Roopesh Shetty: ಒಟಿಟಿಯಿಂದ ಟಿವಿಗೆ ಹಾರಿದ ರೂಪೇಶ್ ಶೆಟ್ಟಿ, ಹಿನ್ನೆಲೆ ಒಮ್ಮೆ ತಿಳಿಯಿರಿ
ಕನ್ನಡ ಕಿರುತೆರೆಯ ಹೆಸರಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಆರಂಭವಾಗಿದೆ. ಈ ಹಿಂದೆ ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿಯಲ್ಲಿ ಆಯ್ಕೆ ಆಗಿರುವ ರೂಪೇಶ್ ಶೆಟ್ಟಿ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
ರೂಪೇಶ್ ಶೆಟ್ಟಿ, ಬಿಗ್‌ಬಾಸ್ ಒಟಿಟಿ ಸ್ಪರ್ಧೆಯಲ್ಲಿ ಚೆನ್ನಾಗಿ ಆಡಿ ವಿಜೇತ ಎನಿಸಿಕೊಂಡು ಐದು ಲಕ್ಷ ಬಹುಮಾನವನ್ನೂ ಸಹ ತೆಗೆದುಕೊಂಡಿದ್ದರು. ಜೊತೆಗೆ ಸಾನ್ಯಾ ಜೊತೆಗಿನ ಅವರ ಗೆಳೆತನವೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.
ಈಗ ಮತ್ತೆ ಅವರು ಬಿಗ್‌ಬಾಸ್ ಸೀಸನ್ 09 ಗೆ ಬಂದಿದ್ದಾರೆ. ಅದೂ ಸಹ ಸಾನ್ಯಾ ಐಯ್ಯರ್ ಜೊತೆಗೇ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್‌ಬಾಸ್ ಒಟಿಟಿಯಲ್ಲಿ ಗೆದ್ದ ರೂಪೇಶ್ ಹಿನ್ನೆಲೆ ಏನು ಗೊತ್ತೆ.
ಕೋಸ್ಟಲ್ವುಡ್ ಸ್ಟಾರ್ ರೂಪೇಶ್ ಶೆಟ್ಟಿ!
ಕೋಸ್ಟಲ್ವುಡ್ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಮಿಂಚಿ ನಿರೂಪಕನಾಗಿ ಕೆಲಸ ಮಾಡಿರುವ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎಲ್ಲದಕ್ಕಿಂತಲೂ ಸ್ಪರ್ಧಿಗಳೇ ಮುಖ್ಯ. ಯಾರೆಲ್ಲಾ ಬಿಗ್ ಮನೆ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇರುವುದು ಸಹಜ. ಅಂತಯೇ ಬಿಗ್ ಬಾಸ್ ಮನೆಗೆ 3ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರೂಪೇಶ್ ಶೆಟ್ಟಿ.

ಹಲವು ಚಿತ್ರಗಳಲ್ಲಿ ರೂಪೇಶ್ ನಟನೆ!
ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ 'ನಿಶಬ್ಧ 2', 'ಡೇಂಜರ್ ಜೋನ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಮೊದಲು ಹೆಸರುವಾಗಿಯಲ್ಲಿದ್ದು, ಯುಟ್ಯೂಬ್ ಮೂಲಕ. ಯುಟ್ಯೂಬ್‌ನಲ್ಲಿ ತುಳು ಹಾಸ್ಯ ವಿಡಿಯೋಗಳನ್ನು ಹಾಕಿ ಜನಮನ ಗೆದ್ದವರು. ಬಳಿಕ ಬಣ್ಣದ ಲೋಕದಲ್ಲಿ ನಟನೆ ಶುರುಮಾಡಿ ತುಳುನಾಡಿನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ರೂಪೇಶ್ ಶೆಟ್ಟಿ.

ಕಾಸರಗೋಡಿನ ಪ್ರತಿಭೆ ರೂಪೇಶ್!
ರೂಪೇಶ್ ಶೆಟ್ಟಿ ಮೂಲತಃ ಕಾಸರಗೋಡಿನವರು. ಮಂಗಳೂರಿನ ಟಿವಿ ಚಾನೆಲ್ನಲ್ಲಿ ನಿರೂಪಕನಾಗಿ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ 'ದಿಬ್ಬಣ' ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದರು. 2018ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ ತುಳುವಿನಲ್ಲಿ ಬಿಡುಗಡೆ ಆದ 'ಅಮ್ಮೆರ್ ಪೊಲೀಸ್' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ ನಿರ್ದೇಶನಕ್ಕೂ ಇಳಿದರು. ನಟಿಸಿದ 'ಗಿರ್‌ಗಿಟ್' ತುಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿತು. ಇತ್ತೀಚೆಗಷ್ಟೆ ಕನ್ನಡದಲ್ಲೂ ಸುಮಂತ್ ಹಾಗೂ ಭಾವನಾ ಜೊತೆ 'ಗೋವಿಂದ ಗೋವಿಂದ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

ಆರ್ ಜೆ, ವಿ ಜೆ ರೂಪೇಶ್ ಶೆಟ್ಟಿ!
ಆಗಸ್ಟ್ 14 1991ರಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ರೂಪೇಶ್ ಜನಿಸಿದರು. ಇನ್ನು ರೂಪೇಶ್ ಶೆಟ್ಟಿ ಸಿನಿಮಾರಂಗಕ್ಕೆ ಬರುವ ಮೊದಲು ಆರ್ ಜೆ ಮತ್ತು ವಿಜೆ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡ ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ರೂಪೇಶ್, ತುಳು ನಾಡಿನ ಸ್ಟಾರ್ ನಟ, ಈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಯಾವ ರೀತಿ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











