Bigg Boss Kannada OTT : 'ಸಾನ್ಯಾ'ಯಿಂದ 'ನಂದಿನಿ- ಜಸ್ವಂತ್' ನಡುವೆ ಪದೇ, ಪದೇ ಜಗಳ!
ಬಿಗ್ ಬಾಸ್ ಮನೆ ಎಂದ ಮೇಲೆ ಜಗಳ, ಕದನ, ಸ್ನೇಹ, ಪ್ರೀತಿ, ಮುನಿಸು ಇದ್ದಿದೆ. ಕೆಲವೊಮ್ಮೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧೆಗಳ ನಡುವೆ ದೊಡ್ಡಮಟ್ಟದಲ್ಲಿ ಜಗಳವಾದರೆ, ಮತ್ತೊಮ್ಮೆ ಒಳಗೊಳಗೆ ಮುನಿಸು ಮಾಡಿಕೊಂಡು ಮುಖ ತಿರುಗಿಸಿಕೊಂಡಿರುತ್ತಾರೆ.
ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿ ಎದುರಾಗುವಂಥ ಸಂದರ್ಭಗಳು. ಇಲ್ಲಿ ಸ್ನೇಹಿತರಾದವರು ವೈರಿಗಳಾಗುತ್ತಾರೆ. ವೈರಿಗಳಾಗಿದ್ದವರು ಸ್ನೇಹಿತರಾಗುತ್ತಾರೆ. ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇದು ಸ್ಪರ್ಧಿಗಳ ನಿಜ ಗುಣವನ್ನು ಹೊರುವ ಕಾರ್ಯಕ್ರಮ ಹಾಗಾಗಿ ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ.
ಸದ್ಯ ಕನ್ನಡದ ಬಿಗ್ ಬಾಸ್ ಸೀಸನ್ 1 ಓಟಿಟಿ ಪ್ರಸಾರವಾಗುತ್ತಿದೆ. ಈ ಸೀಸನ್‌ನಲ್ಲಿ ಕೂಡ ಹಲವು ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಭಾಗಿಯಾಗಿದ್ದು ಜಗಳ, ಮುನಿಸು, ಸ್ನೇಹ, ಪ್ರೀತಿ ಇದೆಲ್ಲವೂ ಕೂಡ ಸರ್ವೇಸಾಮಾನ್ಯವಾಗಿದೆ. ಈ ವಿಚಾರದಲ್ಲಿ ಇದೀಗ ಸದ್ದು ಮಾಡುತ್ತಿರುವುದು ನಂದಿನಿ ,ಜಸ್ವಂತ್ ಮತ್ತು ಸಾನಿಯಾ.

ಜಸ್ವಂತ್, ನಂದಿನಿ ಜಗಳ!
ಬಿಗ್ ಬಾಸ್ ಮನೆಗೆ ಎಲ್ಲರೂ ಒಂಟಿಯಾಗಿ ಬಂದಿದ್ದಾರೆ. ಆದರೆ ಜೋಡಿ ಬಂದಿದ್ದು ನಂದಿನಿ, ಜಸ್ವಂತ್ ಮಾತ್ರ. ಹಾಗಾಗಿ ಈ ಜೋಡಿ ಹೇಗೆ ಇರುತ್ತೆ ಎನ್ನುವ ವಿಚಾರ ಮೊದಲಿನಿಂದಲೂ ಸದ್ದು ಮಾಡುತ್ತಿತ್ತು. ಮೊದಲ ಈ ಜೋಡಿಗಳು ದಿ ಪರ್ಫೆಕ್ಟ್ ಎನಿಸಿಕೊಂಡಿತು. ಆದರೆ ಬರುಬರುತ್ತಾ ಚಿಕ್ಕ, ಚಿಕ್ಕ ವಿಚಾರಕ್ಕೂ ಮನಸ್ತಾಪ ಮಾಡಿಕೊಳ್ಳುತ್ತಿದ್ದಾರೆ. ಪದೇ, ಪದೇ ನಂದಿನಿ ಜಸ್ವಂತ್ ಜೊತೆಗೆ ಜಗಳ ಮಾಡುತ್ತಿದ್ದಾರೆ. ಅದು ಕೂಡ ಸ್ನೇಹಿತೆ ಸಾನ್ಯಾ ವಿಚಾರಕ್ಕೆ ಎನ್ನುವುದೇ ಅಚ್ಚರಿ.

ಜಸ್ವಂತ್ ಮೇಲೆ ನಂದು ಮುನಿಸು!
ನಂದಿನಿ, ಜಸ್ವಂತ್ ಸೆಪ್ಟೆಂಬರ್ ಎರಡರ ಸಂಚಿಕೆಯಲ್ಲಿ ಬೆಳಗ್ಗೆಯೇ ಜಗಳವಾಡಿಕೊಂಡು, ಮತ್ತೇ ಮುನಿಸು ಮರೆತು ಒಂದಾದರು. ಆದರೆ ಒಂದು ಸಂದರ್ಭದಲ್ಲಿ ಗಾರ್ಡನ್ ಏರಿಯಾದ ಸೋಫಾದಲ್ಲಿ ನಂದಿನಿ, ಸಾನ್ಯ, ರೂಪೇಶ್, ಜಸ್ವಂತ್ ಕುಳಿತಿರುತ್ತಾರೆ. ಮೊದಲು ನಂದಿನ ಪಕ್ಕದಲ್ಲಿ ಕೂತುಕೊಂಡಿದ್ದ ಜಸ್ವಂತ್, ನಂತರ ಸಾನ್ಯ ಪಕ್ಕದಲ್ಲಿ ಸೋಫಾ ಕೈಮೇಲೆ ಕೂರುತ್ತಾರೆ. ಆಗ ನಂದಿನಿ ನನ್ನ ಪಕ್ಕ ಇಷ್ಟು ಜಾಗ ಇದೆಯಲ್ಲಾ, ಇಲ್ಲಿ ಕುಳಿತುಕೊಳ್ಳಲು ಸಮಸ್ಯೆನಾ ಎನ್ನುತ್ತಾಳೆ. ಆದರೂ ಜಸ್ವಂತ್ ಬೇರೆ ಕುರ್ಚಿ ತೆಗೆದುಕೊಂಡು ಬಂದು ಕೂರುತ್ತಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೇ ಸಂಜೆ ಜಗಳ ಶುರುವಗುತ್ತದೆ.

ಯಾವಾಗ್ಲೂ ಸಾನ್ಯಾ ಜೊತೆ ಇರ್ತಿಯಾ- ನಂದು!
ನಂದಿನಿ ಮುನಿಸನ್ನು ಜಸ್ವಂತ್ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಾರೆ. ಮಾತಿಗೆ ಮಾತು ಬೆಳೆದು, ನಂದಿನಿ ತನ್ನ ಬೇಸರಕ್ಕೆ ನಿಜವಾದ ಕಾರಣ ಏನು ಎನ್ನುವುದನ್ನು ಹೇಳಿಕೊಳ್ಳುತ್ತಾಳೆ. 'ನೀನೂ ನನಗಿಂತ ಹೆಚ್ಚಾಗಿ, ಬೇರೆ ಅವರ ಜೊತೆಗೆ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಿದ್ದೀಯಾ. ಮನೆಯವರ ವಿಡಿಯೋ ಮತ್ತು ಅಪ್ಪನ ವಿಚಾರದಲ್ಲಿಆದ ಬೇಸರವನ್ನು ಸಾನ್ಯಾ ಜೊತೆಗೆ ಹಂಚಿಕೊಂಡಿದ್ದೀಯಾ, ಅಡುಗೆ ಮನೆಯಲ್ಲೂ ಕೂಡ ಸದಾ ಸಾನ್ಯಾ ಜೊತೆಗೆ ಇರ್ತಿಯಾ. ಅದೆಲ್ಲಾ ನೀನು ನನ್ನ ಜೊತೆಗೆ ಯಾಕೆ ಮಾಡಲ್ಲ' ಎಂದು ಕೇಳುತ್ತಾಳೆ. ಕೆಲಕಾಲ ವಾದ ಮಡಿದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಸುಮ್ಮನಾಗುತ್ತಾರೆ.

ನಂದಿನಿ ಮಾತಿನಿಂದ ಸಾನ್ಯಾ ಕಣ್ಣೀರು!
ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ನಂದಿನಿ ಮತ್ತು ಜಸ್ವಂತ್ ನಡುವೆ ಸಾನ್ಯ ಬಗ್ಗೆ ಕೆಲವು ವಿಚಾರಗಳನ್ನು ಸ್ಪರ್ಧಿಗಳು ಮಾತನಾಡಿದ್ದಾರೆ. ಈ ವಿಚಾರವಾಗಿ ಉದಯ್ ಕೂಡ ಮಾತನಾಡಿದ್ದರು, ಹಾಗಾಗಿ ವಿಕೆಂಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಪ್ರಸ್ತಾಪಿಸಬೇಕಾಗಿತ್ತು. ಉದಯ್ ಸೂರ್ಯ ಕೂಡ ಸಾನ್ಯಾ, ಜಸ್ವಂತ್ ಬಗ್ಗೆ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಉದಯ್ ತನ್ನ ಹೇಳಿಕೆಯನ್ನು ಸ್ಪಷ್ಟ ಪಡಿಸಿದ ಬಳಿಕ ಈ ವಿಚಾರ ಅಲ್ಲಿಗೆ ಮುಗಿದುಹೋಗಿತ್ತು. ಆದರೆ ಈಗ ಈ ವಿಚಾರವನ್ನು ಮತ್ತೆ ನಂದಿನಿ ಪ್ರಸ್ತಾಪ ಮಾಡಿದ್ದು ಸಾನ್ಯಾಗೆ ನೋವುಂಟು ಮಾಡಿದೆ. ನೀವು ಇಬ್ಬರು ಹೆಚ್ಚು ಸಮಯ ಕಳೆಯುವುದರಿಂದ ಮನೆಯಲ್ಲಿ ಈ ರೀತಿ ಮಾತುಗಳು ಬರುತ್ತದೆ ಎನ್ನುವ ಅರ್ಥದಲ್ಲಿ ನಂದಿನಿ ಸಾನ್ಯಾಗೆ ಹೇಳುತ್ತಾರೆ. ಇದರಿಂದ ಸಾನ್ಯಾ ನೊಂದು ಕಣ್ಣೀರು ಹಾಕುತ್ತಾರೆ.


Click it and Unblock the Notifications











