For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಲಕ್ಷುರಿ ಬಜೆಟ್‌ನಲ್ಲಿ ಬಂತು ಚಿಕನ್, ಎದುರಾಳಿ ತಂಡದ ಬಾಯಲ್ಲಿ ನೀರು!

  |

  ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ ಶುರುವಾಗಿ ಒಂದು ವಾರ ಕಳೆಯುತ್ತಾ ಬಂದಿದೆ. ಸ್ಪರ್ಧಿಗಳು ನಿಧಾನವಾಗಿ ಮನೆಯಲ್ಲಿ ಹೊಂದಿಕೊಂಡು ಹೋಗಲು ಶುರು ಮಾಡಿದ್ದಾರೆ. ಮನೆಯಲ್ಲಿರುವವರು ಒಬ್ಬರನ್ನೊಬ್ಬರು ಅರ್ಥ ಮಾಡುಕೊಳ್ಳಲು ಯತ್ನಿಸುತ್ತಿದ್ದಾರೆ.

  ಈಗಾಗಲೇ ಮನೆಯಲ್ಲಿ ಹಲವು ಬಗೆಯ ಟಾಸ್ಕ್‌ಗಳು ಕೂಡ ಶುರುವಾಗಿವೆ. ಮನೆಯಲ್ಲಿ ಎರಡು ತಂಡಗಳು ಈಗಾಗಲೇ ರಚನೆಯಾಗಿವೆ. ಅದರಂತೆ ಎರಡೂ ತಂಡಗಳು ಟಾಸ್ಕ್‌ನಲ್ಲಿ ಮುಖಾ ಮುಖಿಯಾಗುತ್ತಿವೆ. ಇದರಲ್ಲಿ ಲಕ್ಷುರಿ ಬಜೆಟ್‌ಗಾಗಿ ಕೊಟ್ಟ ಟಾಸ್ಕ್‌ ಕೂಡ ವಿಶೇಷವಾಗಿತ್ತು.

  ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

  ಇನ್ನು ಮೊದಲ ವಾರದಲ್ಲಿ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆಗುವ ಅವಕಾಶವನ್ನು ಒಂದು ತಂಡದವರು ಪಡೆದುಕೊಂಡರೆ. ಮತ್ತೊಂದು ಟಾಸ್ಕ್ ಗೆದ್ದು, ಲಕ್ಷುರಿ ಬಜೆಟ್ ಪಡೆದುಕೊಂಡಿದೆ ಮತ್ತೊಂದು ತಂಡ. ಗೆದ್ದ ತಂಡ ಸದ್ಯ ಲಕ್ಷುರಿ ಬಜೆಡ್‌ನಲ್ಲಿ ಸಿಕ್ಕಿದನ್ನು ಎಂಜಾಯ್ ಮಾಡ್ತಿದ್ದಾರೆ.

  ಲಕ್ಷುರಿ ಬಜೆಟ್‌ಗಾಗಿ ವಿಶೇಷ ಟಾಸ್ಕ್!

  ಲಕ್ಷುರಿ ಬಜೆಟ್‌ಗಾಗಿ ವಿಶೇಷ ಟಾಸ್ಕ್!

  ಬಿಗ್ ಬಾಸ್ ಮನೆಯಲ್ಲಿ ಏನನ್ನಾದರೂ ಗೆಲ್ಲಬೇಕು ಎಂದರೆ ಅಥವಾ ಏನನ್ನಾದರೂ ಪಡೆಯಬೇಕು ಎಂದರೆ ಅದಕ್ಕೆ ವಿಶೇಷವಾದ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಕ್ಯಾಪ್ಟನ್ ಆಯ್ಕೆಗಾಗಿ ವಿಶೇಷ ಟಾಸ್ಕನ್ನು ಕೂಡ ಬಿಗ್ ಬಾಸ್ ವತಿಯಿಂದ ಸ್ಪರ್ಧೆಗಳಿಗೆ ನೀಡಲಾಗಿತ್ತು. ಅಂತೆಯೇ ಲಕ್ಷುರಿ ಬಜೆಟ್‌ಗಾಗಿ ಬಿಗ್‌ ಬಾಸ್ ಕಡೆಯಿಂದ ಮತ್ತೊಂದು ಟಾಸ್ಕ್ ಸ್ಪರ್ಧೆಗಳಿಗೆ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಮನೆಯಲ್ಲಿ ಇರುವ ಎರಡು ತಂಡಗಳು ಬಿಗ್ ಬಾಸ್ ಶೀರ್ಷಿಕೆ ಗೀತೆಗೆ ನೃತ್ಯ ಪ್ರದರ್ಶಿಸಬೇಕಿತ್ತು. ಇದರಲ್ಲಿ ಗೆದ್ದವರಿಗೆ ಲಕ್ಷುರಿ ಬಜೆಟ್ ಕೊಡಲಾಗುತ್ತದೆ ಎಂದು ಬಿಗ್ ಬಾಸ್ ಘೋಷಿಸಿದ್ದರು.

  ನೃತ್ಯ ಪ್ರದರ್ಶನ ಮಾಡಿದ ತಂಡಗಳು!

  ನೃತ್ಯ ಪ್ರದರ್ಶನ ಮಾಡಿದ ತಂಡಗಳು!

  ಬಿಗ್ ಬಾಸ್ ಮನೆಯಲ್ಲಿ ಎ ಮತ್ತು ಬಿ ಎನ್ನುವ ಎರಡು ತಂಡಗಳಾಗಿ ವಿಂಗಡಣೆ ಮಾಡಲಾಗಿದೆ. ಈ ತಂಡಗಳ ಪೈಕಿ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಗೆದ್ದು ಅರ್ಜುನ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಈಗ ಕೊಟ್ಟಿರುವ ಲಕ್ಷುರಿ ಬಜೆಟ್ ಟಾಸ್ಕ್‌ನಲ್ಲಿ ಎರಡು ತಂಡಗಳು ಕೂಡ ಸಕ್ರಿಯವಾಗಿ ಭಾಗವಹಿಸಿದ್ದವು. ಬಿಗ್ ಬಾಸ್ ಶೀರ್ಷಿಕೆ ಗೀತೆಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ಡಾನ್ಸ್ ಮಾಡಿ ಪ್ರದರ್ಶನ ಮಾಡಿದರು. ಇವರ ಪ್ರದರ್ಶನವನ್ನ ಬಿಗ್ ಬಾಸ್ ಟೀಮ್ ಜಡ್ಜ್ ಮಾಡದೆ. ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಜನರ ಅಭಿಪ್ರಾಯದ ಆಧಾರದ ಮೇಲೆ ಗೆಲುವನ್ನು ಪ್ರಕಟ ಮಾಡಲಾಯಿತು. ಈ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ತಂಡ ಲಕ್ಷುರಿ ಬಜೆಟ್ ನ ಪಡೆದುಕೊಂಡಿತು.

  ಲಕ್ಷುರಿ ಬಜೆಟ್ ಚಿಕನ್ ಬಂತು!

  ಲಕ್ಷುರಿ ಬಜೆಟ್ ಚಿಕನ್ ಬಂತು!

  ಲಕ್ಷುರಿ ಬಜೆಟ್ ಗೆದ್ದ ತಂಡಕ್ಕೆ ತಮಗೆ ಬೇಕಾದ ಸಾಮಗ್ರಿಗಳನ್ನು ತಿಂಡಿ ತಿನಿಸುಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಕೊಡಲಾಯಿತು. ಇನ್ನು ಬಜೆಟ್ ಹಾಕುವ ವೇಳೆ ತಂಡದಲ್ಲಿ ಒಂದಷ್ಟು ಗೊಂದಲಗಳು ಉಂಟಾದವು. ಸಾಮಗ್ರಿಗಳನ್ನು ಪಟ್ಟಿ ಮಾಡುವಲ್ಲಿ ಗೆದ್ದಿರುವ ತಂಡ ಗೊಂದಲಕ್ಕೀಡಾಗಿ ಕೆಲವು ಬೇಕಾದ ಸಾಮಗ್ರಿಗಳನ್ನು ಮಿಸ್ ಮಾಡಿಕೊಂಡರು. ಆದರೂ ಕೂಡ ಲಕ್ಷುರಿ ಬಜೆಟ್ ನಲ್ಲಿ ತಮಗೆ ಇಷ್ಟವಾದ ಚಿಕ್ಕನ್, ಐಸ್ ಕ್ರೀಮ್ ಸಿಹಿತಿನಿಸು, ಕಾಫಿ ಸೇರಿದಂತೆ ಹಲವು ಸಾಮಗ್ರಿಗಳನ್ನು ಪಡೆದುಕೊಂಡಿದ್ದಾರೆ.

  ಎದುರಾಳಿ ತಂಡಕ್ಕೆ ನಿರಾಸೆ!

  ಎದುರಾಳಿ ತಂಡಕ್ಕೆ ನಿರಾಸೆ!

  ಲಕ್ಸುರಿ ಬಜೆಟ್‌ನಲ್ಲಿ ಗೆದ್ದ ತಂಡಕ್ಕೆ ಅವರು ಆಯ್ಕೆ ಮಾಡಿದಂತಹ ಹಲವು ಸಾಮಗ್ರಿಗಳನ್ನು ಬಿಗ್ಬಾಸ್ ಕಳುಹಿಸಿಕೊಟ್ಟಿದ್ದಾರೆ. ಯಾವುದೇ ತಿನಿಸುಗಳನ್ನು ಅವರು ಎದುರಾಳಿ ತಂಡದೊಂದಿಗೆ ಹಂಚಿಕೊಳ್ಳುವಂತಿಲ್ಲ. ಹಾಗಾಗಿ ಚಿಕನ್ ತಿನ್ನಬೇಕು, ಐಸ್‌ಕ್ರೀಂ ತಿನ್ನಬೇಕು ಎನ್ನುವ ಆಸೆ ಇದ್ದರೂ ಎದುರಾಳಿ ತಂಡಕ್ಕೆ ನಿರಾಸೆಯಾಗಿದೆ. ಎದುರಾಳಿ ತಂಡದಲ್ಲಿರುವ ನಂದಿನಿ, ಸೋಮಣ್ಣ ಸೇರಿದಂತೆ ಹಲವರು ಬಜೆಟ್‌ನಲ್ಲಿ ಸಿಕ್ಕಿದ್ದನ್ನು ಕಂಡು ನಿರಾಸೆಗೊಂಡಿದ್ದಾರೆ.

  English summary
  Bigg Boss Kannada OTT: Five Contestants won Luxury Budget And Got Chicken And Ice Cream, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X