twitter
    For Quick Alerts
    ALLOW NOTIFICATIONS  
    For Daily Alerts

    Akshata Kuki: ಮನೆಯೊಳಗೆ ಹೋಗುವುದಕ್ಕೂ ಮೊದಲೇ ಕಿಚ್ಚನ ಟಾಸ್ಕ್: ಅಕ್ಷತಾ ಕುಕ್ಕಿ ಗೆದ್ದಿದ್ದೇಗೆ?

    |

    ಊಹಿಸಿದ್ದಕ್ಕಿಂತ ಕೊಂಚ ಅಚ್ಚರಿ ಎನಿಸುವ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಹೋಗುತ್ತಿದ್ದಾರೆ. ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ನಟ ಲೋಕೇಶ್ ನಂತರ 7 ಸ್ಪರ್ಧಿಯಾಗಿ ರೂಪದರ್ಶಿ ಅಕ್ಷತಾ ಕುಕ್ಕಿ ಆಯ್ಕೆ ಆಗಿದ್ದಾರೆ.

    ಬಿಗ್‌ಬಾಸ್ ಮನೆ ಒಳಗೆ ಕಾಲಿಡೋಕು ಮೊದಲೇ ಅಕ್ಷತಾಗೆ ಕಿಚ್ಚ ಸುದೀಪ್ ಒಂದು ಸೀಕ್ರೆಟ್ ಟಾಸ್ಕ್ ಕೂಡ ಕೊಟ್ಟಿದ್ದರು. ಮನೆ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಟಾಸ್ಕ್‌ ಮುಗಿಸಿ, ಕ್ಯಾಮರಾ ಮುಂದೆ ಬಂದು ಒಂದು ವಿಶೇಷ ಬೇಡಿಕೆಯನ್ನು ಇಟ್ಟಿದ್ದಾಯಿತು. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಕುಕ್ಕಿ ಮನೆಯವರೆಲ್ಲ ಸರ್ಕಾರಿ ನೌಕರರು. ಈಕೆಯೂ ಸಹ ಸರ್ಕಾರಿ ಕೆಲಸಕ್ಕೆ ಸೇರಲು ಮನಸ್ಸು ಮಾಡಿದ್ದರು. ಆದರೆ ಬಣ್ಣದ ಲೋಕದ ಗೀಳು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಮಾಡೆಲಿಂಗ್‌ನಲ್ಲಿ ಗುರ್ತಿಸಿಕೊಂಡಿರುವ ಅಕ್ಷತಾ ಕುಕ್ಕಿ, ಸಿನಿಮಾಗಳಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಬಿಗ್ ಬಾಸ್ ಓಟಿಟಿ ಸೀಸನ್ 1 ರಿಯಾಲಿಟಿ ಶೋನ 8ನೇ ಸ್ಪರ್ಧಿ ರಾಕೇಶ್ ಅಡಿಗ!ಬಿಗ್ ಬಾಸ್ ಓಟಿಟಿ ಸೀಸನ್ 1 ರಿಯಾಲಿಟಿ ಶೋನ 8ನೇ ಸ್ಪರ್ಧಿ ರಾಕೇಶ್ ಅಡಿಗ!

    Bigg Boss Kannada OTT Contestant Number 7 : Akshata Kuki age, biography, photos and other personal details

    ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಜನ ಫಾಲೋವರ್ಸ್ ಕೂಡ ಇದ್ದು, ತಮ್ಮ ಫೋಟೊಶೂಟ್‌ಗಳ ಮೂಲಕ ಅಕ್ಷತಾ ಗಮನ ಸೆಳೆಯುತ್ತಿರುತ್ತಾರೆ.
    ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾ ನಿಧಾನವಾಗಿ ಸಿನಿಮಾಗಳಲ್ಲೂ ನಟಿಸೋಕೆ ಆರಂಭಿಸಿದರು. ಆಗಲೇ ಬಿಗ್‌ಬಾಸ್ ಮನೆಗೆ ಹೋಗುವ ಆಸೆ ಶುರುವಾಗಿತ್ತು. ಅದೀಗ ನೆರವೇರಿದಂತಾಗಿದೆ. ನಗು ಮೊಗದ ಅಕ್ಷತಾ ಕುಕ್ಕಿ ಬಿಗ್‌ಬಾಸ್ ಮನೆಯಲ್ಲಿ ಹೇಗೆ ಆಟ ಆಡಿ ಗೆಲ್ಲಾರೆ ಅನ್ನುವುದನ್ನು ಕಾದು ನೋಡಬೇಕಿದೆ.

    English summary
    Bigg Boss Kannada OTT Contestant Number 7 : Akshata Kuki age, biography, photos and other personal details. Know More.
    Saturday, August 6, 2022, 23:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X