twitter
    For Quick Alerts
    ALLOW NOTIFICATIONS  
    For Daily Alerts

    Bigg Boss Kannada OTT: ಬಿಗ್ ಬಾಸಸ್ ಮನೆಯ ಕಟ್ಟ ಕಡೆಯ ಕ್ಯಾಪ್ಟನ್ ರೂಪೇಶ್ ಶೆಟ್ಟಿ!

    |

    ಬಿಗ್ ಬಾಸ್ ಸ್ಪರ್ಧಿಗಳು ಒಟಿಟಿಯ ಕಾರ್ಯಕ್ರಮದ ಮೂರು ವಾರಗಳು ಈಗಾಗಲೇ ಮುಗಿದಿವೆ. ಇನ್ನುಳೀದ ಮೂರು ವಾರಗಳಲ್ಲಿ ಯಾರು ಜನರ ಮನ ಗೆಲ್ಲುತ್ತರೆ, ಯಾರು ಬಿಗ್ ಬಾಸ್ ಮುಖ್ಯ ಸೀಸನ್‌ಗೆ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಹೆಚ್ಚುತ್ತಿದೆ.

    ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್‌ ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಮನೆಯಲ್ಲಿ 3 ಎಲಿಮಿನೆಷನ್ ಮತ್ತು ಮನೆಯ 3ನೇ ಕ್ಯಾಪ್ಟೆನ್ ಗಳನ್ನು ಸ್ಪರ್ಧಿಗಳು ನೋಡಿದ್ದಾರೆ.

    ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಪ್ರತಿ ಸ್ಪರ್ಧಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಈ ಓಟಿಟಿ ಸೀಸನ್ ಚಿಕ್ಕ ಸೀಸನ್ ಆಗಿರುವ ಕಾರಣ, ಕೇಲವ 4 ಜನರಿಗೆ ಮಾತ್ರವೇ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿದೆ. ಈಗ ಮನೆಯ ಕೊನೆಯ ಕ್ಯಾಪ್ಟನ್ ಆಯ್ಕೆ ಮುಗಿದು ಬಿಟ್ಟಿದೆ.

    ರೂಪೇಶ್ ಶೆಟ್ಟಿ 4 ನೇ ಕ್ಯಾಪ್ಟನ್!

    ರೂಪೇಶ್ ಶೆಟ್ಟಿ 4 ನೇ ಕ್ಯಾಪ್ಟನ್!

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಕೂಡ ಎಲಿಮಿನೇಷನ್ ಕಡ್ಡಾಯ. ಅದರ ಜೊತೆಗೆ, ಪ್ರತಿ ವಾರವೂ ಮನೆಗೆ ಹೊಸ ಕ್ಯಾಪ್ಟನ್ ನೇಮಕವಾಗುತ್ತಾರೆ. ಪ್ರತಿವಾರವೂ ಪ್ರತಿಸ್ಪರ್ಧಿಗಳು ಕೂಡ ತಾವು ಮನೆಯ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ ಎಲ್ಲರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಗುವುದಿಲ್ಲ. ಅದರಲ್ಲೂ ಈ ಬಾರಿಯ ಓಟಿಟಿ ಯಾವತ್ತು ಸೀಸನ್ ಕಡಿಮೆ ಅವಧಿಯ ಸೀಸನ್ ಆಗಿರುವ ಕಾರಣ, ಕೇವಲ ನಾಲ್ಕು ಮಂದಿಗೆ ಮಾತ್ರ ಕ್ಯಾಪ್ಟನ್ ಹಾಕುವ ಅವಕಾಶ ದೊರಕಿದೆ. ಈಗ ಮನೆಯ ಕಟ್ಟಕಡೆಯ ಮತ್ತು 4ನೇ ಕ್ಯಾಪ್ಟನ್ ಆಗಿ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

    ಸೋನು, ರೂಪೇಶ್, ರಾಕೇಶ್‌ಗೆ ಟಾಸ್ಕ್!

    ಸೋನು, ರೂಪೇಶ್, ರಾಕೇಶ್‌ಗೆ ಟಾಸ್ಕ್!

    ಮನೆಯಲ್ಲಿ ಎರಡು ತಂಡಗಳನ್ನಾಗಿ ವಿಂಗಡಿಸಿ, ಎರಡು ತಂಡಗಳಿಗೂ ಟಾಸ್ಕ್‌ಗಳನ್ನು ನೀಡಲಾಗಿತ್ತು. ಬಿಗ್ ಬಾಸ್ ಕೊಡುವ ಟಾಸ್ಕ್‌ಗಳಲ್ಲಿ ಹೆಚ್ಚು ಅಂಕ ಪಡೆದು ಗೆದ್ದ ತಂಡದವರಿಗೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಆದರೆ ತಂಡದ ಐದು ಮಂದಿಯ ಪೈಕಿ ಮೂವರು ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾಗವಹಿಸಬೇಕಾಗಿತ್ತು. ಹಾಗಾಗಿ ಜಯಶ್ರೀ ಮತ್ತು ಚೈತ್ರಾ ಟಾಸ್ಕ್ ನಿಂದ ದೂರಸರಿದರು. ರೂಪೇಶ್ ಶೆಟ್ಟಿ, ಸೋನು ಮತ್ತು ರಾಕೇಶ್ ಬಾರಿಯ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾಗವಹಿಸಿದ್ದರು.

    ಚೆಂಡು ಉರುಳಿಸೋ ಆಟ!

    ಚೆಂಡು ಉರುಳಿಸೋ ಆಟ!

    ಈ ಬಾರಿಯ ಕ್ಯಾಪ್ಟನ್ಸಿ ಟಾಸ್ಕ್ ಬಹಳ ವಿಭಿನ್ನವಾಗಿತ್ತು. ಈ ಆಟಕ್ಕೆ ಏಕಾಗ್ರತೆ ಬಹಳ ಮುಖ್ಯವಾಗಿತ್ತು. ಕೈಯಲ್ಲಿ ದಾರವನ್ನು ಎಳೆದು ಹಿಡಿದುಕೊಂಡು, ಅದರ ಮೇಲೆ ಚಂಡನ್ನು ಉರುಳಿಸಿ ಹಗ್ಗದ ಕೆಳಗೆ ಇಟ್ಟಿರುವ ಗ್ಲಾಸ್‌ಗಳಿಗೆ ಚೆಂಡನ್ನ ಹಾಕಬೇಕಿತ್ತು. ಮೂವರಿಗೂ ವಿಭಿನ್ನ ಬಣ್ಣದ ಚೆಂಡುಗಳನ್ನು ಕೊಡಲಾಗಿತ್ತು. ಜೊತೆಗೆ ಮೂರು ಗ್ಲಾಸ್‌ಗಳಿಗೆ ತಲಾ ಒಂದೊಂದು ಚೆಂಡನ್ನು ಹಾಕಬೇಕಿತ್ತು. ಈ ಟಾಸ್ಕ್‌ನಲ್ಲಿ ಸೋನುಗೌಡ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಭಾಗವಹಿಸಿದ್ದರು.

    ಗೆದ್ದ ರೂಪೇಶ್ ಶೆಟ್ಟಿ!

    ಗೆದ್ದ ರೂಪೇಶ್ ಶೆಟ್ಟಿ!

    ಆಟದ ಆರಂಭದಲ್ಲಿ ಕೊಂಚ ಸಮಯ ತೆಗೆದುಕೊಂಡರೂ ಕೂಡ ಚೆಂಡುಗಳನ್ನು ವೇಗವಾಗಿ ಗ್ಲಾಸ್‌ಗೆ ಹಾಕಿದ್ದು ರೂಪೇಶ್ ಶೆಟ್ಟಿ. ಹಾಗಾಗಿ ರೂಪೇಶ್ ಶೆಟ್ಟಿ ಈ ಟಾಸ್ಕ್‌ನಲ್ಲಿ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ವಿಶೇಷ ಎಂದರೆ ರೂಪೇಶ್ ಶೆಟ್ಟಿ ಮನೆಯ ನಾಲ್ಕನೇ ಕ್ಯಾಪ್ಟನ್ ಎನ್ನುವುದರ ಜೊತೆಗೆ ಮನೆಯ ಕೊನೆಯ ಕ್ಯಾಪ್ಟನ್ ಕೂಡ ಹೌದು. ಮುಂದಿನವಾರ ಫಿನಾಲೆ ಇರುವ ಕಾರಣಕ್ಕೆ. ಈವಾರ ಕ್ಯಾಪ್ಟನ್ ಆದವರನ್ನು ನಾಮಿನೇಟ್ ಮಾಡುವಂತಿಲ್ಲ. ಹಾಗಾಗಿ ನೇರವಾಗಿ ರೂಪೇಶ್ ಶೆಟ್ಟಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದುಕೊಂಡಿರುವ ಮೊದಲ ಸ್ಪರ್ಧಿಯಾಗಿದ್ದಾರೆ.

    English summary
    Bigg Boss Kannada OTT September 1st Episode Written Update, Roopesh Shetty Become The Last Captain, Know More
    Friday, September 2, 2022, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X