For Quick Alerts
  ALLOW NOTIFICATIONS  
  For Daily Alerts

  ಇವರೇ ನೋಡಿ ಓಟಿಟಿಯಿಂದ ಟಿವಿಗೆ ಹಾರಿದ ಬಿಗ್​ ಬಾಸ್​ ಸ್ಫರ್ಧಿಗಳು

  |

  ಬಿಗ್​ ಬಾಸ್​ ಕನ್ನಡದ ಮೊದಲ ಓಟಿಟಿ ಸೀಸನ್​ ಅಂತಿಮ ಹಂತ ತಲುಪಿದ್ದು, ನಾಳೆ ಗ್ರಾಂಡ್​ ಫಿನಾಲೆ ನಡೆಯಲಿದೆ. ನಾಳೆ ಅದ್ಧೂರಿಯಾಗಿ ನಡೆಯುವ ಗ್ರಾಂಡ್ ​ ಫಿನಾಲೆಗಾಗಿ ಪ್ರೇಕ್ಷಕರೂ ಕೂಡ ಕಾತುರರಾಗಿದ್ದು, ಈ ಮಧ್ಯೆ ಓಟಿಟಿ ಸೀಸನ್​ನಿಂದ ಬಿಗ್​ ಬಾಸ್​ ಕನ್ನಡ ಸೀಸನ್​ 9ಕ್ಕೆ ಪ್ರವೇಶಿಸಲಿರುವ ಸ್ಫರ್ಧಿಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

  ಸದ್ಯ ಓಟಿಟಿ ಬಿಗ್​ ಬಾಸ್​ನಲ್ಲಿ ಟಫ್​ ಫೈಟ್​ ಇದ್ದು, ಸದ್ಯ ಮನೆಯಲ್ಲಿರುವ ರಾಕೇಶ್​, ರೂಪೇಶ್​, ಜಯಶ್ರೀ, ಸಾನ್ಯ ಐಯರ್​, ಆರ್ಯವರ್ಧನ್​ ಗುರೂಜಿ, ಜಶ್ವಂತ್​, ಸೋಮಣ್ಣ ಮಾಚಿಮಾಡ, ಸೋನು ಶ್ರೀನಿವಾಸ್​ ಗೌಡ ಅಂತಿಮ ಹಂತದ ಸ್ಪರ್ಧಿಗಳಾಗಿದ್ದಾರೆ.​

  ಓಟಿಟಿ ಬಿಗ್​ ಬಾಸ್​ ಗ್ರಾಂಡ್​ ಫಿನಾಲೆಗೆ ಒಂದು ದಿನ ಬಾಕಿ ಇರುವಾಗಲೇ ಓಟಿಟಿ ಸೀಸನ್​ನಿಂದ ಬಿಗ್​ಬಾಸ್​ ಸೀಸನ್​ 9ಕ್ಕೆ ಬಡ್ತಿ ಪಡೆದ ಸ್ಪರ್ಧಿಗಳ ಹೆಸರು ಬಹಿರಂಗವಾಗಿದೆ. ರಾಕೇಶ್​, ರೂಪೇಶ್​, ಆರ್ಯವರ್ಧನ್​ ಗುರೂಜಿ ಹಾಗೂ ಸಾನ್ಯಾ ಐಯರ್​ ಬಿಗ್​ಬಾಸ್​ ಸೀಸನ್​ 9ಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಇನ್ನು ಉಳಿದ ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಿಂದ ಹೊರಬಿದ್ದಿದ್ದಾರೆ.

  ರಾಕೇಶ್​-ರೂಪೇಶ್​ ಅಭಿಮಾನಿಗಳು ಫುಲ್​ ಖುಷ್​

  ರಾಕೇಶ್​-ರೂಪೇಶ್​ ಅಭಿಮಾನಿಗಳು ಫುಲ್​ ಖುಷ್​

  ಓಟಿಸಿ ಸೀಸನ್​ ಆರಂಭದಿಂದಲೂ ರಾಕೇಶ್​ ಹಾಗೂ ರೂಪೇಶ್​ ಬಿಗ್​ ಬಾಸ್​​ ಸೀಸನ್​ 9ಕ್ಕೆ ಪ್ರವೇಶಿಸುತ್ತಾರೆ ಎಂದು ಬಹುತೇಕ ಮಾಜಿ ಸ್ಫರ್ಧಿಗಳು ಊಹಿಸಿದ್ದರು. ಶೋ ಪ್ರಾರಂಭದಿಂದಲೂ ರೂಪೇಶ್​ ಹಾಗೂ ರಾಕೇಶ್​ ಮಧ್ಯೆ ತೀವ್ರ ಪೈಪೋಟಿ ಇದ್ದು, ಸದ್ಯ ಇಬ್ಬರೂ ಟಿವಿ ಬಿಗ್​ ಬಾಸ್​ಗೆ ಹಾರಿದ್ದಾರೆ ಇದರಿಂದ ಅಭಿಮಾನಿಗಳು ಕೂಡ ಫುಲ್​ ಖುಷಿಯಾಗಿದ್ದಾರೆ.

   ಕೊನೆಗೂ ಸೋನುಗೆ ಟಕ್ಕರ್​ ಕೊಟ್ಟ ಸಾನ್ಯಾ

  ಕೊನೆಗೂ ಸೋನುಗೆ ಟಕ್ಕರ್​ ಕೊಟ್ಟ ಸಾನ್ಯಾ

  ಸೋನು ಶ್ರೀನಿವಾಸ್​ ಗೌಡ ಹಾಗೂ ಸಾನ್ಯಾ ಅಯ್ಯರ್​ ಓಟಿಟಿ ಬಿಗ್​ ಬಾಸ್​ ಸೀಸನ್​ನ ಪ್ರಮುಖ ಆಕರ್ಷಣೆ ಆಗಿದ್ದರು. ಇವರಿಬ್ಬರ ಮಧ್ಯೆ ಆಗಾಗ ಜಡೆ ಜಗಳ ನಡೆಯುತ್ತಿದ್ದು, 'ನನ್ನ ನೀನು ಗೆಲ್ಲಲಾರೆ' ಎನ್ನುವಂತೆ ಇಬ್ಬರು ಮಾತಿಗಿಳಿಯುತ್ತಿದ್ದರು. ಆದರೂ ಅವರಿಬ್ಬರ ಮಧ್ಯೆ ಉತ್ತಮ ಸ್ನೇಹವಿತ್ತು. ಮೊದಲಿಂದಲೂ ಟಾಸ್ಕ್​ಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರತಿಯೊಂದು ಸ್ಫರ್ಧಿಗಳಿಗೂ ಟಫ್​ ಪೈಟ್​ ಕೊಡುತ್ತಿದ್ದ ಸಾನ್ಯಾ ಬಿಗ್​ ಬಾಸ್​ ಸೀಸನ್​ 9ಕ್ಕೆ ಆಯ್ಕೆಯಾಗಿದ್ದಾರೆ.

   ಫಲಿಸಿದ ಆರ್ಯವರ್ಧನ್​ ಗುರೂಜಿ ಸಂಖ್ಯಾ ಶಾಸ್ತ್ರ

  ಫಲಿಸಿದ ಆರ್ಯವರ್ಧನ್​ ಗುರೂಜಿ ಸಂಖ್ಯಾ ಶಾಸ್ತ್ರ

  ಕನ್ನಡ ಬಿಗ್​ ಬಾಸ್​ ಓಟಿಟಿ ಮೊದಲ ಸೀಜನ್​ನಲ್ಲಿ ಜನರ ಆಕರ್ಷಿತ ಸ್ಪರ್ಧಿಯಾಗಿದ್ದ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಸೀಸನ್​ 9ಕ್ಕೆ ಆಯ್ಕೆಯಾಗಿದ್ದಾರೆ. ಮೊದಲಿನಿಂದಲೂ ವಿಭಿನ್ನ ಸ್ಫರ್ಧಿಯಾಗಿದ್ದರು ಅವರು ಬಿಗ್​ ಬಾಸ್​ ಮನೆಯ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಒಟ್ಟಾರೆ ಮನೆಯಲ್ಲಿ ಓರ್ವ ಹಿರಿಯ ಸದಸ್ಯನಂತೆ ತಮ್ಮ ಪಾತ್ರ ನಿರ್ವಹಿಸಿದ್ದರು. ಜೊತೆಗೆ ಟಾಸ್ಕ್​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು.

   ಪ್ರೋಮೋದಲ್ಲಿ ಮಿಂಚಿದ ಹಳೆ ಸೀಜನ್​ ಸ್ಫರ್ಧಿಗಳು

  ಪ್ರೋಮೋದಲ್ಲಿ ಮಿಂಚಿದ ಹಳೆ ಸೀಜನ್​ ಸ್ಫರ್ಧಿಗಳು

  ಎಂಟು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕನ್ನದ ಬಿಗ್​ ಬಾಸ್​ನ 9ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ. ಈಗಾಗಲೇ ಬಿಗ್​ ಬಾಸ್​ ಸೀಜನ್​ 9 ರ ಎರಡು ಪ್ರೋಮೋಗಳು ವೈರಲ್​ ಆಗಿದ್ದು, ಕಿರುತೆರೆ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಸೀಜನ್​ 9ರ ಎರಡನೇ ಪ್ರೋಮೋದಲ್ಲಿ ಹಳೆಯ ಸ್ಫರ್ಧಿಗಳಾದ ದೀಪಿಕಾ ದಾಸ್​, ಅನುಪಮ, ಪ್ರಶಾಂತ್​ ಸಂಬರ್ಗಿ ಕಾಂಣಿಸಿಕೊಂಡಿದ್ದಾರೆ. ಇನ್ನು ಓಟಿಟಿ ಬಿಗ್​ಬಾಸ್​ ನಿಂದ ನಾಲ್ವರು ಬಿಗ್​ ಬಾಸ್​ ಸೀಸನ್​ 9ಕ್ಕೆ ಆಯ್ಕೆಯಾಗಿದ್ದು, ಇನ್ನುಳಿದ ಸ್ಫರ್ಧಿಗಳು ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ.

  English summary
  Bigg boss Kannada OTT reality show 4 contestants selected for bigg boss kannada Season 09.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X