For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಜಶು & ನಂದು ದೂರ ಮಾಡಲು ಕಾಯುತ್ತಿದ್ದವರಿಗೆ ಖುಷಿ ಆಯ್ತಾ..?

  By ಎಸ್ ಸುಮಂತ್
  |

  ಸೂಪರ್ ಸಂಡೇ ವಿತ್ ಸುದೀಪ ಜೊತೆ ವೇದಿಕೆಯಲ್ಲಿ ಇಂದು ಒಂದಷ್ಟು ನಗು, ಒಂದಷ್ಟು ತಮಾಷೆಯ ಜೊತೆಗೆ ನಂದಿನಿ ಇಲ್ಲ ಎಂಬುದು ಆಗಾಗ ಕಾಡುತ್ತದೆ. ಯಾಕೆಂದರೆ ಕ್ಯೂಟ್ ಕಪಲ್ ಆಗಿದ್ದ ಜಶ್ವಂತ್ ಹಾಗೂ ನಂದಿನಿ ಈ ವಾರದಿಂದ ದೂರ ದೂರ ಆಗಿದ್ದಾರೆ. ನಿರೀಕ್ಷೆಯನ್ನೇ ಮಾಡದ ನಂದಿನಿ ಲಗೇಜ್ ಎತ್ತುಕೊಂಡು ಹೊರ ಹೋಗಿದ್ದಾರೆ. ಜಶ್ವಂತ್ ಆ ಕ್ಷಣಕ್ಕೆ ಕಣ್ಣೀರು ಹಾಕಿ ಕಳುಹಿಸಿಕೊಟ್ಟಿದ್ದಾನೆ. ಆದರೆ ಅವಳಿಲ್ಲ ಸಮಯ ಕಳೆಯುವುದು ಜಶ್ವಂತ್‌ಗೆ ಕಷ್ಟವಾಗಬಹುದು.

  ನಂದಿನಿ ಇದ್ದಾಗಲೂ ಜಶ್ವಂತ್ ಮತ್ತು ಸಾನ್ಯಾ ಸ್ವಲ್ಪ ಕ್ಲೋಸ್ ಆದವರಂತೆ ಕಂಡಿದ್ದರು. ಆದರೆ ಅದು ನಂದಿನಿಗೆ ನೋವಾದ ಕಾರಣದಿಂದ ರೂಪೇಶ್ ಮಧ್ಯಸ್ಥಿಕೆ ವಹಿಸಿ ಕೊಂಚ ಅಗಲಿಕೆ ಮಾಡಿದ್ದಾಗಿತ್ತು. ಆದರೆ ಈ ವಾರ ನಂದಿನಿಯೇ ಮನೆಯಿಂದ ಹೊರ ಹೋಗಿದ್ದು, ಈಗ ಜಶ್ವಂತ್ ಗೆ ಫುಲ್ ಫ್ರೀಡಂ ಸಿಕ್ಕಂತೆ ಆಗಿದೆ. ಸೂಪರ್ ಸಂಡೇ ವೇದಿಕೆಯಲ್ಲೂ ಅದೇ ವಿಚಾರ ಡಿಸ್ಕಷನ್ ಆಗಿದೆ.

  ಜಶ್ವಂತ್, ನಂದಿನಿ ಇಲ್ಲದೆ ಖುಷಿ

  ಜಶ್ವಂತ್, ನಂದಿನಿ ಇಲ್ಲದೆ ಖುಷಿ

  ಸೂಪರ್ ಸಂಡೇ ಆಗಲು, ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಆಗಲಿ, ಕಿಚ್ಚ ಸುದೀಪ್ ಎಲ್ಲಿ ತಪ್ಪಾಗಿರುತ್ತೋ ಅದನ್ನು ಹೇಳಿ, ಮತ್ತೆ ಮನೆ ಸದಸ್ಯರಿಂದ ಆ ರೀತಿಯ ತಪ್ಪಾಗದಂತೆ ನೋಡಿಕೊಳ್ಳುತ್ತಾರೆ. ಅದರ ಜೊತೆಗೆ ಎಲ್ಲರ ಕಾಲೆಳೆದು ತಮಾಷೆಯನ್ನು ಮಾಡುತ್ತಾರೆ. ಇವತ್ತು ಆ ರೀತಿಯ ಕಾಲೆಳೆಸಿಕೊಳ್ಳುವ ಅವಕಾಶ ಸಿಕ್ಕಿದ್ದು ಜಶ್ಚಂತ್ ಗೆ. ಯಾಕೆಂದರೆ ಯಾವಾಗಲೂ ಜೊತೆಯಲ್ಲೆ ಇರುತ್ತಿದ್ದ ನಂದಿನಿ ದೂರವಾಗಿರುವುದು ಜಶ್ವಂತ್ ಗೆ ಎಷ್ಟು ಖುಷಿಯಾಗಿದೆ ಎಂಬ ಕಾರಣಕ್ಕೆ. ಸುದೀಪ್ ಈ ಪ್ರಶ್ನೆ ಕೇಳಿದ್ದಾರೆ. ನಂದಿನಿ ಇಲ್ಲದೆ ಇರುವುದು ಜಶ್ವಂತ್‌ಗೆ ರಿಲೀಫ್ ಎನಿಸಿದೆ ಎಂದಾಗ ಮುಖಭಾವ ಹಾಗೇನು ಇಲ್ಲ ಎಂದು ಹೇಳಿದಂತೆ ಇತ್ತು. ಅದಕ್ಕೆ ಸುದೀಪ್ ಕಾಲೆಳೆದಿದ್ದಾರೆ.

  ಮನೆಯವರು ಬಯಸಿದ್ದೆ ಆಗಿದೆ

  ಮನೆಯವರು ಬಯಸಿದ್ದೆ ಆಗಿದೆ

  ಒಂದು ಸಲ ಅಲ್ಲ ಎರಡು ಸಲ ಅಲ್ಲ ಯಾವಾಗ ನಂದಿನಿಯನ್ನು ಅಥವಾ ಜಶ್ವಂತ್‌ನನ್ನು ನಾಮಿನೇಟ್ ಮಾಡಲಾಗಿತ್ತೋ ಅಂದೆಲ್ಲಾ ಕೊಡುತ್ತಿದ್ದ ಕಾರಣ ಅವರಿಬ್ಬರು ಯಾವಾಗಲೂ ಕಪಲ್ಸ್ ಆಗಿ ಇರುತ್ತಾರೆ. ದೂರವಾದರೆ ಅವರ ರಿಯಾಲಿಟಿ ಗೊತ್ತಾಗುತ್ತೆ. ಹೀಗಾಗಿ ಇಬ್ಬರಲ್ಲಿ ಒಬ್ಬರು ಹೋಗಬೇಕು ಎಂದೇ ಹೇಳುತ್ತಿದ್ದರು. ಈ ವಾರ ನಂದಿನಿ ಹೋಗಿರುವುದಕ್ಕೆ ಸಾನ್ಯಾ ಈ ವಿಚಾರ ತೆಗೆದಿದ್ದಾಳೆ. ಮನೆಯವರೆಲ್ಲರು ಜಶು, ನಂದಿನಿಯನ್ನು ಸಪರೇಟ್ ಆಗಿ ನೋಡುವುದಕ್ಕೆ ಕಾತುರದಿಂದ ಕಾಯುತ್ತಾ ಇದ್ದರು ಸರ್ ಎಂದಿದ್ದಾಳೆ. ಅದಕ್ಕೆ ಸುದೀಪ್ ನೀವೂ ಮನೆಯ ಸದಸ್ಯರೇ ಎಂದಿದ್ದಾರೆ.

  ಜಶ್ವಂತ್ ಇದನ್ನೇ ಬಯಸಿದ್ದನಾ?

  ಜಶ್ವಂತ್ ಇದನ್ನೇ ಬಯಸಿದ್ದನಾ?

  ಜಶ್ವಂತ್ ಇತ್ತೀಚೆಗೆ ನಂದಿನಿ ಜೊತೆಗಿಂತ ಸಾನ್ಯಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದ. ನಂದಿನಿ ಅದನ್ನು ಹೇಳಿದಾಗ ಒಮ್ಮೊಮ್ಮೆ ಬೇಜಾರು ಆಗುತ್ತಿದ್ದ. ಕೆಲವೊಮ್ಮೆ ನಾನಿನ್ನು ಎಂಟರ್ಟೈನ್ಮೆಂಟ್ ಮಾಡಬೇಕೆನೋ ಅಂತ ಇತ್ತೀಚೆಗೆ ನಂದಿನಿ ಬಳಿ ಕೇಳಿದ್ದ. ನಂದಿನಿಯನ್ನು ಹೊರತಾಗಿಸಿದರೆ ನಾನು ಇನ್ನು ಚೆನ್ನಾಗಿ ಆಡಬಹುದು ಎಂದು ಕೊಳ್ಳುತ್ತಿರುವಾಗಲೇ ನಂದಿನಿ ಔಟ್ ಆಗಿದ್ದಾರೆ. ಹೀಗಾಗಿ ಬೇಸರಕ್ಕಿಂತ ಕಾನ್ಫಿಡೆನ್ಸ್ ಇರಬಹುದು.

  ಇನ್ನು ಮುಂದೆ ನಂದಿನಿ ಮಿಸ್ ಮಾಡಿಕೊಳ್ಳುತ್ತಾನೆ

  ಇನ್ನು ಮುಂದೆ ನಂದಿನಿ ಮಿಸ್ ಮಾಡಿಕೊಳ್ಳುತ್ತಾನೆ

  ಒಬ್ಬರ ಬೆಲೆ ಇದ್ದಾಗ ಗೊತ್ತಾಗಲ್ಲ ಎಂಬ ಮಾತಿದೆ. ಅದರಂತೆ ನಂದಿನಿ ಜೊತೆಗಿದ್ದು ತೋರಿಸುತ್ತಿದ್ದ ಪ್ರೀತಿಯನ್ನು ಜಶ್ವಂತ್ ಇನ್ನು ಮುಂದೆ ನಂದಿನಿಯನ್ನು ಮಿಸ್ ಮಾಡಿಕೊಳ್ಳುತ್ತಾನೆ. ಸಾನ್ಯಾ ಹೆಚ್ಚು ಸಮಯ ಜಶ್ವಂತ್ ಜೊತೆ ಇರುವುದಕ್ಕೆ ಕಷ್ಟ ಯಾಕೆಂದರೆ ಅಲ್ಲಿ ರೂಪೇಶ್ ಕೂಡ ಇದ್ದಾರೆ. ಇನ್ನು ಬೇರೆಯವರೊಂದಿಗೆ ಜಶ್ವಂತ್ ಅಷ್ಟಾಗಿ ಜಶ್ವಂತ್ ಜೊತೆ ಸೇರಲ್ಲ. ಹೀಗಾಗಿ ನಂದಿನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾನೆ.

  English summary
  Bigg Boss Kannada OTT September 11th Episode Written Update. Here is the details about jashwanth worst performance.
  Sunday, September 11, 2022, 21:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X