For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಬೀಪ್ ಇರಲ್ಲ.. ಟಿವಿ ರೀಚ್ ಕಮ್ಮಿ ಆಗಲ್ಲ!

  |

  ಕನ್ನಡ ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ವೂಟ್ ಒಟಿಟಿಯಲ್ಲಿ ಬಿಗ್ ಬಾಸ್‌ನ ಮೊದಲ ಸೀಸನ್ ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಇದೂವರೆಗೂ ಟಿವಿಯಲ್ಲಿ ನೋಡಿದವರಿಗೆ ಒಟಿಟಿಯಲ್ಲಿ ಈ ಸೀಸನ್ ಹೇಗಿರುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ.

  ಒಟಿಟಿಯಲ್ಲಿ ಬಿಗ್ ಬಾಸ್ ಮೊದಲ ಸೀಸನ್ ಹೇಗಿರುತ್ತೆ? ಅದರ ಸ್ವರೂಪವೇನು? ಅನ್ನೋದನ್ನು ತಿಳಿಸಲು ಕಿಚ್ಚ ಸುದೀಪ್ ಹಾಗೂ ಪರಮೇಶ್ವರ್ ಗುಂಡ್ಕಲ್ ಮುಂದಾಗಿದ್ದರು. ಈ ವೇಳೆ 24 ಗಂಟೆಗಳ ಕಾಲ ಒಟಿಟಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋ ಬಗ್ಗೆ ಕಿಚ್ಚ ಸುದೀಪ್ ಇಂಟ್ರೆಸ್ಟಿಂಗ್ ಸುದ್ದಿಯನ್ನು ಬಿಟ್ಟುಕೊಟ್ಟಿದ್ದಾರೆ.

  'ಬಿಗ್‌ ಬಾಸ್‌'ನಲ್ಲಿ ಸುದೀಪ್ ಹಾಕುವ ಬಟ್ಟೆಗಳ ಸೀಕ್ರೇಟ್ ರಿವೀಲ್! 'ಬಿಗ್‌ ಬಾಸ್‌'ನಲ್ಲಿ ಸುದೀಪ್ ಹಾಕುವ ಬಟ್ಟೆಗಳ ಸೀಕ್ರೇಟ್ ರಿವೀಲ್!

  24 ಗಂಟೆ ಪ್ರಸಾರ ಆಗುವ ರಿಯಾಲಿಟಿ ಶೋ ಅಂದಾಗ ಅದರದ್ದೇ ಸವಾಲುಗಳಿರುತ್ತೆ. ಈ ವೇಳೆ ಕೆಲವು ದೃಶ್ಯಗಳಿಗೆ, ಡೈಲಾಗ್‌ಗಳಿಗೆ ಕತ್ತರಿ ಹಾಕುವುದು ಅಸಾಧ್ಯ. ಇದಕ್ಕೆ ತಂಡ ಹೇಗೆ ಸಿದ್ಧವಾಗಿದೆ? ಅನ್ನೋ ಕುತೂಹಲವಿದ್ದೇ ಇರುತ್ತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮೊದಲ ಸೀಸನ್‌ಗೆ ಎದುರಾಗುವ ಸವಾಲುಗಳ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಬೀಪ್ ಇರೋದೇ ಇಲ್ಲ ಎಂದು ಹೇಳಿದ್ದಾರೆ.

  ನನ್ನ ಲೈಫ್‌ನಲ್ಲಿ ಸ್ಪೆಷಲ್ ಈ ಬಿಗ್ ಬಾಸ್

  ನನ್ನ ಲೈಫ್‌ನಲ್ಲಿ ಸ್ಪೆಷಲ್ ಈ ಬಿಗ್ ಬಾಸ್

  ಬಿಗ್ ಬಾಸ್ ಮೊದಲ ಸೀಸನ್ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಅನ್ನುವಾಗಲೇ ವೀಕ್ಷಕರಷ್ಟೇ ಕಿಚ್ಚ ಸುದೀಪ್ ಕೂಡ ಕಾತುರರಾಗಿದ್ದಾರೆ. ಅಲ್ಲದೆ ಈ ಸೀಸನ್ ತನ್ನ ಲೈಫ್‌ನಲ್ಲಿ ಎಷ್ಟು ಮುಖ್ಯ ಅನ್ನೋ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. "ನನ್ನ ಲೈಫ್‌ನಲ್ಲಿ ಏನಾದರೂ ಸ್ಪೆಷಲ್ ಇರಲ್ಲ ಅಂದರೆ ಅಲ್ಲಿ ನಾನು ಇರಲ್ಲ. ನಾನು ಕೇವಲ ಹಣಕ್ಕಾಗಿ ಇದನ್ನೆಲ್ಲಾ ಮಾಡುವುದಿಲ್ಲ. ಯಾರದ್ದೋ ಒತ್ತಡಕ್ಕೆ ಮಣಿದು ನಾನು ಇದನ್ನೆಲ್ಲಾ ಮಾಡುವುದಿಲ್ಲ. ಶನಿವಾರ ಬಂತು ಅಂದರೆ, ಅವರು ನನಗೋಸ್ಕರ ಡ್ರೆಸ್ ಮಾಡಿಕೊಂಡು ಕೂರುತ್ತಾರೆ. ಅದು ತುಂಬಾನೇ ಸುಂದರ. ಅದು ಅವರಿಗೆ ಬೇಕಾಗಿರಲಿಲ್ಲ. ಅದರಿಂದ ಅವರಿಗೆ ವೋಟ್ ಜಾಸ್ತಿ ಆಗುತ್ತೆ. ನಾನೇನೋ ಅವರಿಗೆ ಸಪೋರ್ಟ್ ಮಾಡುತ್ತೇನೆ ಅಂತಲ್ಲ. ನಾನು ಮಾತಾಡುವುದರಿಂದ ಅವರ ಮೇಲಿನ ಬದಲಾವಣೆ ನಿಲ್ಲುತ್ತೆ. ನನ್ನ ಮೇಲೆ ಒಂದು ಜವಾಬ್ದಾರಿ ಇದೆ. ಆ ಜವಾಬ್ದಾರಿ ನನಗೆ ಇಷ್ಟ. ಅದೇ ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ." ಎಂದಿದ್ದಾರೆ ಕಿಚ್ಚ ಸುದೀಪ್.

  ಬೀಪ್ ಅನ್ನೋದೇ ಇಲ್ಲ

  ಬೀಪ್ ಅನ್ನೋದೇ ಇಲ್ಲ

  "ನಮ್ಮಲ್ಲಿ ಬೀಪ್ ಅನ್ನೋದೇ ಇಲ್ಲ. ಮೊದಲಿಂದ ಕೊನೆಯವರೆಗೂ ಹಿಡಿತದಲ್ಲಿ ಇರುತ್ತೇವೆ. ಅದರಲ್ಲೇ ಮಾತಾಡುತ್ತೇವೆ. ಪರಮ್ ಅವರಿಗೆ ಇದೂವರೆಗೂ ಅಂತಹ ಟಾಸ್ಕ್ ಕೊಟ್ಟಿಲ್ಲ ನಾವು. ಎಲ್ಲಿ ಎಡಿಟ್ ಮಾಡಿದ್ದಾರೆ ಅಂದರೆ, ಮಧ್ಯದಲ್ಲಿ ಎಲ್ಲೋ ಒಂದು ಜಾಗಕ್ಕೆ ಹೋಗಿ ಬಂದಿದ್ದಾರೆ ಅಂದಾಗ ಮಾತ್ರ ಎಡಿಟ್ ಮಾಡಿದ್ದಾರೆ. ಇದು ತುಂಬಾ ಸೂಕ್ಷ್ಮ ಸ್ಟೇಜ್. ತುಂಬಾ ಯೋಚನೆ ಮಾಡಿ ಮಾತಾಡಬೇಕು. ನಮ್ಮ ಭಾಷೆ, ನಡವಳಿಕೆ ಮೇಲೆ ತುಂಬಾನೇ ಹಿಡಿತ ಇರಬೇಕು." ಎನ್ನುತ್ತಾರೆ ಸುದೀಪ್.

  ಟಿವಿಯಲ್ಲೂ ರೀಚ್ ಆಗುತ್ತೆ

  ಟಿವಿಯಲ್ಲೂ ರೀಚ್ ಆಗುತ್ತೆ

  "ಒಟಿಟಿಯಲ್ಲಿ ಸಿನಿಮಾ ಬರುವುದಕ್ಕೆ ಶುರುವಾದ ಮೇಲೆ ಸಿನಿಮಾ ಬೆಲೆನೂ ಜಾಸ್ತಿಯಾಗಿದೆ. ಟಿವಿ ಹಾಗೂ ಒಟಿಟಿ ಎರಡೂ ಉತ್ತಮವಾಗಿದೆ. ಈಗ ಕ್ರಿಕೆಟ್ ಕೂಡ ಟಿವಿಯಲ್ಲಿಯೇ ನೋಡುತ್ತಾರೆ. ಈಗ ಮನೆಯಲ್ಲಿಯೇ ಕೂತು ನೋಡವಂತಹ ಒಂದು ಕಾಲವಿತ್ತು. ಈಗ ಕಾರ್ಯಕ್ರಮಗಳು ಜನರು ಎಲ್ಲಿದ್ದಾರೋ ಅಲ್ಲಿಗೆ ರೀಚ್ ಆಗುತ್ತಿದೆ. ಆ ರೀಚ್ ಇರಲಿಲ್ಲ ಅಂದರೆ, ಬಹುಶ: ಇವರು ಈ ಸೀಸನ್ ಅನ್ನು ಶುರು ಮಾಡುತ್ತಲೇ ಇರಲಿಲ್ಲ. ಕೊನೆಯೂ ಎರಡೂ ಸೀಸಸ್‌ನಲ್ಲೂ ವೂಟ್‌ನಲ್ಲಿ ನೋಡಿ ಅಂತ ಹೇಳುತ್ತಲೇ ಇದ್ದೆವು. ಎಂದಿದ್ದಾರೆ ಸುದೀಪ್

  ಒಟಿಟಿ ಮೈನಸ್ ಅಲ್ಲ

  ಒಟಿಟಿ ಮೈನಸ್ ಅಲ್ಲ

  ಬಿಗ್ ಬಾಸ್ ಒಟಿಟಿ ಸೀಸನ್ 1ರಿಂದ ಟಿವಿಯಲ್ಲಿ ರೀಚ್ ಕಡಿಮೆ ಆಗುತ್ತೆ ಎಂಬ ಮಾತು ಇದೆ. ಅದಕ್ಕೆ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. "ಒಟಿಟಿ ಸೀಸನ್ ಮುಗಿದ ಮೇಲೆ ಟಿವಿ ಸೀಸನ್ ಇದ್ದೇ ಇರುತ್ತೆ. ಇದು ಬೋನಸ್ ಹೊರತು. ಮೈನಸ್ ಅಲ್ಲ. ಟಿವಿಗಿಂತ ಸಮನಾದ ಅಥವಾ ಅದಕ್ಕಿಂತ ಹೆಚ್ಚು ವೀಕ್ಷಕರನ್ನು ಪಡೆದುಕೊಳ್ಳಬಹುದು. ಇದು ಡಿಜಿಟಲ್ ಸ್ಪೇಸ್‌ನಿಂದ ಸಾಧ್ಯವಾಗಿದೆ. ಕೋವಿಡ್ ಬಂದು ಕಡಿಮೆ ಆದ ಬಳಿಕ ನಾವು ನೋಡಿದಂತೆ ಡಿಜಿಟಲ್ ಬೂಮ್ ಇರುವುದರಿಂದ ಯಾವುದೇ ಸಂಶಯವೂ ಇಲ್ಲ ಎಂದು ಎನಿಸುತ್ತಿದೆ." ಎಂದು ಪರಮೇಶ್ ಗುಂಡ್ಕಲ್ ಹೇಳಿದ್ದಾರೆ.

  English summary
  Bigg Boss Kannada OTT Season 1: Sudeep Says There Is No Beap In The Show, Know More.
  Tuesday, August 2, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X