For Quick Alerts
  ALLOW NOTIFICATIONS  
  For Daily Alerts

  ಬಿಗ್​ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್​: ಫಿನಾಲೆ ಟೈಮ್​ನಲ್ಲಿ ಲೋಕಿ ರೀ ಎಂಟ್ರಿ

  |

  ಬಿಗ್ ಬಾಸ್​ ಓಟಿಟಿ ಕೊನೆಯ ಹಂತ ತಲುಪುತ್ತಿದ್ದು, ಶೋ ಮುಕ್ತಾಯಗೊಳ್ಳಲು ಇನ್ನೇನು ಮೂರು ದಿನಗಳಷ್ಟೇ ಬಾಕಿಯಿದೆ. ಈ ವಾರ ಬಿಗ್​ ಬಾಸ್​ ಓಟಿಟಿ ಫಿನಾಲೆ ವಾರವಾಗಿದ್ದು, ಸದ್ಯ ದೊಡ್ಮನೆಯೊಳಗಿರುವ ಏಳು ಸ್ಫರ್ಧಿಗಳ ಪೈಕಿ ಯಾರು ಬಿಗ್​ ಬಾಸ್ ಸೀಸನ್​ 9ಕ್ಕೆ ಕಾಲಿಡಲಿದ್ದಾರೆ​ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಮಧ್ಯೆಯೇ ಬಿಗ್​ ಬಾಸ್,​ ಸ್ಫರ್ಧಿಗಳಿಗೆ ಶಾಕ್​ ಕೊಟ್ಟಿದ್ದು, ಮನೆಗೆ ಮತ್ತೊಬ್ಬ ವ್ಯಕ್ತಿಯ ಎಂಟ್ರಿಯಾಗಿದೆ.

  ಇದ್ದ ಏಳ್ವರಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಹಂತದಲ್ಲಿರುವ ಬಿಗ್​ ಬಾಸ್​ ಓಟಿಟಿ ಶೋಗೆ ಹೊಸ ತಿರುವು ಸಿಕ್ಕಿದೆ. ಫಿನಾಲೆ ವಾರದಲ್ಲಿ ಬಿಗ್​ ಬಾಸ್​ ಮನೆಗೆ ಈ ಹಿಂದೆ ಇದ್ದ ಸ್ಥರ್ಧಿ ಲೋಕೇಶ್​ ರೀ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿರುವ ಏಳು ಮಂದಿಗೆ ಇದು ಶಾಕಿಂಗ್​ ಆಗಿದ್ದು, ಲೋಕಿ ಎಲ್ಲರನ್ನೂ ನಗಿಸುತ್ತಲೇ ಒಬ್ಬೊಬ್ಬರ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

  Exclusive: ಬಿಗ್‌ ಬಾಸ್ ಸೀಸನ್ 9ಕ್ಕೆ ಅನಿರುದ್ಧ್ ಎಂಟ್ರಿ? ನನ್ನನ್ನು ಯಾರು ತಡೆಯೋಕ್ಕಾಗಲ್ಲ!Exclusive: ಬಿಗ್‌ ಬಾಸ್ ಸೀಸನ್ 9ಕ್ಕೆ ಅನಿರುದ್ಧ್ ಎಂಟ್ರಿ? ನನ್ನನ್ನು ಯಾರು ತಡೆಯೋಕ್ಕಾಗಲ್ಲ!

  ಇವ್ಳು ಹೋದ್ರೆ ಸಾಕು ಅನ್ಕೊಂಡಿದ್ದೆ: ಜಯಶ್ರೀಗೆ ಲೋಕಿ ಟಾಂಗ್​

  ಬಿಗ್​ ಬಾಸ್​ ಮನೆಯ ಮುಖ್ಯದ್ವಾರ ಬಾಗಿಲು ತೆರೆಯುತ್ತಿದ್ದಂತೆ ಜಯಶ್ರೀ ಯಾರಾದರೂ ಬರಬಹುದುದಾ ಎಂದು ಊಹಿಸಿದ್ದಾರೆ. ಅವರ ಗೆಸ್​ ಸರಿಯಾಗಿದ್ದು, ಲವ್​ ಯೂ.. ಲವ್ ಯೂ.. ಬಿಗ್​ ಬಾಸ್​ ಅಂತಾನೇ ಲೋಕಿ ಎಂಟ್ರಿಕೊಟ್ಟಿದ್ದಾರೆ. ಮನೆ ಮಂದಿ ಜೊತೆ ಸಮಯ ಕಳೆದ ಲೋಕಿ ಪ್ರತಿಯೊಂದು ಸ್ಫರ್ಧಿಯ ಕಾಲು ಎಳೆದಿದ್ದಾರೆ. ನಂದೂ ಏನು ಮಾಡ್ತಿರಬಹುದು ಅಂತಾ ಯೋಚನೆ ಮಾಡ್ತಿದ್ಯಾ ಅಂತಾ ಜಶ್ವಂತ್​ಗೆ ತಮಾಷೆ ಮಾಡಿದ ಲೋಕಿ, ಸೋಮಣ್ಣ ಅಂತೂ ಮುಂದಿನ ಸೀಸನ್​ನಲ್ಲಿ ಒಂದೊಳ್ಳೆ ಹುಡುಗಿ ಹುಡುಕಿ ಮದುವೆ ಆಗೋ ಪ್ಲ್ಯಾನ್​ನಲ್ಲಿದ್ದಾರೆ ಎಂದು ಎಲ್ಲರನ್ನೂ ನಗಿಸಿದರು. ಇನ್ನು ಜಯಶ್ರೀ ನಾನು ಪ್ರತಿವಾರ ನಾಮಿನೆಟ್​ ಆಗಿದ್ದೇ, ಆಗ ನಾನು ಹೋಗ್ತೀನಿ ಅಂತಾ ನಿನಗೆ ಅನ್ಸಿತ್ತಾ ಎಂದು ಲೋಕಿ ಅವರನ್ನು ಪ್ರಶ್ನಿಸಿದ್ದು, ಹೌದು ಈ ವಾರ ಇವ್ಳು ಹೋದ್ರೆ ಸಾಕು ಅಂತಾ ನಾನೂ ಅನ್ಕೊಂಡಿದ್ದೆ ಎಂದು ಲೋಕಿ, ಜಯಶ್ರೀ ಅವರ ಕಾಲೆಳೆದಿದ್ದಾರೆ. ಲೋಕಿ ಅತಿಥಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದು, ಉಳಿದ ಸ್ಫರ್ಧಿಗಳು ಸಹ ಬರುವ ನಿರೀಕ್ಷೆಯಿದೆ.

  ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸಾನಿಯಾ ಅಯ್ಯರ್​, ಸೋಮಣ್ಣ ಮಾಚಿಮಾಡ ಹಾಗೂ ಜಯಶ್ರೀ ಸದ್ಯ ಫಿನಾಲೆ ವೀಕ್​ನಲ್ಲಿದ್ದು, ಈ ವಾರದ ಎಲಿಮಿನೇಷನ್​ ಬಿಸಿ ಯಾರಿಗೆ ತಟ್ಟಲಿದೆ ಎಂದು ಕಾದು ನೋಡಬೇಕಿದೆ.

  ಇನ್ನು ನಿರೀಕ್ಷೆಗೂ ಮೀರಿ ಬಿಗ್​ ಬಾಸ್​ ಓಟಿಟಿ ಯಶಸ್ವಿಯಾಗಿದ್ದು, ಬಿಗ್​ ಬಾಸ್​ ಒಟಿಟಿ ಮುಕ್ತಾಯಗೊಂಡ ಬೆನ್ನಲ್ಲೇ ಬಿಗ್​ ಬಾಸ್​ ಸೀಜನ್​ 9 ಆರಂಭವಾಗಲಿದೆ. ಈಗಾಗಲೇ ಬಿಗ್​ ಬಾಸ್​ ಒಂಬತ್ತನೇ ಆವೃತ್ತಿಯ ಪ್ರೋಮೋ ಕೂಡ ವೈರಲ್​ ಆಗಿದ್ದು, ಪ್ರೇಕ್ಷಕರೂ ಕೂಡ ಕಾತುರರಾಗಿದ್ದಾರೆ. ಇನ್ನು ಬಿಗ್​ ಬಾಸ್​ ಓಟಿಟಿ ಯಿಂದ ಕೆಲ ಸ್ಫರ್ಧಿಗಳು ಬಿಗ್​ ಬಾಸ್​ ಸೀಜನ್​ 9ಕ್ಕೆ ಬಡ್ತಿ ಪಡೆಯಲಿದ್ದು, ಬಿಗ್​ ಬಾಸ್​ ಸೀಜನ್​ 9ರ ಉಳಿದ ಸ್ಫರ್ಧಿಗಳು ಯಾರಿರಬಹುದು ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಿಗಿದೆ.

  Read more about: bigg boss bigg boss ott
  English summary
  Bigg Boss Kannada OTT : Contestant Lokesh re-Entry to bigg Boss ott finale week
  Thursday, September 15, 2022, 11:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X