For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಬಿಗ್‌ಬಾಸ್ ಮನೆಯಲ್ಲಿದ್ದ ಲೋಕೇಶ್ ಅಚಾನಕ್ ಮಾಯ! ಎಲ್ಲಿ ಹೋದ್ರು?

  |

  ಬಿಗ್‌ಬಾಸ್ ಕನ್ನಡ ಒಟಿಟಿ ಶುರುವಾಗಿ ಕೆಲವು ದಿನಗಳು ಕಳೆದಿದ್ದು, ಮನೆಯಲ್ಲಿ ನಿಧಾನಕ್ಕೆ ಪ್ರೀತಿ, ಸ್ನೇಹ, ಜಗಳ, ಮುನಿಸು, ಅಸೂಯೆಗಳು ಶುರುವಾಗಿದೆ.

  ಮೊದಲೆರಡು ದಿನ ಬಹುತೇಕ ಆರಾಮವಾಗಿದ್ದ ಸದಸ್ಯರು ಆನಂತರ ಒಂದರ ಹಿಂದೊಂದು ಕಠಿಣ ಟಾಸ್ಕ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದೆರಡು ದಿನಗಳಲ್ಲಿ ದೈಹಿಕ ಶ್ರಮ ಬೇಡುವ ಟಾಸ್ಕ್‌ಗಳಲ್ಲಿ ಸದಸ್ಯರು ಪಾಲ್ಗೊಂಡಿದ್ದಾರೆ.

  ಇಂದು (ಆಗಸ್ಟ್ 12) ಬಿಗ್‌ಬಾಸ್ ಮನೆ ಬಹುತೇಕ ಶಾಂತವಾಗಿದೆ. ಕಳೆದೆರಡು ದಿನಗಳಲ್ಲಿ ಇದ್ದ ಜಗಳ, ಓಡಾಟ, ಮುನಿಸು ಯಾವುದೂ ಇಲ್ಲದಾಗಿದೆ ಅದಕ್ಕೆ ಮುಖ್ಯ ಕಾರಣ ಟಾಸ್ಕ್ ಇಲ್ಲದೇ ಇರುವುದು. ಬಿಗ್‌ಬಾಸ್ ಮನೆಯಲ್ಲಿ ಆಗಸ್ಟ್ 12 ರಂದು ಸಂಜೆಯ ವರೆಗೂ ಯಾವುದೇ ಟಾಸ್ಕ್ ನಡೆದಿಲ್ಲ. ಹಾಗಾಗಿ ಮನೆಯ ಸದಸ್ಯರು ಅಲ್ಲಲ್ಲಿ ತಮಗೆ ಅನುಕೂಲವಾಗುವ ಕಡೆ ಆರಾಮವಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಸಮಯವಾದಾಗ ಊಟ ಮಾಡುತ್ತಿದ್ದಾರೆ. ಆದರೆ ಈ ನಡುವೆ ಮನೆಯ ಸದಸ್ಯರಲ್ಲಿ ಒಬ್ಬರಾದ ಲೋಕೇಶ್ ಮಾತ್ರ ಕಾಣೆಯಾಗಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಎಲ್ಲರಿಗೂ ಸಖತ್ ಎಂಟರ್ಟೈನ್‌ಮೆಂಟ್ ನೀಡುತ್ತಿದ್ದ, ಎಲ್ಲರಿಗೂ ಪ್ರಿಯವಾಗಿದ್ದ ಲೋಕೇಶ್ ಇಂದು ಬಿಗ್‌ಬಾಸ್ ಮನೆಯಲ್ಲಿ ಕಾಣುತ್ತಿಲ್ಲ! ಬೆಳಿಗ್ಗೆ ಎದ್ದು ಡ್ಯಾನ್ಸ್‌ ಮಾಡುವಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ಸಕ್ರಿಯವಾಗಿ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಿದ್ದ. ಹಾಡುತ್ತಾ, ಕುಣಿಯುತ್ತಾ ಮನೆಯ ಸದಸ್ಯರನ್ನೆಲ್ಲ ನಗಿಸುತ್ತಿದ್ದ ಲೋಕೇಶ್ ಇಂದು ಮನೆಯಲ್ಲಿ ಕಾಣುತ್ತಿಲ್ಲ.

  ಲೋಕೇಶ್ ಕಾಲಿಗೆ ಗಾಯವಾಗಿತ್ತು

  ಲೋಕೇಶ್ ಕಾಲಿಗೆ ಗಾಯವಾಗಿತ್ತು

  ನಿನ್ನೆ ಟಾಸ್ಕ್ ಒಂದನ್ನು ಮಾಡುವ ಸಂದರ್ಭದಲ್ಲಿ ಲೋಕೇಶ್‌ಗೆ ಏಟಾಗಿತ್ತು. ಅದೇ ಕಾರಣಕ್ಕೆ ಲೋಕೇಶ್ ಬಿಗ್‌ಬಾಸ್ ಮನೆ ಬಿಟ್ಟು ಹೊರಗೆ ಚಿಕಿತ್ಸೆಗೆ ಹೋಗಿರಲಿಕ್ಕೆ ಸಾಕು. ಟಾಸ್ಕ್ ಮಾಡುವ ವೇಳೆ ಅದೇನು ಅಷ್ಟು ದೊಡ್ಡ ಪೆಟ್ಟಲ್ಲ ಎನ್ನುವಂತಿತ್ತು. ಆದರೆ ಈಗ ಬಿಗ್‌ಬಾಸ್ ಮನೆಯಿಂದಲೇ ಹೊರಗೆ ಹೋಗಿದ್ದಾರೆಂದರೆ ಗಾಯ ಗಂಭೀರವಾಗಿ ಆಗಿರಬೇಕು ಎನಿಸುತ್ತದೆ.

  ಕಾಲು ಊದಿಕೊಂಡಿತ್ತು ಎಂದ ಸೋನು ಗೌಡ

  ಕಾಲು ಊದಿಕೊಂಡಿತ್ತು ಎಂದ ಸೋನು ಗೌಡ

  ಈ ಬಗ್ಗೆ ಸೋನು ಗೌಡ ಮನೆಯ ಸದಸ್ಯರೊಬ್ಬರ ಬಳಿ ಮಾತನಾಡುತ್ತಾ, ಅವರಿಗೆ ಕಾಲೆಲ್ಲ ಊದಿಕೊಂಡು ಬಿಟ್ಟಿತ್ತು. ನಾವು ಗುರೂಜಿಗೆ ಹೇಳಿದ್ದೆವು ಕಾಲು ಅಗಲ ತೆಗೆಯಿರಿ ಎಂದು ಆದರೆ ಅವರ ಕೈಲಿ ಆಗಲಿಲ್ಲ. ಆದರೆ ಅವರು ಅಷ್ಟು ಕಷ್ಟದ ಸಮಯದಲ್ಲಿಯೇ ತೂರಿಕೊಂಡು ಬಂದರು. ಹಾಗಾಗಿ ಅವರಿಗೆ ಗಾಯವಾಗಿದೆ. ಕಾಲು, ಮೊಣಕಾಲು ಎಲ್ಲ ಊತ ಬಂದಿತ್ತು ಎಂದರು. ಅವರು ಲೋಕೇಶ್ ಅವರ ಬಗ್ಗೆಯೇ ಹೇಳಿದ್ದಿರಬೇಕು.

  ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಲೋಕೇಶ್

  ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಲೋಕೇಶ್

  ತಾವು ತಮ್ಮ ಕುಟುಂಬದವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವದಾಗಿ ಲೋಕೇಶ್ ಕಣ್ಣೀರು ಸಹ ಹಾಕಿದ್ದರು. ಆ ಕಾರಣಕ್ಕೇನಾದರೂ ಲೋಕೇಶ್ ಮನೆಯಿಂದ ಹೊರಗೆ ಹೋದರಾ? ತಿಳಿಯಬೇಕಿದೆ. ಒಟ್ಟಾರೆ ಆಗಸ್ಟ್ 12 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಅಂತೂ ಲೋಕೇಶ್ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಲಿಲ್ಲ. ಸಂಜೆ ಬಳಿಕ ಏನಾದರೂ ಮನೆಗೆ ಮರಳುತ್ತಾರಾ ಕಾದು ನೋಡಬೇಕಿದೆ. ಅಥವಾ ನಾಳೆ ಅಂದರೆ ಶನಿವಾರ ಹಾಗೂ ಭಾನುವಾರ ವಾರ ಸುದೀಪ್ ಅವರೊಂದಿಗೆ ಮಾತುಕತೆ ಇರುತ್ತದೆ ಅದಕ್ಕಾದರೂ ಲೋಕೇಶ್ ಮರಳಿ ಬರುತ್ತಾರಾ ನೋಡಬೇಕಿದೆ.

  Recommended Video

  Gaalipata 2 | Yograj Bhat | 'ಗಾಳಿಪಟ 2' ನೋಡಲು ಟಿಪ್‌ಟಾಪ್ ಆಗಿ ಬಂದ ಭಟ್ರು | Filmibeat Kannada
  ಕಷ್ಟದ ಜೀವನ ಕಳೆದು ಬಂದಿರುವ ಲೋಕೇಶ್

  ಕಷ್ಟದ ಜೀವನ ಕಳೆದು ಬಂದಿರುವ ಲೋಕೇಶ್

  ಲೋಕೇಶ್ ಬಿಗ್‌ಬಾಸ್ ಮನೆಯ ಪ್ರಮುಖ ಸದಸ್ಯ. ಮನೆಯ ಸದಸ್ಯರು ತುಸು ಮಂಕಾದಾಗೆಲ್ಲ ಅವರು ತಮ್ಮ ಚಟುವಟಿಕೆಗಳಿಂದ ಎಲ್ಲರನ್ನೂ ರಂಜಿಸುತ್ತಾ ನಗಿಸುತ್ತಾ ಎಲ್ಲರೊಟ್ಟಿಗೂ ಸಂತೋಶವಾಗಿ ಸಮಾನ ಭಾವದಿಂದ ಇರುತ್ತಾರೆ. ಬಹಳ ಕಷ್ಟದ ಜೀವನ ಕಲೆದು ಈ ಹಂತಕ್ಕೆ ಬಂದಿರುವ ಲೋಕೇಶ್ ಬಿಗ್‌ಬಾಸ್ ಗೆಲ್ಲುವ ನಂಬಿಕೆಯಲ್ಲಿದ್ದಾರೆ. ಭಿಕ್ಷೆ ಬೇಡಿಕೊಂಡು, ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳಲ್ಲಿ ಪ್ರೇಮಿಗಳಿಗೆ ಹೆದರಿಸಿ ಹಣ ವಸೂಲಿ ಮಾಡಿಕೊಂಡು ಇದ್ದಿದ್ದ ಲೋಕೇಶ್ ಅನ್ನು ಡಾನ್ ಬಾಸ್ಕೊದವರು ಕರೆದುಕೊಂಡು ಹೋಗಿ ನೆಲೆ ಒದಗಿಸಿ ಅವರಿಗೆ ಕೆಲವು ನಾಟಕ, ಚಿತ್ರಕತೆಗಳನ್ನು ಕಲಿಸಿದ್ದಾರೆ. ಅದರ ಆಧಾರದ ಮೇಲೆಯೇ ಲೋಕೇಶ್ ಜೀವನ ರೂಪಿಸಿಕೊಂಡಿದ್ದಾರೆ.

  English summary
  Bigg Boss Kannada OTT: Bigg Boss house main entertainer Lokesh is missing from house. He was injured in a task may be he went out to take treatment.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X