ಬಿಗ್ ಬಾಸ್ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ!

ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹಬ್ಬ ಎಂದರೆ ಎಲ್ಲಿಲ್ಲದ ಖುಷಿ. ಹೊರಗೆ ಇದ್ದಾಗ ಅಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರೋ ಇಲ್ಲವೋ, ಆದರೆ ಮನೆಯಲ್ಲಿ ಮಾತ್ರ ಸ್ಪರ್ಧಿಗಳಿಗೆ ಈ ಹಬ್ಬಗಳು ಎಂದರೆ ಖುಷಿಯೋ ಖುಷಿ.

ಯಾಕೆಂದರೆ ಬಿಗ್ ಬಾಸ್ ಹೇಳಿದಂತೆ ಕೇಳಿಕೊಂಡು, ನಿಯಮಾನುಸಾರ ಬದುಕಬೇಕಾದ ಪರಿಸ್ಥಿತಿಯಲ್ಲಿ, ಹಬ್ಬದ ದಿನಗಳಲ್ಲಿ ಮಾತ್ರ ಮನೆಯ ಎಲ್ಲರೂ ಹಬ್ಬದ ಊಟ ಮಾಡುತ್ತಾ, ಪೂಜೆ ಮಾಡಿ ಎಲ್ಲರೂ ಒಟ್ಟಿಗೆ ಸಂಭ್ರಮಿಸುತ್ತಾರೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಈ ಬಾರಿಯ ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಿದ್ದಾರೆ. ಮನಸ್ತಾಪ, ಮುನಿಸಿಗೆ ಕೊಂಚ ಬ್ರೇಕ್ ಹಾಕಿದ ಮನೆಯ ಮಂದಿ ಎಲ್ಲರೂ ಒಟ್ಟಿಗೆ ಗಣಪನ ಪೂಜೆ ಮಾಡಿ ಖುಷಿ ಒಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹಬ್ಬದ ಕಳೆ!

ಬಿಗ್ ಬಾಸ್ ಮನೆಯಲ್ಲಿ ಹಬ್ಬದ ಕಳೆ!

ಟಾಸ್ಕ್ ಆಡಿ, ನಿತ್ಯದ ನಿಯಮಗಳನ್ನು ಪಾಲನೆ ಮಾಡುತ್ತಾ, ಆಗಾಗ ಜಗಳ, ಮುನಿಸು ಮಾಡಿಕೊಳ್ಳುತ್ತಾ ಇರುವ ಸ್ಪರ್ಧಿಗಳು ಇಂದು ಬೇರೆ ರೀತಿಯಲ್ಲೇ ಇದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳೂ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಬೆಳಿಗ್ಗೆ ಎದ್ದ ಎಲ್ಲಾ ಸ್ಪರ್ಧಿಗಳಿಗೂ ಬಿಗ್ ಬಾಸ್ ಸರ್ಪರೈಸ್ ಕೊಟ್ಟಿದ್ದಾರೆ ಬಿಗ್ ಬಾಸ್. ಸ್ಪರ್ಧಿಗಳು ಏಳುವ ಮುನ್ನವೇ, ಮನೆಯ ಅಲಂಕಾರದ ಜೊತೆಗೆ ಗಣಪತಿಯನ್ನು ತಂದಿಟ್ಟಿದ್ದರು!

ಸೀರೆಯುಟ್ಟು ಮಿಂಚಿದ ಸ್ಪರ್ಧಿಗಳು!

ಸೀರೆಯುಟ್ಟು ಮಿಂಚಿದ ಸ್ಪರ್ಧಿಗಳು!

ಹಬ್ಬ ಎಂದರೆ ಹೆಣ್ಣು ಮಕ್ಕಳಿಗೆ ರೆಡಿ ಆಗುವುದೆ ಒಂದು ಖುಷಿ. ಬಿಗ್ ಬಾಸ್ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿದ್ದಾರೆ. ಸೀರೆ, ಲಂಗ ದಾವಣಿ, ಲೆಹೆಂಗ ತೊಟ್ಟ ಹೆಣ್ಣು ಮಕ್ಕಳು ಹಬ್ಬದ ಖುಷಿಯನ್ನು ಹೆಚ್ಚಿದ್ದಾರೆ. ಇನ್ನು ಗಣಪನ ಮುಂದೆ ಮತ್ತು ಬಿಗ್ ಬಾಸ್ ಮನೆಯ ಮುಂದೆ ಬಣ್ಣ ರಂಗೋಲಿಯನ್ನು ಹಾಕಿದ್ದಾರೆ.

ಗಣಪತಿ ಕೂರಿಸಿ ಪೂಜೆ!

ಗಣಪತಿ ಕೂರಿಸಿ ಪೂಜೆ!

ಮನೆಯಲ್ಲಿ ಗಣೇಶನ ಸ್ಥಾಪನೆ ಆಗಿದೆ. ಆರ್ಯವರ್ಧನ್ ಗುರೂಜಿ ನೇತೃತ್ವದಲ್ಲಿ ಪೂಜೆ ನಡೆದಿದೆ. ಗಣೇಶನಿಗೆ ಹೂವು ಹಾಕುವುದರ ಜೊತೆಗೆ ಗುರೂಜಿ ಅಲಂಕಾರ ಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟ ಹಬ್ಬದ ವಿಶೇಷ ಪೂಜಾ ಸಾಮಗ್ರಿಗಳನ್ನು ಬಳಸಿಕೊಂಡು ಪೂಜೆ ಮಾಡಿದ್ದಾರೆ. ಇದೇ ವೇಳೆ ಮನೆಯ ಎಲ್ಲರೂ ಕೂಡ, ಗುರೂಜಿಗೆ ಪೂಜೆ ಮಾಡಲು ಸಾಥ್ ಕೊಟ್ಟುದ್ದು ಒಬ್ಬರು ಒಂದೊಂದು ಕೆಲಸ ಮಾಡಿದ್ದಾರೆ.

ಹಬ್ಬದ ಅಡುಗೆ ಸಿದ್ಧ!

ಹಬ್ಬದ ಅಡುಗೆ ಸಿದ್ಧ!

ಇನ್ನು ಮನೆಯಲ್ಲಿ ಹಬ್ಬದ ಅಡುಗೆ ಕೂಡ ಸಿದ್ಧವಾಗಿದೆ. ಸೋಮಣ್ಣ ಅಡುಗೆ ಮನೆ ಸೇರಿದ್ದಾರೆ. ಹಬ್ಬದ ಪ್ರಯುಕ್ತ ಮನೆಯಲ್ಲಿ ವಿಶೇಷವಾದ ಅಡುಗೆಗಳನ್ನು ಮಾಡಲಾಗಿದೆ. ಸೋಮಣ್ಣ ಮತ್ತು ಚೈತ್ರಾ ಸೇರಿ ಹಬ್ಬದ ಅಡುಗೆ ಮಾಡಿದ್ದಾರೆ. ಇನ್ನು ಸೋನು ರಂಗೋಲಿ ಹಾಕಿದರೆ, ಮಿಕ್ಕವರೆಲ್ಲಾ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Bigg Boss Kannada OTT: Ganesha Festival Celebration At Big Boss House, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X