Spoorthi Gowda: ಬಿಗ್‌ಬಾಸ್ ಮನೆಯಿಂದ ಅರ್ಧಕ್ಕೆ ಓಡಿ ಬರ್ತಾರಾ ಸ್ಪೂರ್ತಿ ಗೌಡ?

ಸಂಜೆ 7 ಗಂಟೆಗೂ ಮೊದಲೇ ಬಿಗ್‌ಬಾಸ್ ಓಟಿಟಿಗೆ ಪ್ರವೇಶ ಪಡೆಯುವ ಮೂವರು ಸ್ಪರ್ಧಿಗಳ ಹೆಸರು ಬಹಿರಂಗವಾಗಿತ್ತು. ಕಾರ್ಯಕ್ರಮ ಶುರುವಾದ ಮೇಲೆ ಮನೆಗೆ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಕಿರುತೆರೆ ನಟಿ ಸ್ಪೂರ್ತಿ ಗೌಡ.

ಯಾವುದೇ ಕೆಲಸವಾದರೂ ಕಷ್ಟ ಅನ್ನಿಸಿದ್ರೆ, ಅರ್ಧಕ್ಕೆ ಬಿಟ್ಟು ಓಡಿಬರುವ ಜಾಯಮಾನ ಸ್ಪೂರ್ತಿ ಗೌಡ ಅವರದ್ದು. ಆದರೆ ಬಿಗ್‌ಬಾಸ್‌ ಮನೆಯಲ್ಲಿ ಗೆಲ್ಲಲೇಬೇಕು ಅಂತ ಪಣ ತೊಟ್ಟು ಬಂದಿದ್ದಾರೆ. ಟಿವಿ ಬಿಗ್‌ಬಾಸ್‌ ಶೋಗೆ ಹೋಗುವ ಕನಸು ಕಂಡಿದ್ದ ಸ್ಪೂರ್ತಿ ಓಟಿಟಿ ಬಿಗ್‌ಬಾಸ್‌ನಲ್ಲಿ ಗೆದ್ದು ಸೀಸನ್‌ 9ಕ್ಕೆ ಎಂಟ್ರಿ ಕೊಡುವ ಲೆಕ್ಕಾಚಾರದಲ್ಲಿದ್ದಾರೆ. ಸದ್ಯ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನೆಗೆಟೀವ್ ಶೇಡ್ ರೋಲ್‌ನಲ್ಲಿ ನಟಿಸಿದ್ದಾರೆ.

Bigg Boss Kannada OTT Contestant Number 4 : Spoorthi Gowda age, biography, photos and other personal details

ಅಂದ ಹಾಗೆ, ಇದು ಸ್ಫೂರ್ತಿ ಗೌಡ 2ನೇ ರಿಯಾಲಿಟಿ ಶೋ. ಈ ಹಿಂದೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಶೋನಲ್ಲೂ ಭಾಗವಹಿಸಿದ್ದರು. ಮಿಸ್ ಪಾಪ್ಯುಲರ್ ಫೇಸ್, ಮಿಸ್ ಮಲ್ನಾಡ್ ರನ್ನರ್ ಅಪ್ ಆಗಿದ್ದ ಶಿವಮೊಗ್ಗದ ಸ್ಫೂರ್ತಿ ಗೌಡ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದರು. ಸ್ಪೂರ್ತಿ ಆ ಸೀಸನ್‌ನಲ್ಲಿ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು ಕಿರುತೆರೆ ಧಾರಾವಾಹಿಯಲ್ಲೂ ನಟಿಸುತ್ತಿದ್ದ ಸ್ಪೂರ್ತಿ ಅದನ್ನೂ ಅರ್ಧಕ್ಕೆ ಬಿಟ್ಟು ಬಂದಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ ಹಾಗೂ ರೂಪೇಶ್ ಶೆಟ್ಟಿ ನಂತರ ನಾಲ್ಕನೇ ಸ್ಪರ್ಧಿಯಾಗಿ ಸ್ಫೂರ್ತಿ ಮನೆಯೊಳಗೆ ಹೋಗಿದ್ದಾರೆ.

More from Filmibeat

English summary
Bigg Boss Kannada OTT Contestant Number 4 : Spoorthi Gowda age, biography, photos and other personal details. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X