Bigg Boss Kannada OTT : ನಾವೇನು ನಿನ್ನ ಗುಲಾಮರಲ್ಲ ಎಂದು ಸೋನು ವಿರುದ್ಧ ರೊಚ್ಚಿಗೆದ್ದ ಸಾನ್ಯಾ

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಆಗಾಗ ಸಣ್ಣ ಪುಟ್ಟ ವಿಚಾರಗಳಿಂದ ದೊಡ್ಡ ಜಗಳವಾಗುವುದು ಕಾಮನ್. ಆ ಜಗಳ ಡಿಸ್ಟೆನ್ಸ್ ಕೂಡ ಕ್ರಿಯೇಟ್ ಮಾಡುತ್ತೆ. ಒಮ್ಮೊಮ್ಮೆ ಫ್ರೆಂಡ್ಶಿಪ್ ಅನ್ನು ಗಟ್ಟಿ ಮಾಡುತ್ತೆ. ಆದರೆ, ಈಗ ದೊಡ್ಮನೆಯಲ್ಲಿ ಸಾನ್ಯಾ ಹಾಗೂ ಸೋನು ಜಗಳ ಜೋರಾಗಿದೆ. ಯಾವುದೇ ಕಮೆಂಟ್ ಮಾಡಬೇಕು ಎನಿಸಿದರೂ ಸೋನು ಹೆಸರು ಬರುತ್ತಿದೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಸೋನು ಟಿವಿ ಬಿಗ್ ಬಾಸ್‌ಗೆ ಹತ್ತಿರವಾಗಿದ್ದಾಳೆ.

ಸೋನು ಕ್ಯಾರೆಕ್ಟರ್ ಎಂತದ್ದು ಎಂಬುದನ್ನು ಹೊಸದಾಗಿ ಹೇಳುವ ಅಗತ್ಯವಿಲ್ಲ. ಆಕೆ ಯಾವತ್ತಿಗೂ ತನ್ನ ನಿರ್ಧಾರವನ್ನು ಬಿಟ್ಟು ಬೇರೆಯದ್ದನ್ನು ಒಪ್ಪಿಕೊಳ್ಳುವುದಿಲ್ಲ. ಏನೇ ಆದರೂ ಅವಳ ಮನಸ್ಸಿಗೆ ಏನು ಅನ್ನಿಸುತ್ತದೆ ಅಷ್ಟನ್ನೇ ಹೇಳುತ್ತಾಳೆ. ಇದು ಸಾನ್ಯಾಗೆ ಗುಲಾಮಗಿರಿಯಂತೆ ಕಂಡಿದೆ. ಅದಕ್ಕಾಗಿಯೇ ಸೋನುಗೆ ಒತ್ತಿ ಒತ್ತಿ ಹೇಳುತ್ತಿದ್ದಾಳೆ.

ಸೋನು-ಸಾನ್ಯಾ ದೂರಾದೂರ

ಸೋನು-ಸಾನ್ಯಾ ದೂರಾದೂರ

ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಸೋನು ಮತ್ತು ಸಾನ್ಯಾ ಫ್ರೆಂಡ್ಶಿಪ್ ಏನು ಮೆಂಟೈನ್ ಮಾಡಿಲ್ಲ. ಎದುರು ಸಿಕ್ಕಾಗ ಹಾಯ್ ಹೇಳಬೇಕಾ ಎನಿಸಿದರೆ ಹೇಳುತ್ತಾರೆ. ಅನಿವಾರ್ಯತೆ ಬಿದ್ದಾಗ ಮಾತನಾಡುತ್ತಾರೆ. ಆದ್ರೆ ಇತ್ತೀಚೆಗೆ ಸಾನ್ಯಾಗೆ ಸೋನು ಕಂಡರೆ ಅಷ್ಟಕ್ಕೆ ಅಷ್ಟೇ. ಅದರಲ್ಲೂ ವಾರದ ಕತೆ ಕಿಚ್ಚ ಸುದೀಪನ ಜೊತೆ ನಡೆದ ಮಾತುಕತೆಯಿಂದಾಗಿ ಇನ್ನಷ್ಟು ನೊಂದು ಬೆಂದಿದ್ದಾರೆ. ಈಗ ಬಿಗ್ ಬಾಸ್ ಸದಸ್ಯರ ಬಗ್ಗೆ ಹೇಳಿ ಎಂದಾಗಲೂ ಸಾನ್ಯಾ, ಸೋನು ಬಗ್ಗೆ ಗರಂ ಆಗಿಯೇ ಉತ್ತರಿಸಿದ್ದಾರೆ.

ಸೋನು ಗುಲಾಮರಂತೆ ನೋಡುತ್ತಾಳಾ?

ಸೋನು ಗುಲಾಮರಂತೆ ನೋಡುತ್ತಾಳಾ?

ಸೋನು ಸ್ವಲ್ಪ ಒರಟಿ. ಯಾರಿಗೂ ಮರ್ಯಾದೆ ಕೊಡದಂತೆ ಮಾತನಾಡುತ್ತಾಳೆ. ಅವಳ ಮಾತಿನಿಂದಲೇ ಎಲ್ಲರೂ ಅವಳಿಂದ ದೂರ ಇರುತ್ತಿದ್ದರು. ಕಳೆದ ಬಾರಿ ಸುದೀಪ್ ಕೂಡ ಈ ವಿಚಾರವನ್ನು ಪ್ರಸ್ತಾಪವನ್ನು ಮಾಡಿದ್ದರು. ಈ ವಾರ ಕೊಂಚ ಬದಲಾಗಿದ್ದಾಳೆ ಸೋನು. ಆದರೆ ಸಾನ್ಯಾಗೆ ಅದು ಕಂಡಿಲ್ಲ. ಮಾತು ಕೂಡ ಅಷ್ಟಾಗಿ ಬದಲಾವಣೆಯಾಗಿಲ್ಲ. ಹೀಗಾಗಿ ನಾವೇನು ನಿಮ್ಮ ಗುಲಾಮರಲ್ಲ ಅಂತ ಸಾನ್ಯಾ ಜೋರಾಗಿ ಹೇಳಿದ್ದಾರೆ.

ಸಾನ್ಯಾ ಬಗ್ಗೆ ಸೋನು ಹೇಳಿದ್ದೇನು?

ಸಾನ್ಯಾ ಬಗ್ಗೆ ಸೋನು ಹೇಳಿದ್ದೇನು?

ಅವಳು ಅವಳದ್ದೇ ಒಂದು ಲೋಕದಲ್ಲಿ ಇರುತ್ತಾಳೆ. ನಾವೂ ಏನೇ ಹೇಳಿದರೂ ಕೇಳುವ ಶಕ್ತಿ ಇಲ್ಲ. ನಿನ್ನ ಲೋಕದಲ್ಲಿ ನೀನೇ ರಾಣಿ ಅದೇನು ತಪ್ಪಲ್ಲ. ಆದರೆ ನಾವೇನು ನಿನ್ನ ಗುಲಾಮರಲ್ಲ. ನಾವೂ ಕೂಡ ನಮ್ಮ ಲೋಕದಲ್ಲಿಯೇ ಇದ್ದೀವಿ. ಯಾರು ಕೀಳಲ್ಲ ಮೇಲಲ್ಲ. ಎಲ್ಲರಿಗೂ ಗೌರವ ಕೊಡುವುದನ್ನು ಮೊದಲು ಕಲಿ ಎಂದ ಸಾನ್ಯಾ, ಸೋನು ಬಗ್ಗೆ ಹೇಳಿದ್ದಾಳೆ.

ಕಮೆಂಟ್‌ನಲ್ಲಿ ಸಾನ್ಯಾಳಿಗೆ ಕ್ಲಾಸ್

ಕಮೆಂಟ್‌ನಲ್ಲಿ ಸಾನ್ಯಾಳಿಗೆ ಕ್ಲಾಸ್

ಇನ್ನು ಬಿಗ್ ಬಾಸ್ ಅನ್ನು ಸಾಕಷ್ಟು ಜನ ನೋಡುತ್ತಿದ್ದಾರೆ. ಏನಾಗುತ್ತಿದೆ ಎಂಬುದನ್ನು ತಿಳಿಯುತ್ತಿದ್ದಾರೆ. ಇವತ್ತು ಬಿಗ್ ಬಾಸ್ ಹಾಕಿದ್ದ ಪ್ರೊಮೋದಲ್ಲಿ ಸಾನ್ಯಾ ವಿರುದ್ಧವಾಗಿಯೇ ಕಮೆಂಟ್ ಗಳು ಬಂದಿವೆ. ಸೋನುಗೆ ಹೇಳುವುದಕ್ಕೂ ಮುನ್ನ ಮೊದಲು ನೀನು ಬದಲಾಗು ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬರು ಮೊದಲು ನೀನು ರೂಪೇಶ್ ನನ್ನು ಬಿಟ್ಟು ಬಾ ಎಂದಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಜಶ್ವಂತ್ ವಿಚಾರವನ್ನು ತಂದಿದ್ದಾರೆ. ಅದರಲ್ಲಿ ಬೆಸ್ಟ್ ಫ್ರೆಂಡ್ ಎಂದುಕೊಂಡವಳಿಗೆ ನೀನು ಮೋಸ ಮಾಡಿದ್ದೀಯಾ. ಜಶ್ವಂತ್‌ನನ್ನು ಮೊದಲು ಬಿಡು, ಅವನಿಂದ ದೂರ ಇರು ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ.

More from Filmibeat

English summary
Bigg Boss Kannada OTT September 11th Episode Written Update. Here is the details about sanya react Sonu matter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X