For Quick Alerts
  ALLOW NOTIFICATIONS  
  For Daily Alerts

  'ಬಡ್ಡೀಸ್' ಸಿನಿಮಾದ ನಟ ಉದಯ್ ಸೂರ್ಯ ಬಿಗ್ ಬಾಸ್ ಒಟಿಟಿಯ 11ನೇ ಸ್ಪರ್ಧಿ!

  |

  ಬಿಗ್ ಬಾಸ್ ಕನ್ನಡ ಓಟಿಟಿ ಈಗಾಗ್ಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಎಲ್ಲಾ 16 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಈ 16 ಮಂದಿಯಲ್ಲಿ ಹನ್ನೊಂದನೇ ಸ್ಪರ್ಧಿಯಾಗಿ ಉದಯ್ ಸೂರ್ಯ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಉದಯ್ ಕಿರಣ್ ಅವರ ಮೂಲ ಹೆಸರು ವಿವೇಕ್.

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಆಟ ಶುರುವಾಗಿದೆ. ಒಬ್ಬೊಬ್ಬರು ತಮ್ಮ ಬತ್ತಳಿಕೆಯಿಂದ ಒಂದೊಂದು ಬಾಣ ಬಿಡಲು ಶುರು ಮಾಡಿದ್ದಾರೆ. ಇವರೊಂದಿಗೆ ಕಿರುತೆರೆ ಹಾಗೂ ಸಿನಿಮಾನಲ್ಲಿ ನಟಿಸಿರುವ ಉದಯ್ ಸೂರ್ಯ ಮಿಂಗಲ್ ಆಗುತ್ತಿದ್ದಾರೆ. ಅಂದ್ಹಾಗೆ, ಉದಯ್ ಧಾರಾವಾಹಿಗಳಲ್ಲಿ ನಟಿಸಿ ಮನೆಮನೆಗೂ ಪರಿಚಿತರಾಗಿದ್ದರು. ಆದರೆ, ಒಂದಿಷ್ಟು ದಿನ ಕಣ್ಮರೆಯಾಗಿದ್ದ ಉದಯ್ ಮತ್ತೆ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ.

  'ರಾಮಾಚಾರಿ', 'ನಾಗಕನ್ನಿಕೆ' ಸೇರಿದಂತೆ ಸುಪ್ರಸಿದ್ಧ ಧಾರವಾಹಿಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇವರು ನಟಿಸಿದ 'ಬಡ್ಡೀಸ್' ಸಿನಿಮಾದಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಹೋದರೂ ಉದಯ್‌ಗೆ ಜನಪ್ರಿಯತೆ ಸಿಕ್ಕಿದೆ.

  ಸದ್ಯ ಕಿರುತೆರೆ ಹಾಗೂ ಸಿನಿಮಾದಲ್ಲಿ ಮತ್ತೆ ಜರ್ನಿ ಆರಂಭಿಸಿದ್ದರೂ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಎಷ್ಟು ಜನಪ್ರಿಯತೆಯನ್ನು ಗಳಿಸುತ್ತಾರೆ ಎನ್ನುದೇ ಕೂತೂಹಲ.

  Bigg Boss Kannada OTT Contestant Number 9: Uday Surya Age, Biography, Photos and Other Personal Details

  ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಟಫ್ ಕಾಂಪಿಟೇಷನ್ ಕೊಡುವ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾರು ಹೇಗೆ ಆಟ ಆಡುತ್ತಾರೆ? ಜನರ ಮನಸ್ಸನ್ನು ಹೇಗೆ ಗೆಲ್ಲುತ್ತಾರಾ? ಅನ್ನೋ ಕುತೂಹಲವಿದೆ. ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಕಾಮಿಡಿ ಕಿಲಾಡಿ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಜಸ್ವಂತ್ ಬೋಪಣ್ಣ, ನಂದು, ಅರ್ಜುನ್, ಕಿರಣ್ ಯೋಗೇಶ್ವರ್ ಅವರು ಎಂಟ್ರಿ ಕೊಟ್ಟಿದ್ದಾರೆ.

  English summary
  Bigg Boss Kannada OTT Contestant Number 9: Uday Surya Age, Biography, Photos and Other Personal Details
  Sunday, August 7, 2022, 1:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X