For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಡವ್ ರಾಣಿ ಎಂದಿದ್ದಕ್ಕೆ ಸೋನು ಗೌಡ, ಸ್ಪೂರ್ತಿ ನಡುವೆ ಜಗಳ!

  |

  ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಹಲವು ಭಿನ್ನ ವ್ಯಕ್ತಿತ್ವಯುಳ್ಳ ಸ್ಪರ್ಧಿಗಳು ಈ ಓಟಿಟಿ ಸೀಸನ್‌ಗಲ್ಲಿ ಭಾಗಿಯಾಗಿದ್ದಾರೆ.

  ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲಿನ ಎಲ್ಲಾ ವ್ಯಕ್ತಿತ್ವಗಳು ಒಟ್ಟಿಗೆ ಒಗ್ಗೂಡು ಸಾಧ್ಯವಿಲ್ಲ. ಇಲ್ಲಿ ಸೌಹಾರ್ದತೆಗಿಂತಲೂ ಸಮರವೇ ಹೆಚ್ಚಾಗಿ ಸದ್ದು ಮಾಡುತ್ತದೆ. ಇನ್ನೂ ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಜಗಳ ಆಡುತ್ತಾರೋ ಏನೋ ಎಂದುಕೊಳ್ಳುವಷ್ಟರಲ್ಲೇ ಜಗಳ ಶುರುವಾಗಿ ಬಿಟ್ಟಿದೆ.

  ಬಿಗ್ ಬಾಸ್ ಮನೆಯಲ್ಲಿ ಮೊದಲ ಜಗಳ ಶುರುವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಇಬ್ಬರೂ ಮಾತನಾಡುತ್ತಲೇ ಜಗಳ ಮಾಡಿದ್ದಾರೆ. ಇದು ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದರಲ್ಲಿ ಶುರುವಾಗಿರುವ ಮೊದಲ ಜಗಳ ಮತ್ತು ಮನಸ್ತಾಪ. ಅಷ್ಟಕ್ಕು ಇವರ ನಡುವೆ ಆಗಿದ್ದು ಏನು ಎನ್ನುವುದರ ಬಗ್ಗೆ ಮುಂದೆ ಓದಿ.

  ಸೋನು ಗೌಡ, ಸ್ಪೂರ್ತಿ ಗೌಡ ಜಗಳ!

  ಸೋನು ಗೌಡ, ಸ್ಪೂರ್ತಿ ಗೌಡ ಜಗಳ!

  ಬಿಗ್ ಬಾಸ್ ಮನೆಯಲ್ಲಿ ಮೊದಲೆರಡು ದಿನ ಎಲ್ಲವೂ ಚೆನ್ನಾಗೇ ಇತ್ತು. ಆದರೆ ಮೂರೇ ದಿನಕ್ಕೆ ಕಾಲಿಡುತ್ತಿದ್ದ ಹಾಗೆ ಜಗಳ, ಅಸಮಾಧಾನ ಶುರುವಾಗಿ ಬಿಟ್ಟಿದೆ. ಚೆನ್ನಾಗೇ ಇದ್ದ ಸೋನು ಗೌಡ ಮತ್ತು ಸ್ಪೂರ್ತಿ ಗೌಡ ನಡುವೆ ಜಗಳ ಶುರುವಾಗಿದೆ. ಇಬ್ಬರು ಮುನಿಸಿಕೊಂಡಿದ್ದಾರೆ. ಇದಕ್ಕೆ ಸ್ಪೂರ್ತಿ ಗೌಡ ಇದ್ದಕ್ಕಿದ್ದ ಹಾಗೆ ಕೋಪ ಮಾಡಿಕೊಂಡಿದ್ದೇ ಕಾರಣವಾಗಿದೆ.

  ಸ್ಪೂರ್ತಿಗೆ ಡವ್ ರಾಣಿ ಎಂದ ಸೋನು!

  ಸ್ಪೂರ್ತಿಗೆ ಡವ್ ರಾಣಿ ಎಂದ ಸೋನು!

  ಸ್ಪೂರ್ತಿ ಗೌಡ ಮೇಕಪ್ ಮಾಡಿಕೊಳ್ಳುತ್ತಿರುವನ್ನು ಕಂಡ ಸೋನು ಗೌಡ, ಮೇಕಪ್ ಬಗ್ಗೆ ಒಂದಷ್ಟು ಪ್ರಸ್ನೆ ಮಾಡುತ್ತಾರೆ. ಆದ ಮೇಕಪ್ ವಿಚಾರ ಮಾತನಾಡುತ್ತಾ, ಮೇಕಪ್ ಗೊತ್ತಿಲ್ಲ ಎಂದ ಸ್ಪೂರ್ತಿ ಗೌಡಗೆ, ಸೋನು ಗೌಡ "ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆಡವ್ ಮಾಡ್ತಿಯಾ ಎನ್ನುತ್ತಾರೆ. "ಇದೇ ಮಾತುಗಳು ಇವರ ಜಗಳಕ್ಕೆ ಕಾರಣವಾಗಿವೆ. ಡವ್ ರಾಣಿ ಎನ್ನುವ ಪದ ಬಳಸಿದ್ದಕ್ಕೆ ಸ್ಪೂರ್ತಿ ಗೌಡ ಸಿಟ್ಟಾಗುತ್ತಾರೆ.

  ಮೊದಲ ನಕ್ಕು ನಂತರ ಕೋಪಗೊಂಡ ಸ್ಪೂರ್ತಿ!

  ಮೊದಲ ನಕ್ಕು ನಂತರ ಕೋಪಗೊಂಡ ಸ್ಪೂರ್ತಿ!

  ಇನ್ನು ಸೋನು ಗೌಡ ಮೊದಲು ಸ್ಪೂರ್ತಿ ಗೌಡಗೆ ಡವ್ ರಾಣಿ ಎನ್ನುವ ಪದ ಬಳಸಿದಾಗ, ಸ್ಪೂರ್ತಿ ಗೌಡ ಕೂಡ ನಗುತ್ತಾರೆ. ಚೆನ್ನಾಗೇ ಸೋನು ಗೌಡ ಜೊತೆಗೆ ಮಾತನಾಡುತ್ತಾರೆ. ಆದರೆ ಕೆಲ ಸಮಯದ ಬಳಿಕ ಸೋನು ಗೌಡ ಮೇಲೆ ಸ್ಪೂರ್ತಿ ಗೌಡ ಕಿಡಿ ಕಾರುತ್ತಾರೆ. ಡವ್ ರಾಣಿ ಎನ್ನುವ ಪದ ಬಳಕೆ ಮಾಡಿವುದು ಇಷ್ಟ ಆಗಲಿಲ್ಲ. ಆ ರೀತಿ ಮಾತನಾಬೇಡ ಎನ್ನುತ್ತಾ ಜಗಳ ಶುರು ಮಾಡುತ್ತಾರೆ. ಮಾತಿನಲ್ಲೇ ಒಬ್ಬರಿಗೊಬ್ಬರು ಚಾಟಿ ಬೀಸಿಕೊಂಡಿದ್ದಾರೆ

  ಮುನಿಸಿಕೊಂಡ ಸ್ಪೂರ್ತಿ, ಸೋನು!

  ಮುನಿಸಿಕೊಂಡ ಸ್ಪೂರ್ತಿ, ಸೋನು!

  ಮೂರನೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಮೊದಲ ಜಗಳ ಶುರುವಾಹಿದೆ. ಇಬ್ಬರೂ ಮುನಿಸಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡಿಸುತ್ತಿಲ್ಲ. ಮನೆಮಂದಿ ಎಲ್ಲಾ ಇವರ ಜಗಳ ಬಿಡಿಸಿ, ಸಮಾಧಾನ ಮಾಡಿದ್ದು, ಇಬ್ಬರನ್ನೂ ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಬ್ಬರೂ ಒಬ್ಬರಿಗೊಬ್ಬರು ಮಾತನಾಡದೇ, ಮುನಿಸಿಕೊಂಡಿದ್ದಾರೆ.

  English summary
  Bigg Boss Kannada OTT: First Fight Breaks Out In Bigg Boss Hous Between Sonu Srinivas Gowda And Spoorthy Gowda , Know More,
  Monday, August 8, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X