For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ರೂಪೇಶ್‌ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!

  By ಎಸ್ ಸುಮಂತ್
  |

  ಆರ್ಯವರ್ಧನ್ ಎಂದಾಕ್ಷಣ ನಮಗೆ ನೆನಪಾಗುತ್ತಿದ್ದದ್ದು "ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್. ನಾನು ಹೇಳ್ತೀನಿ ಅಂತ ಆಗುತ್ತೋ ಅಥವಾ ಅದು ಆಗುತ್ತೆ ಅಂತ ಹೇಳ್ತಿನೋ ಆ ದೇವರಿಗೆ ಗೊತ್ತು" ಎಂಬ ಡೈಲಾಗ್ ಅನ್ನು ಎಲ್ಲರೂ ಚಾಚು ತಪ್ಪದೆ ಹೇಳುತ್ತಾರೆ. ಆದರೆ ಆರ್ಯವರ್ಧನ್ ಒಳಗೊಬ್ಬ ಮುಗ್ಧನಿದ್ದಾನೆ ಎಂಬುದು ಗೊತ್ತಾಗಿದ್ದೆ ಬಿಗ್ ಬಾಸ್‌ಗೆ ಬಂದ ಮೇಲೆ ಥೇಟ್ ಮಗುವಿನ ಮನಸ್ಸು ಅವರದ್ದು. ಅವರನ್ನು ಇಷ್ಟಪಡದವರು ಯಾರು ಇಲ್ಲ. ಆ ರೀತಿಯಾಗಿದ್ದಾರೆ ಆರ್ಯವರ್ಧನ್.

  ಇತ್ತೀಚೆಗೆ ಎಲ್ಲರ ಜೊತೆಗೂ ಆರ್ಯವರ್ಧನ್ ತಮ್ಮನ್ನು ತಾವೂ ಗುರುತಿಸಿಕೊಳ್ಳುತ್ತಾರೆ. ಆರ್ಯವರ್ಧನ್ ಅವರಿಗೆ ಸಡನ್ ಆಗಿ ಮಾತನಾಡುವುದಕ್ಕೆ ಬರುವುದಿಲ್ಲ. ಅದನ್ನು ಈಗಾಗಲೇ ಸಾಕಷ್ಟು ಬಾರಿ ವ್ಯಕ್ತಪಡಿಸಿದ್ದಾರೆ. ಏನಾದರೂ ಹೇಳಿದರೆ ಅವರಿಗೆ ನೋವಾಗುತ್ತೇನೋ ಎಂಬುದನ್ನು ಅವರು ಯೋಚನೆ ಮಾಡುತ್ತಾರೆ. ಅದಷ್ಟೇ ಅಲ್ಲ ಅವರಿಗೆ ನೋವಾದರೂ ಕೂಡ ಎಲ್ಲಿಯೂ ಎಕ್ಸ್‌ಪ್ರೆಸ್ ಮಾಡಿಲ್ಲ.

  BBK OTT : ಬಿಗ್ ಬಾಸ್ ಮನೆಯಲ್ಲಿ ದೆವ್ವ, ಹೆದರಿದ ಆರ್ಯವರ್ಧನ್ ಗುರುಜೀ!BBK OTT : ಬಿಗ್ ಬಾಸ್ ಮನೆಯಲ್ಲಿ ದೆವ್ವ, ಹೆದರಿದ ಆರ್ಯವರ್ಧನ್ ಗುರುಜೀ!

   ರೂಪೇಶ್ ಜೊತೆ ಹೆಚ್ಚು ಸಮಯ

  ರೂಪೇಶ್ ಜೊತೆ ಹೆಚ್ಚು ಸಮಯ

  ರೂಪೇಶ್ ಕ್ಯಾರೆಕ್ಟರ್ ಎಲ್ಲರಿಗೂ ಇಷ್ಟವಾಗುವಂತ ಕ್ಯಾರೆಕ್ಟರ್. ಅದೇ ರೀತಿ ಆರ್ಯವರ್ಧನ್ ಕ್ಯಾರೆಕ್ಟರ್ ಕೂಡ ಎಲ್ಲರೂ ಮೆಚ್ಚುವಂಥದ್ದು. ಹೀಗಾಗಿ ಇಬ್ಬರು ಒಳ್ಳೆ ಫ್ರೆಂಡ್ಸ್ ಆಗಿದ್ದಾರೆ. ರೂಪೇಶ್, ಬರೀ ಸಾನ್ಯಾ, ನಂದಿನಿ, ಜಶ್ವಂತ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದ ರೂಪೇಶ್ ಈಗ ಮನೆಯವರೆಲ್ಲರ ಒಟ್ಟಿಗೆ ಬೆರೆಯಲು ಆರಂಭಿಸಿದ್ದಾರೆ. ಈ ಸಮಯದಲ್ಲಿ ರೂಪೇಶ್‌ಗೆ ಹೆಚ್ಚು ಇಷ್ಟವಾಗಿರುವುದು ಆರ್ಯವರ್ಧನ್.

  Bigg Boss Kannada OTT: ಸಾನ್ಯ ಒಳ ಉಡುಪಿನ ಬಗ್ಗೆ ಉದಯ್ ಮಾತಾಡಿದ್ದು ತಪ್ಪು ಅನ್ನಿಸ್ತಾ ?Bigg Boss Kannada OTT: ಸಾನ್ಯ ಒಳ ಉಡುಪಿನ ಬಗ್ಗೆ ಉದಯ್ ಮಾತಾಡಿದ್ದು ತಪ್ಪು ಅನ್ನಿಸ್ತಾ ?

   ಮಗುವಿನಂತ ಮನಸ್ಸುಳ್ಳ ಆರ್ಯವರ್ಧನ್

  ಮಗುವಿನಂತ ಮನಸ್ಸುಳ್ಳ ಆರ್ಯವರ್ಧನ್

  ಮೊದಲೇ ಹೇಳಿದಂತೆ ಗುರೂಜಿ ತಮ್ಮ ನಡವಳಿಕೆಯಲ್ಲಿ ತುಂಬಾ ಭಿನ್ನವಾಗಿದ್ದಾರೆ. ಒಮ್ಮೊಮ್ಮೆ ಅವರು ಮಾತನಾಡುವುದು ಅರ್ಥವೇ ಆಗುವುದಿಲ್ಲ. ಆದರೂ ಅದರಲ್ಲೊಂದು ಮುಗ್ಧತೆ ಅಡಗಿರುತ್ತೆ. ಅದನ್ನು ಈಗಾಗಲೇ ಮನೆಯವರು ಒಪ್ಪಿಕೊಂಡಾಗಿದೆ. ರಾಕೇಶ್ ಕೂಡ ಈ ಬಗ್ಗೆ ಮಾತನಾಡಿದ್ದರು. ಅವರಲ್ಲಿ ಮಗುವಿನಂತ ಮನಸ್ಸಿದೆ. ಕೆಲವೊಮ್ಮೆ ಆ ರೀತಿಯೆ ನಗುತ್ತಾರೆ ಎಂದಿದ್ದರು. ಅಷ್ಟೇ ಅಲ್ಲ ಸೋಮಣ್ಣ ಕೂಡ ಆರ್ಯವರ್ಧನ್ ಬಳಿ ಅದೇ ರೀತಿಯ ಮುಗ್ಧತೆಯನ್ನು ಕಂಡಿದ್ದಾರೆ.

   ತಂದೆಯ ಸಮಾನವೆಂದ ರೂಪೇಶ್

  ತಂದೆಯ ಸಮಾನವೆಂದ ರೂಪೇಶ್

  ತಂದೆ, ತಾಯಿ, ಅಕ್ಕ, ತಂಗಿ ಹೀಗೆ ಸ್ವಂತದವರ ಪ್ರೀತಿ ಅಷ್ಟು ಸುಲಭದಲ್ಲಿ ಎಲ್ಲರಿಂದಲೂ ಸಿಗುವುದಿಲ್ಲ. ಅಷ್ಟು ಸುಲಭದಲ್ಲಿ ಯಾರು ಅಷ್ಟು ಹತ್ತಿರವೂ ಆಗುವುದಿಲ್ಲ. ಅಷ್ಟು ಹತ್ತಿರವಾಗುತ್ತಾರೆ ಎಂದರೆ ಅವರ ಮನಸ್ಸಲ್ಲಿ ಎದುರುಗಡೆ ಇರುವವರ ಮೇಲೆಯೂ ಅಷ್ಟೇ ಪ್ರೀತಿ ಹುಟ್ಟಿರಬೇಕಾಗುತ್ತದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಆರ್ಯವರ್ಧನ್ ಅವರಿಗೆ ತಂದೆಯ ಸ್ಥಾನ ನೀಡಿದ್ದಾರೆ. ಅವರು ನನ್ನನ್ನು ಕಂದಾ ಎಂದು ಕರೆದಾಗೆಲ್ಲಾ ನನ್ನ ತಂದೆಯೇ ನೆನಪಾಗುತ್ತಾರೆ. ಅವರನ್ನು ಕಳೆದುಕೊಂಡಾಗಿನಿಂದ ಆ ನೋವು ನನ್ನನ್ನು ಕಾಡುತ್ತಿದೆ. ಆ ಪ್ರೀತಿಯನ್ನು ಆರ್ಯವರ್ಧನ್ ತುಂಬಿದ್ದಾರೆ ಎಂದು ಭಾವುಕತೆಗೆ ಒಳಗಾಗಿದ್ದಾರೆ.

   ರೂಪೇಶ್, ಆರ್ಯವರ್ಧನ್‌ಗೆ ಅಳಿಯ

  ರೂಪೇಶ್, ಆರ್ಯವರ್ಧನ್‌ಗೆ ಅಳಿಯ

  ಬಿಗ್‌ ಬಾಸ್ ಮನೆಯಲ್ಲಿ ಆಗಾಗ ಅತಿ ಚೆಂದದ ಆಟಗಳನ್ನೇ ಆಡಿಸುತ್ತಾರೆ. ಊಹೆಗೂ ಮೀರಿದ ಗೇಮ್‌ಗಳು ಅವು. ಈ ಬಾರಿ ಯಾರಿಗೆ ಏನೆಲ್ಲಾ ಇಷ್ಟವಾಗುತ್ತೆ. ಆ ಗಿಫ್ಟ್ ಗಳನ್ನು ತೆಗೆದುಕೊಂಡು, ತಮಗುಷ್ಟವಾದವರಿಗೆ ನೀಡಬೇಕು ಎಂಬ ಟಾಸ್ಕ್. ಆ ಟಾಸ್ಕ್ ನಲ್ಲಿ ಆರ್ಯವರ್ಧನ್ ಒಂದು ಗೊಂಬೆಯನ್ನು ಎತ್ತಿಕೊಳ್ಳುತ್ತಾರೆ. ಅದನ್ನು ನನ್ನ ಮಗಳೆಂದು ಭಾವಿಸುತ್ತಾರೆ. ನನ್ನ ಮಗಳನ್ನು ರೂಪೇಶ್‌ಗೆ ಕೊಡಲು ಬಯಸುತ್ತೇನೆ ಎಂದು ಹೇಳಿ ಗೊಂಬೆ ಮಗಳನ್ನು ರೂಪೇಶ್ ಕೈಲಿಟ್ಟು ಅಳಿಯ ಮಾಡಿಕೊಂಡಿದ್ದಾರೆ.

  English summary
  Bigg Boss Kannada OTT August 29th Episode Written Update. Here is the details About Aryavardhan And Rupesh Episode.
  Monday, August 29, 2022, 20:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X