Sanya Iyer: ಬಿಗ್ ಬಾಸ್ ಕನ್ನಡ ಓಟಿಟಿ 5ನೇ ಸ್ಪರ್ಧಿ ಪುಟ್ಟ ಗೌರಿ ಖ್ಯಾತಿಯ ಸಾನ್ಯಾ ಅಯ್ಯರ್!
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿರುವ ಒಬ್ಬೊಬ್ಬ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನ. ಒಬ್ಬೊಬ್ಬರು ಒಂದನ್ನೂ ಫೀಲ್ಡ್‌ನಿಂದ ಬಂದಿದ್ದಾರೆ. ಇಲ್ಲಿ ಬಂದಿರುವವರೆಲ್ಲರೂ ಈಗಾಗಲೇ ಯಾವುದೋ ಒಂದು ರೂಪದಲ್ಲಿ ಜನರಿಗೆ ಚಿರಪರಿಚಿತರಾಗಿರುವವರೇ.
ಈ ಸಾಲಿಗೆ ಪುಟ್ಟ ಗೌರಿ ಮದುವೆ ಸೀರಿಯಲ್ ಖಾತಿಯ ನಟಿ ಸಾನ್ಯಾ ಕೂಡ ಸೇರಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸೀರಿಯಲ್. ಈ ಧಾರಾವಾಹಿಯಲ್ಲಿ ಗೌರಿಯ ಪಾತ್ರದಲ್ಲಿ ಬಾಲನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ಸಾನ್ಯ ಅಯ್ಯರ್ ಇದೀಗ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿದ್ದಾರೆ.

ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಾನ್ಯಾ ಅಯ್ಯರ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿರುವ ಸಾನ್ಯಾ ಅಯ್ಯರ್ ತಂದೆ-ತಾಯಿ ಕೂಡ ಕಲಾವಿದರು. 8ನೇ ತರಗತಿವರೆಗೆ ಸಾನ್ಯಾ ಅಯ್ಯರ್ ಪುಟ್ಟಗೌರಿ ಧಾರಾವಾಹಿಯಲ್ಲಿ ನಟಿಸಿದರು ನಂತರ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯಾ ಅಯ್ಯರ್ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಮಲಯಾಳಂನ 'ಆರಾರೋ..ನೀಯಾರೋ' ಎಂಬ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದ ಸಾನ್ಯ 'ಗುಲಾಬ್ ಜಾಮೂನ್' ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಬಿಗ್ ಬಾಸ್ ಓಟಿಟಿ ಇಂದಿನಿಂದ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಈಗಾಗಲೇ ಆರಂಭವಾಗಿರುವ ಕಾರ್ಯಕ್ರಮದಲ್ಲಿ ಬಹುತೇಕ ಸ್ಪರ್ಧಿಗಳು ಎಂಟ್ರಿಯಾಗಿದ್ದಾರೆ. ಬಿಗ್ ಬಾಸ್ 5ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ ಸಾನ್ಯಾ. ಸಾನ್ಯಾ ಅಯ್ಯರ್ ಪರಿಚಯ ಮಾಡಿಕೊಟ್ಟು ಸುದೀಪ್ ಅವರನ್ನು ಮನೆಯ ಒಳಗೆ ಕಳುಹಿಸಿದ್ದಾರೆ. ಸಾನ್ಯಾ ಜರ್ನಿ ಮನೆಯಲ್ಲಿ ಹೇಗೆ ಇರಲಿದೆ ಎನ್ನುವುದನ್ನಿ ನೋಡಬೇಕಿದೆ.


Click it and Unblock the Notifications