ಬಿಗ್ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್: ಫಿನಾಲೆ ಟೈಮ್ನಲ್ಲಿ ಲೋಕಿ ರೀ ಎಂಟ್ರಿ
ಬಿಗ್ ಬಾಸ್ ಓಟಿಟಿ ಕೊನೆಯ ಹಂತ ತಲುಪುತ್ತಿದ್ದು, ಶೋ ಮುಕ್ತಾಯಗೊಳ್ಳಲು ಇನ್ನೇನು ಮೂರು ದಿನಗಳಷ್ಟೇ ಬಾಕಿಯಿದೆ. ಈ ವಾರ ಬಿಗ್ ಬಾಸ್ ಓಟಿಟಿ ಫಿನಾಲೆ ವಾರವಾಗಿದ್ದು, ಸದ್ಯ ದೊಡ್ಮನೆಯೊಳಗಿರುವ ಏಳು ಸ್ಫರ್ಧಿಗಳ ಪೈಕಿ ಯಾರು ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಮಧ್ಯೆಯೇ ಬಿಗ್ ಬಾಸ್, ಸ್ಫರ್ಧಿಗಳಿಗೆ ಶಾಕ್ ಕೊಟ್ಟಿದ್ದು, ಮನೆಗೆ ಮತ್ತೊಬ್ಬ ವ್ಯಕ್ತಿಯ ಎಂಟ್ರಿಯಾಗಿದೆ.
ಇದ್ದ ಏಳ್ವರಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಹಂತದಲ್ಲಿರುವ ಬಿಗ್ ಬಾಸ್ ಓಟಿಟಿ ಶೋಗೆ ಹೊಸ ತಿರುವು ಸಿಕ್ಕಿದೆ. ಫಿನಾಲೆ ವಾರದಲ್ಲಿ ಬಿಗ್ ಬಾಸ್ ಮನೆಗೆ ಈ ಹಿಂದೆ ಇದ್ದ ಸ್ಥರ್ಧಿ ಲೋಕೇಶ್ ರೀ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿರುವ ಏಳು ಮಂದಿಗೆ ಇದು ಶಾಕಿಂಗ್ ಆಗಿದ್ದು, ಲೋಕಿ ಎಲ್ಲರನ್ನೂ ನಗಿಸುತ್ತಲೇ ಒಬ್ಬೊಬ್ಬರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಇವ್ಳು ಹೋದ್ರೆ ಸಾಕು ಅನ್ಕೊಂಡಿದ್ದೆ: ಜಯಶ್ರೀಗೆ ಲೋಕಿ ಟಾಂಗ್
ಬಿಗ್ ಬಾಸ್ ಮನೆಯ ಮುಖ್ಯದ್ವಾರ ಬಾಗಿಲು ತೆರೆಯುತ್ತಿದ್ದಂತೆ ಜಯಶ್ರೀ ಯಾರಾದರೂ ಬರಬಹುದುದಾ ಎಂದು ಊಹಿಸಿದ್ದಾರೆ. ಅವರ ಗೆಸ್ ಸರಿಯಾಗಿದ್ದು, ಲವ್ ಯೂ.. ಲವ್ ಯೂ.. ಬಿಗ್ ಬಾಸ್ ಅಂತಾನೇ ಲೋಕಿ ಎಂಟ್ರಿಕೊಟ್ಟಿದ್ದಾರೆ. ಮನೆ ಮಂದಿ ಜೊತೆ ಸಮಯ ಕಳೆದ ಲೋಕಿ ಪ್ರತಿಯೊಂದು ಸ್ಫರ್ಧಿಯ ಕಾಲು ಎಳೆದಿದ್ದಾರೆ. ನಂದೂ ಏನು ಮಾಡ್ತಿರಬಹುದು ಅಂತಾ ಯೋಚನೆ ಮಾಡ್ತಿದ್ಯಾ ಅಂತಾ ಜಶ್ವಂತ್ಗೆ ತಮಾಷೆ ಮಾಡಿದ ಲೋಕಿ, ಸೋಮಣ್ಣ ಅಂತೂ ಮುಂದಿನ ಸೀಸನ್ನಲ್ಲಿ ಒಂದೊಳ್ಳೆ ಹುಡುಗಿ ಹುಡುಕಿ ಮದುವೆ ಆಗೋ ಪ್ಲ್ಯಾನ್ನಲ್ಲಿದ್ದಾರೆ ಎಂದು ಎಲ್ಲರನ್ನೂ ನಗಿಸಿದರು. ಇನ್ನು ಜಯಶ್ರೀ ನಾನು ಪ್ರತಿವಾರ ನಾಮಿನೆಟ್ ಆಗಿದ್ದೇ, ಆಗ ನಾನು ಹೋಗ್ತೀನಿ ಅಂತಾ ನಿನಗೆ ಅನ್ಸಿತ್ತಾ ಎಂದು ಲೋಕಿ ಅವರನ್ನು ಪ್ರಶ್ನಿಸಿದ್ದು, ಹೌದು ಈ ವಾರ ಇವ್ಳು ಹೋದ್ರೆ ಸಾಕು ಅಂತಾ ನಾನೂ ಅನ್ಕೊಂಡಿದ್ದೆ ಎಂದು ಲೋಕಿ, ಜಯಶ್ರೀ ಅವರ ಕಾಲೆಳೆದಿದ್ದಾರೆ. ಲೋಕಿ ಅತಿಥಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದು, ಉಳಿದ ಸ್ಫರ್ಧಿಗಳು ಸಹ ಬರುವ ನಿರೀಕ್ಷೆಯಿದೆ.

ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸಾನಿಯಾ ಅಯ್ಯರ್, ಸೋಮಣ್ಣ ಮಾಚಿಮಾಡ ಹಾಗೂ ಜಯಶ್ರೀ ಸದ್ಯ ಫಿನಾಲೆ ವೀಕ್ನಲ್ಲಿದ್ದು, ಈ ವಾರದ ಎಲಿಮಿನೇಷನ್ ಬಿಸಿ ಯಾರಿಗೆ ತಟ್ಟಲಿದೆ ಎಂದು ಕಾದು ನೋಡಬೇಕಿದೆ.
ಇನ್ನು ನಿರೀಕ್ಷೆಗೂ ಮೀರಿ ಬಿಗ್ ಬಾಸ್ ಓಟಿಟಿ ಯಶಸ್ವಿಯಾಗಿದ್ದು, ಬಿಗ್ ಬಾಸ್ ಒಟಿಟಿ ಮುಕ್ತಾಯಗೊಂಡ ಬೆನ್ನಲ್ಲೇ ಬಿಗ್ ಬಾಸ್ ಸೀಜನ್ 9 ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಒಂಬತ್ತನೇ ಆವೃತ್ತಿಯ ಪ್ರೋಮೋ ಕೂಡ ವೈರಲ್ ಆಗಿದ್ದು, ಪ್ರೇಕ್ಷಕರೂ ಕೂಡ ಕಾತುರರಾಗಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿ ಯಿಂದ ಕೆಲ ಸ್ಫರ್ಧಿಗಳು ಬಿಗ್ ಬಾಸ್ ಸೀಜನ್ 9ಕ್ಕೆ ಬಡ್ತಿ ಪಡೆಯಲಿದ್ದು, ಬಿಗ್ ಬಾಸ್ ಸೀಜನ್ 9ರ ಉಳಿದ ಸ್ಫರ್ಧಿಗಳು ಯಾರಿರಬಹುದು ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಿಗಿದೆ.


Click it and Unblock the Notifications











