Akshata Kuki: ಮನೆಯೊಳಗೆ ಹೋಗುವುದಕ್ಕೂ ಮೊದಲೇ ಕಿಚ್ಚನ ಟಾಸ್ಕ್: ಅಕ್ಷತಾ ಕುಕ್ಕಿ ಗೆದ್ದಿದ್ದೇಗೆ?
ಊಹಿಸಿದ್ದಕ್ಕಿಂತ ಕೊಂಚ ಅಚ್ಚರಿ ಎನಿಸುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ನಟ ಲೋಕೇಶ್ ನಂತರ 7 ಸ್ಪರ್ಧಿಯಾಗಿ ರೂಪದರ್ಶಿ ಅಕ್ಷತಾ ಕುಕ್ಕಿ ಆಯ್ಕೆ ಆಗಿದ್ದಾರೆ.
ಬಿಗ್‌ಬಾಸ್ ಮನೆ ಒಳಗೆ ಕಾಲಿಡೋಕು ಮೊದಲೇ ಅಕ್ಷತಾಗೆ ಕಿಚ್ಚ ಸುದೀಪ್ ಒಂದು ಸೀಕ್ರೆಟ್ ಟಾಸ್ಕ್ ಕೂಡ ಕೊಟ್ಟಿದ್ದರು. ಮನೆ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಟಾಸ್ಕ್ ಮುಗಿಸಿ, ಕ್ಯಾಮರಾ ಮುಂದೆ ಬಂದು ಒಂದು ವಿಶೇಷ ಬೇಡಿಕೆಯನ್ನು ಇಟ್ಟಿದ್ದಾಯಿತು. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಕುಕ್ಕಿ ಮನೆಯವರೆಲ್ಲ ಸರ್ಕಾರಿ ನೌಕರರು. ಈಕೆಯೂ ಸಹ ಸರ್ಕಾರಿ ಕೆಲಸಕ್ಕೆ ಸೇರಲು ಮನಸ್ಸು ಮಾಡಿದ್ದರು. ಆದರೆ ಬಣ್ಣದ ಲೋಕದ ಗೀಳು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಮಾಡೆಲಿಂಗ್‌ನಲ್ಲಿ ಗುರ್ತಿಸಿಕೊಂಡಿರುವ ಅಕ್ಷತಾ ಕುಕ್ಕಿ, ಸಿನಿಮಾಗಳಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಜನ ಫಾಲೋವರ್ಸ್ ಕೂಡ ಇದ್ದು, ತಮ್ಮ ಫೋಟೊಶೂಟ್‌ಗಳ ಮೂಲಕ ಅಕ್ಷತಾ ಗಮನ ಸೆಳೆಯುತ್ತಿರುತ್ತಾರೆ.
ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾ ನಿಧಾನವಾಗಿ ಸಿನಿಮಾಗಳಲ್ಲೂ ನಟಿಸೋಕೆ ಆರಂಭಿಸಿದರು. ಆಗಲೇ ಬಿಗ್‌ಬಾಸ್ ಮನೆಗೆ ಹೋಗುವ ಆಸೆ ಶುರುವಾಗಿತ್ತು. ಅದೀಗ ನೆರವೇರಿದಂತಾಗಿದೆ. ನಗು ಮೊಗದ ಅಕ್ಷತಾ ಕುಕ್ಕಿ ಬಿಗ್‌ಬಾಸ್ ಮನೆಯಲ್ಲಿ ಹೇಗೆ ಆಟ ಆಡಿ ಗೆಲ್ಲಾರೆ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











