ಬಿಗ್ ಬಾಸ್ ಮನೆಗೆ ಉತ್ತರ ಭಾರತದ ಚೆಲುವೆ; ಕಿರಣ್ ಯೋಗೇಶ್ವರ್ ಬಗ್ಗೆ ನಿಮಗೆಷ್ಟು ಗೊತ್ತು?
ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ ಒಂದರ 9ನೇ ಸ್ಪರ್ಧಿಯಾಗಿ ಕಿರಣ್ ಯೋಗೇಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಈಕೆಯ ಹೆಸರು ಕೇಳಿದಾಕ್ಷಣ ಯಾರು ಅನ್ನೋದು ಥಟ್ ನೆನಪಾಗೋದು ಕಷ್ಟ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೊಟೊಗಳ ಮೂಲಕ ಈಕೆ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುತ್ತಾಳೆ.
ಡಿಜಿಟಲ್ ಕ್ರಿಯೇಟರ್ ಕೋಟಾದಡಿ ಬಿಗ್‌ಬಾಸ್ ಮನೆಗೆ ಈ ರಾಜಸ್ಥಾನದ ಚೆಲುವೆ ಪ್ರವೇಶ ಪಡೆದಿದ್ದಾಳೆ. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ಡ್ಯಾನ್ಸರ್, ಯೋಗ ಟೀಚರ್, ಮಾಡೆಲ್ ಆಗಿ ಕಿರಣ್ ಯೋಗೇಶ್ವರ್ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ. ಕಿರಣ್ ಕನ್ನಡ ಕೇಳಿ ಕಿಚ್ಚ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತಷ್ಟು ಕಲಿಯುವಂತೆ ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಕೆಲವೇ ದಿನಗಳಲ್ಲಿ ಕನ್ನಡ ಮಾತನಾಡುವುದನ್ನು ಸಂಪೂರ್ಣವಾಗಿ ಕಲಿಯುತ್ತೇನೆ ಎಂದು ಹೇಳಿ ಬಲಗಾಲು ಇಟ್ಟಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಿರಣ್ ಚಿಕ್ಕಂದಿನಲ್ಲೇ ಮನೆಯಲ್ಲಿ ಮದುವೆ ಮಾಡುತ್ತೀನಿ ಎಂದಾಗ ಮನೆ ಬಿಟ್ಟು ಬಂದು ತಮ್ಮ ಕರಿಯರ್ ಕಟ್ಟಿಕೊಳ್ಳುತ್ತಾರೆ.

ಹೋಟೆಲ್‌ನಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದ ದಿನಗಳನ್ನು ಕಿರಣ್ ಯೋಗೇಶ್ವರ್ ನೆನಪಿಸಿಕೊಂಡಿದ್ದಾರೆ. ಸಾಕಷ್ಟು ಸೋಲೋ ಟ್ರಿಪ್‌ಗಳನ್ನು ಮಾಡಿ ದೇಶ ವಿದೇಶ ಸುತ್ತಾಡಿದ್ದಾರೆ. ಬೆಲ್ಲಿ ಡ್ಯಾನ್ಸ್ ಮಾಡುವಾಗ ಮಾಡೆಲಿಂಗ್ ಅವಕಾಶ ಸಿಕ್ಕಿತ್ತು. ಫ್ಯಾಮಿಲಿಯಲ್ಲಿ ಎಲ್ಲರೂ ಯೋಗ ಪಟುಗಳು. ಹಾಗಾಗಿ ರಕ್ತದಲ್ಲೇ ಯೋಗ ಇದೆ ಎಂದು ಕಿರಣ್ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಕಿರಣ್ ಯೋಗೇಶ್ವರ್ ತಂದೆ ಮಾಜಿ ಆರ್ಮಿ ಆಫೀಸರ್. 'ಶಂಭೋ ಶಿವ ಶಂಕರ' ಅನ್ನುವ ಕನ್ನಡ ಸಿನಿಮಾದಲ್ಲಿ ಒಂದು ಐಟಂ ಸಾಂಗ್‌ಗೂ ಈಕೆ ಹೆಜ್ಜೆ ಹಾಕಿದ್ದಾರೆ. "ಆರಂಭದಲ್ಲಿ ನನಗೆ ಕಾನ್ಫಿಡೆಂಟ್ ಇರಲಿಲ್ಲ. ಈಗ ಇದೆ. ಲಡ್ಡು ಮಾಡಿ ಮಾರಾಟ ಮಾಡ್ತಿದ್ದೆ. ಸಕ್ಸಸ್ ಬೆಸ್ಟ್ ರಿವೇಂಜ್ ಅನ್ನುವುದನ್ನು ನಂಬಿದ್ದೇನೆ" ಎಂದು ಕಿರಣ್ ಹೇಳಿದ್ದಾರೆ. ಫಿಸಿಕಲ್ ಆಗಿಯೂ ಸಖತ್ ಸ್ಟ್ರಾಂಗ್ ಆಗಿರುವ ರಾಜಸ್ಥಾನದ ಚೆಲುವೆ ಬಿಗ್‌ಬಾಸ್‌ನಲ್ಲಿ ಗೆಲ್ಲುವ ಅಚಲವಾದ ನಂಬಿಕೆಯಲ್ಲಿದ್ದಾರೆ.


Click it and Unblock the Notifications











