Sonu Srinivas Gowda: ಸೋಶಿಯಲ್ ಮೀಡಿಯಾ ಕೋಟದಡಿ ಬಿಗ್ ಬಾಸ್ ಕನ್ನಡ ಓಟಿಟಿಗೆ 2ನೇ ಸ್ಪರ್ಧಿ!
ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ಇಂದು (ಆಗಸ್ಟ್ 6) ತೆರೆ ಬಿದ್ದಿದೆ. ಒಬ್ಬರೇ ಸ್ಪರ್ಧಿಗಳನ್ನು ಒಟಿಟಿಯಲ್ಲಿ ಪರಿಚಯಿಸಲಾಗುತ್ತಿದೆ. ಭಿನ್ನ ವ್ಯಕ್ತಿತ್ವಯುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಮನೆ ಒಳಗೆ ಇವರ ವ್ಯಕ್ತಿತ್ವ ಹೇಗೆ ಇರಲಿದೆಯೋ ಕಾದು ನೋಡಬೇಕು.
ಬಿಗ್ ಬಾಸ್ ಒಟಿಟಿ ಸೀಸನ್ ಒಂದರ, ಎರಡನೇ ಸ್ಪರ್ಧಿ ಸೋಶಿಯಲ್ ಮೀಡಿಯಾ ಮೂಲಕ ನಿಮಗೆಲ್ಲಾ ಚಿರಪರಿಚತವಾಗಿರುವ ಸೋನು ಶ್ರೀನಿವಾಸ್ ಗೌಡ. ಸಾಮಾನ್ಯ ಹುಡುಗಿ ಸೋನು ಸೋಶಿಯಲ್ ಮೀಡಿಯಾದ ಮೂಲಕ ಸೆಲೆಬ್ರೆಟಿ ಆಗುವ ಮಟ್ಟಕ್ಕೆ ಬಂದಿದ್ದಾರೆ. ಸೋನುಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ವಿಡಿಯೋಗಳಿಂದ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಈ ಬಾರಿ ಕನ್ನಡದ ಬಿಗ್ ಬಾಸ್ ಓಟಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಸೋನು ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...
ಸೋನು ಶ್ರೀನಿವಾಸ್ ಗೌಡ: 2ನೇ ಸ್ಪರ್ಧಿ!
ಬಿಗ್ ಬಾಸ್ ವೇದಿಗೆ ಸ್ಪರ್ಧಿಗಳಿಗೆ ಬಹಳ ಮುಖ್ಯ ಆಗಿರುತ್ತದೆ. ಇಲ್ಲಿ ಬಂದ ಹಲವರು ಹಲವು ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ಪಾಸಿಟಿಗ್ ಆಗಿ ಗುರುತಿಸಿಕೊಂಡರೆ. ಮತ್ತೇ ಕೆಲವರು ನೆಗೆಟಿಗ್ ಆಗಿಯೇ ಸದ್ದು ಮಾಡ್ತಾರೆ. ಈಗ ಓಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದ್ದು, ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅಂದ ತಕ್ಷಣ ಅವರ ಬಗ್ಗೆ ಹುಟ್ಟಿಕೊಂಡಿದ್ದ ಹತ್ತಾರು ವಿವಾದಗಳು ನೆನಪಾಗಬಹುದು. ಆದರೆ ಅದೆಲ್ಲವನ್ನೂ ಮೀರಿ ಈಗ ಸೋನು ಮತ್ತೊಂದು ಹೆಜ್ಜೆ ಇಟ್ಟಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ.
ಮಂಡ್ಯದ ಹುಡುಗಿ ಸೋನು!
ಸೋನು ಶ್ರೀನಿವಾಸ್ ಗೌಡ ಮೂಲತಃ ಮಂಡ್ಯದ ಹುಡುಗಿ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸೆನ್ಸೇಷನ್ ಹುಟ್ಟು ಹಾಕಿದಾಕೆ ಸೋನು. ಸೋನು ಮುನ್ನೆಲೆಗೆ ಬಂದು ಹೆಚ್ಚು ಜನರ ಗಮನ ಸೆಳೆದಿದ್ದು ಟಿಕ್ ಟಾಕ್ ವಿಡಿಯೋಗಳ ಮೂಲಕ. ಹೌದು, ಸೋನು ಟಿಕ್ ಟಾಕ್‌ನಿಂದಲೂ ಹೆಚ್ಚು ಫೇಮಸ್ ಆಗಿದ್ದು, ಮೊದ ಮೊದಲು ಸೋನು ವಿಡಿಯೋಗಳನ್ನು ನೋಡಲು ಜನ ಕಾಯುತ್ತಿದ್ದರು. ಅದು ಹೇಗೆ ಇದ್ದರೂ ವಿಡಿಯೋ ನೋಡಿ ಒಂದು ಕಮೆಂಟ್ ಹಾಕುವವರಿಗೆ ಕಡಿಮೇ ಏನು ಇರಲಿಲ್ಲ. ಹೀಗೆ ಸೋನು ಶ್ರೀನಿವಾಸ್ ಗೌಡ ಕೆಲವೇ ದಿನಗಳಲ್ಲಿ ಸಿಕ್ಕಾ ಪಟ್ಟೆ ಹೆಸರುವಾಸಿಯಾದರು.

ಸೋಶಿಯಲ್ ಮೀಡಿಯಾದಲ್ಲಿ ಸೋನು ಹವಾ!
ಮಂಡ್ಯ ಮೂಲದ ಸೋನು ಟಿಕ್ ಟಾಕ್ ವಿಡಿಯೋ ಮಾಡೋದರಲ್ಲಿ ಎತ್ತಿದ ಕೈ. ಈಗ ರೀಲ್ಸ್, ಶಾರ್ಟ್ಸ್ ಎಲ್ಲಿ ನೋಡಿದರೂ ಸೋನು ಹವಾ ಕಡಿಮೇ ಏನಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಅವರಿಗೆ 7,76,000 ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಫೋಟೊ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣ ಬಳಸಿ ಲಕ್ಷಾಂತರ ಗಳಿಕೆ ಮಾಡುವುದರಲ್ಲಿ ಸೋನು ಶ್ರೀನಿವಾಸ್ ಗೌಡ ಸಹ ಒಬ್ಬರು.
ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ
ಅನೇಕ ಆಲ್ಬಂ ಸಾಂಗ್, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಧರ್ಮ ಕೀರ್ತಿರಾಜ್, ಅದ್ವಿತಿ ಶೆಟ್ಟಿ ಅಭಿನಯದ 'ಕ್ಯಾಡ್ಬರೀಸ್' ಸಿನಿಮಾದಲ್ಲಿ ಸೋನು ನಟಿಸಿದ್ದಾರೆ. ಸೋನು ಅವರ ಟಿಕ್‌ಟಾಕ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆದಾಗ, ಈ ಸಿನಿಮಾದಲ್ಲಿ ನಟಿಸುವಂತೆ ಆಫರ್ ಹುಡುಕಿಕೊಂಡು ಬಂದಿತ್ತು. ಸೋನು ಯಾವುದೇ ಆಡಿಷನ್ ನೀಡದೆ, ನೇರವಾಗಿ ಈ ಸಿನಿಮಾಕ್ಕೆ ಆಯ್ಕೆಯಾಗಿದ್ದರು. ಸಿನಿಮಾ ಶೂಟಿಂಗ್‌ನಲ್ಲೂ ಕೂಡ ಸೋನು ಭಾಗಿಯಾಗಿದ್ದಾರೆ. ಈಗ ಬಿಗ್ ಬಾಸ್ ಮೂಲಕ ಮತ್ತಷ್ಟು ಕನ್ನಡಿಗರ ಮನಗೆಲ್ಲುತ್ತಾರಾ? ಅಂತ ನೋಡಬೇಕಿದೆ.


Click it and Unblock the Notifications











