದ ಸೋಮಣ್ಣ ಮಾಚೀಮಾಡ ನಿರೂಪಕರಾಗಿ ಯಶಸ್ವಿಯಾಗಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸೂಪರ್‌ ಸ್ಟಾರ್‌ಗಳ ಸಂದರ್ಶನ ಮಾಡಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಸೋಮಣ್ಣ ಮದುವೆ 2020ರಲ್ಲಿ ಮುರಿದು ಬಿದ್ದಿದೆ.

ಸೋಮಣ್ಣ ಮಚೀಮಡ ಬೇಸರ

ಸೋಮಣ್ಣ ಮಚೀಮಡ ಬೇಸರ

ಸಾಕಷ್ಣು ರಾಜಕಾರಣಿಗಳನ್ನು, ಸಿನಿಮಾ ಕಲಾವಿದರನ್ನು ಸಂದರ್ಶನ ಮಾಡಿ ಸೋಮಣ್ಣ ಮಾಚೀಮಡ ಖ್ಯಾತಿ ಗಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ 114k ಹಾಗೂ ಇನ್​ಸ್ಟಾಗ್ರಾಂನಲ್ಲಿ 27kಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮದುವೆ ಮುರಿದು ಹೋದ ವಿಚಾರಕ್ಕೆ ವೇದಿಕೆಯಲ್ಲಿ ಬಹಳ ಬೇಸರ ವ್ಯಕ್ತಪಡಿಸಿದ್ದರು. ತಮಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ ಎಂದ ಸೋಮಣ್ಣ, ಅದನ್ನೆಲ್ಲಾ ಮೀರಿ ಬಿಗ್‌ಬಾಸ್‌ ಶೋನಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಮನೆ ಪ್ರವೇಶಿಸಿದ್ದಾರೆ.

More from Filmibeat

English summary
Bigg Boss Kannada OTT Contestant Number 16 : Somanna Machimada age, biography, photos and other personal details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X