For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಹೋಗಿ ಸಾನ್ಯಾ ಶೆಟ್ಟಿ ಆಗಿದ್ಯಾಕೆ..?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯ ಜರ್ನಿ ಮನೆಯಲ್ಲಿರುವ ಸದಸ್ಯರ ಪಾಲಿಗೆ ಮುಕ್ತಾಯವಾಗುತ್ತಿದೆ. ಸದ್ಯ ಮನೆಯಲ್ಲಿರುವುದು ಸೋಮಣ್ಣ, ಆರ್ಯವರ್ಧನ್, ರೂಪೇಶ್, ಸಾನ್ಯಾ, ರಾಖಿ, ಸೋನು, ಜಶ್ವಂತ್, ಜಯಶ್ರೀ ಮಾತ್ರ. ಈ ಎಂಟು ಜನರ ಪೈಕಿ ಟಿವಿ ಸೀಸನ್ ಗೆ ಕಾಲಿಡುವುದು ನಾಲ್ವರು ಮಾತ್ರ. ಆ ನಾಲ್ವರು ಯಾರು ಎಂಬುದನ್ನು ಇನ್ನು ಗುರುತಿಸಲು ಸ್ವಲ್ಪ ಗೊಂದಲದ ವಾತಾವರಣವೇ ಇದೆ. ಅದನ್ನ ಪಕ್ಕಕ್ಕಿಟ್ಟು ಯೋಚನೆ ಮಾಡಿದಾಗ, ಮನೆ ಸದಸ್ಯರಲ್ಲಿ ಕೆಲವು ಮಂದಿ ತುಂಬಾನೆ ಮಿಸ್ ಮಾಡಿಕೊಳ್ಳುತ್ತಿರುವ ಫೀಲ್ ಮಾಡುತ್ತಿದ್ದಾರೆ.

  ಬಿಗ್​ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್​: ಫಿನಾಲೆ ಟೈಮ್​ನಲ್ಲಿ ಲೋಕಿ ರೀ ಎಂಟ್ರಿಬಿಗ್​ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್​: ಫಿನಾಲೆ ಟೈಮ್​ನಲ್ಲಿ ಲೋಕಿ ರೀ ಎಂಟ್ರಿ

  ಅದರಲ್ಲೂ ರೂಪೇಶ್ ಇತ್ತೀಚೆಗೆ ಸಾನ್ಯಾಳ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾನೆ. ಅವಳಿಗಾಗಿ ಚೆಂದದ ಮಾತುಗಳನ್ನು ಹೇಳುತ್ತಿದ್ದಾನೆ. ಮುಂಚೆಯಿಂದಾನು ಇಬ್ಬರು ಫ್ರೆಂಡ್ಸ್ ಆಗಿಯೇ ಇದ್ದರು, ಆದರೆ ಇಷ್ಟರ ಮಟ್ಟಿಗೆ ರೂಪಿ ಅಟ್ಯಾಚ್ಡ್ ಅನ್ನಿಸುತ್ತಾ ಇರಲಿಲ್ಲ. ಮೇ ಬೀ ಬಿಗ್ ಬಾಸ್ ಕೂಡ ನಿಮ್ಮ ಸಮಯ ಮುಗಿಯುತ್ತಿದೆ ಎಂದು ಪದೇ ಪದೇ ನೆನಪು ಮಾಡುತ್ತಿರುವುದು, ಮನೆ ಮಂದಿಗೆ ಎಲ್ಲೋ ಒಂದು ಕಡೆ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದೀವೇನೊ ಎನಿಸುವುದಕ್ಕೆ ಶುರುವಾಗಿದೆ.

  ಮನೆ ಮಂದಿ ಮುಖದಲ್ಲೇನಿದು ವ್ಯತ್ಯಾಸ?

  ಮನೆ ಮಂದಿ ಮುಖದಲ್ಲೇನಿದು ವ್ಯತ್ಯಾಸ?

  ದಿನ ಇನ್ನು ಹೆಚ್ಚಾಗಿ ಇದೆ ಎಂದಾಗ ಮನೆ ಮಂದಿಗೆ, ಹೊರಗಿನ ಪ್ರಪಂಚವನ್ನು ಅದ್ಯಾವಾಗ ನೋಡುತ್ತೀವೋ, ನೋಡಿದವರನ್ನೇ ನೋಡಿ ನೋಡಿ, ಇವರ ಬಳಿ ಜಗಳವಾಡಿ ಸಾಕಾಗಿದೆ ಎಂದೆಲ್ಲಾ ಎನಿಸಿದೆ. ಆದರೆ ಬಿಗ್ ಬಾಸ್ ನಿಮ್ಮ ಪಯಣ ಅಂತ್ಯವಾಗುತ್ತಿದೆ ಎಂದಾಗ, ಮನೆ ಮಂದಿ ಮನಸ್ಸಲ್ಲಿ ಅಕ್ಷರಶಃ ನೋವು, ಬೇಸರ ಕಾಡಿದೆ. ಇನ್ನು ಉಳಿದಿರುವುದು ಇಷ್ಟೇ ದಿನಾನಾ? ಮತ್ತೆ ಈ ರೀತಿ ದಿನಗಳು ಸಿಗುವುದಿಲ್ಲ ಎಂದುಕೊಂಡು ನೋವು ತೋಡಿಕೊಂಡಿದ್ದಾರೆ. ಇಷ್ಟು ದಿನ ಎಲ್ಲಿಯೇ ಓಡಾಡಿದ್ದರು. ಅದು ತಮ್ಮದೇ ಮನೆ ಆಗಿರುತ್ತಿತ್ತು. ಆದರೆ ಈಗ ಆ ಜಾಗವನ್ನೆಲ್ಲಾ ಒಮ್ಮೆ ಸ್ಪರ್ಶಿಸಿ ನೋಡಬೇಕು ಎನಿಸುತ್ತಿದೆ. ಓಡಾಡಿದ ಜಾಗದಲ್ಲಿ ಮತ್ತೆ ಮತ್ತೆ ಓಡಾಡಿ. ಆ ಭಾವನೆಯ ತೊಳಲಾಟವನ್ನು ಮನೆ ಮಂದಿ ಫೀಲ್ ಮಾಡುತ್ತಿದ್ದಾರೆ.

  ಮಂಗಳೂರಿನಲ್ಲಿ ಮೀಟ್ ಮಾಡುತ್ತಾರಾ?

  ಮಂಗಳೂರಿನಲ್ಲಿ ಮೀಟ್ ಮಾಡುತ್ತಾರಾ?

  ಸಾನ್ಯಾ ಮತ್ತು ರೂಪೇಶ್ ಮೊದಲೇ ಹೇಳಿದಂತೆ ಮೊದಲಿನಿಂದಲೂ ಕ್ಲೋಸ್. ಆದ್ರೆ ಅದು ಯಾವ ರೀತಿ ಇತ್ತು ಎಂದರೆ ರೂಪೇಶ್, ಸಾನ್ಯಾ, ನಂದಿನಿ, ಜಶ್ವಂತ್ ನಾಲ್ಕು ಜನ ಯಾವಾಗಲೂ ಒಟ್ಟೊಟ್ಟಿಗೆ ಇರುತ್ತಿದ್ದರು. ಜೊತೆಗೆ ರೂಪೇಶ್ ಆಗಾಗ ಎಲ್ಲರ ಜೊತೆಗೆ ಬೆರೆಯುತ್ತಿದ್ದ. ಅಷ್ಟೇ ಅಲ್ಲ ಸಾನ್ಯಾ ಎಂದರೆ ಅವನ ಮನಸ್ಸಲ್ಲಿ ಬೆಸ್ಟ್ ಫ್ರೆಂಡ್ ಅನ್ನೋದು ಇತ್ತು, ಫಸ್ಟ್ ಫ್ರಿಫರೆನ್ಸ್ ಸಿಗುತ್ತಿತ್ತು. ಆದರೆ ಕಳೆದ ಈ ಮೂರು ದಿನದಿಂದ ತುಂಬಾನೇ ಹಚ್ಚಿಕೊಂಡಿದ್ದಾನೆ. ಸಾನ್ಯಾ ಕೂಡ ನಿನ್ನ ಮಂಗಳೂರಿನಲ್ಲಿ ಭೇಟಿ ಮಾಡುವುದು ಸಪ್ರೈಸ್ ಆಗಿನೇ ಎಂದಿದ್ದಾಳೆ. ಅದಕ್ಕೆ ರೂಪೇಶ್ ಕೂಡ ನಿನ್ನ ಎಲ್ಲಾ ಕಡೆ ಸುತ್ತಾಡಿಸಿ, ನಾನೇ ಬೆಂಗಳೂರಿಗೆ ಬಿಟ್ಟು ಬರುತ್ತೀನಿ ಎಂದಿದ್ದಾನೆ.

  ಅಯ್ಯರ್ ಹೋಗಿ ಶೆಟ್ಟಿ ಆಗಿದ್ದು ಯಾವಾಗ

  ಅಯ್ಯರ್ ಹೋಗಿ ಶೆಟ್ಟಿ ಆಗಿದ್ದು ಯಾವಾಗ

  ನಿನ್ನೆ ರಾತ್ರಿ ಇದು ಕಡೆಯ ದಿನ ಎಂಬ ಫೀಲ್‌ನಲ್ಲಿಯೇ ಇದ್ದ ರೂಪೇಶ್ ಅಂಡ್ ಸಾನ್ಯಾ ಬೇಗ ಮಲಗಿಯೇ ಇಲ್ಲ. ಹೆಚ್ಚು ಸಮಯವಾದರೂ ಇಬ್ಬರು ಮಾತನಾಡಿಕೊಂಡೇ ಕುಳಿತಿದ್ದರು. ಅದು ಇಂದಿನ ಓಟಿಟಿ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಕೇಳಿದ್ದಾರೆ. ನಿಮಗೆ ನಿದ್ದೆ ಬಂತಾ ಎಂದಾಗ ಕಡೆಯಲ್ಲಿ ಮಲಗಿದ್ದು ನಾನು ರೂಪಿ. ಸಾನ್ಯಾ ಶೆಟ್ಟಿ ಅಂತ ಬಂತು ಸರ್ ಅದು ನನಗೆ ತುಂಬಾನೇ ಇಷ್ಟ ಆಗೋಯ್ತು ಅಂತ ಸಾನ್ಯಾ ಹೇಳಿದಾಗ, ಸುದೀಪ್ ರೂಪೇಶ್ ಬಳಿ ಕೇಳಿದ್ದಾರೆ, ರೂಪೇಶ್ ಶೆಟ್ರೆ ಏನಿದು ಸಮಾಚಾರ ಅಂದ್ರೆ ಅವತ್ತು ಸ್ವಲ್ಪ ಮೋಡ ಕವಿದ ವಾತಾವರಣ ಇತ್ತು ಸರ್ ಅದಕ್ಕೆ ಎಂದಿದ್ದಾರೆ.

  ಸಾನ್ಯಾ ಕಾಲೆಳೆದ ಕಿಚ್ಚ

  ಸಾನ್ಯಾ ಕಾಲೆಳೆದ ಕಿಚ್ಚ

  ಮೊದಲೆಲ್ಲಾ ರೂಪೇಶ್ ರೂಪೇಶ್ ಎನ್ನುತ್ತಿದ್ದ ಸಾನ್ಯಾ ಇದೀಗ ರೂಪಿ ಎನ್ನುವುದಕ್ಕೆ ಆರಂಭಿಸಿದ್ದಾಳೆ. ಇವತ್ತಿನ ಓಟಿಟಿ ಫಿನಾಲೆಯಲ್ಲಿ ಕಿಚ್ಚನ ಮುಂದೆ ರೂಪಿ ಎಂದಿದ್ದಾಳೆ. ಆಗ ಸುದೀಪ್ ಓ ರೂಪೇಶ್ ಇದ್ದದ್ದು ಈಗ ರೂಪಿ ಆಗೋಯ್ತಾ ಎಂದು ಕಾಲೆಳೆದಿದ್ದಾರೆ. ಇನ್ನು ರೂಪೇಶ್ ಕೂಡ ಈ ವಿಚಾರದಲ್ಲಿ ಬದಲಾಗಿದ್ದಾನೆ. ಸಾನ್ಯಾಳನ್ನು ಸಾನ್ ಸಾನ್ ಅಂತಾನೇ ಕರೆಯೋದು.

  English summary
  Bigg Boss Kannada OTT September 16th Episode Written Update. Here is the details about Ott finale episode.
  Friday, September 16, 2022, 18:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X