ಬಿಗ್‌ಬಾಸ್ ಮನೆಯಲ್ಲೊಂದು ತ್ರಿಕೋನ ಪ್ರೇಮಕತೆ! ರಾಕೇಶ್ ಯಾರ ಪಾಲು?

ಬಿಗ್‌ಬಾಸ್ ಮನೆಯಲ್ಲಿ ಪ್ರೇಮಕತೆಗಳು ತೀರಾ ಮಾಮೂಲು. ಪ್ರತಿ ಬಿಗ್‌ಬಾಸ್ ಶೋನಲ್ಲೂ ಒಂದಲ್ಲಾ ಒಂದು ಪ್ರೇಮಕತೆಗಳು ಹುಟ್ಟಿಕೊಳ್ಳುತ್ತವೆ, ಮುರಿದು ಬೀಳುತ್ತವೆ.

ಈ ಬಾರಿ ಈಗಾಗಲೇ ಒಂದು ಜೋಡಿಯನ್ನು ಬಿಗ್‌ಬಾಸ್ ಮನೆಯ ಒಳಗೆ ತಂದಿದ್ದಾರೆ ಆಯೋಜಕರು. ಆದರೆ ಅದರ ಹೊರತಾಗಿ ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದು ಪ್ರೇಮಕತೆ ನಡೆಯುತ್ತಿದೆ. ಆದರೆ ಇದು ತ್ರಿಕೋನ ಪ್ರೇಮಕತೆ ಎಂಬುದು ವಿಶೇಷ.

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ನಟ ರಾಕೇಶ್ ಅಡಿಗ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಅವರು ಹಾಗೂ ಸ್ಪೂರ್ತಿ ಗೌಡ ನಡುವೆ ಏನೋ ನಡೆಯುತ್ತಿದೆ ಎಂದು ಈಗಾಗಲೇ ಹಲವರಿಗೆ ಅನುಮಾನ ಬಂದಿತ್ತು. ಅಂತೆಯೇ ಸ್ಪೂರ್ತಿ ಸಹ ತಮಗೆ ರಾಕೇಶ್ ಎಂದರೆ ಇಷ್ಟವೆಂದು, ನಮ್ಮಿಬ್ಬರ ಜಾತಕ ಹೊಂದಾಣಿಕೆ ಆಗುತ್ತಾ ಎಂದು ಗುರೂಜಿ ಬಳಿ ಸಹ ಕೇಳಿದ್ದರು. ಆದರೆ ಈಗ ರಾಕೇಶ್ ಮೇಲೆ ಇನ್ನೊಬ್ಬ ಯುವತಿಯ ಕಣ್ಣು ಬಿದ್ದಿದೆ ಅದುವೇ ಸೋನು ಗೌಡ.

ರಾಕೇಶ್ ಅನ್ನು ಪ್ರೀತಿಸುತ್ತಿರುವ ಸೋನು ಗೌಡ

ರಾಕೇಶ್ ಅನ್ನು ಪ್ರೀತಿಸುತ್ತಿರುವ ಸೋನು ಗೌಡ

ಸೋನು ಗೌಡ ಇದೀಗ ರಾಕೇಶ್‌ಗೆ ಮನಸೋತಿದ್ದಾರೆ. ಈ ವಿಷಯವನ್ನು ಅವರೇ ಬಿಗ್‌ಬಾಸ್ ಮನೆಯಲ್ಲಿ ಕೆಲವರೊಟ್ಟಿಗೆ ಹೇಳಿಕೊಂಡಿದ್ದಾರೆ. ರೂಪೇಶ್‌ ಜೊತೆ ಮಾತನಾಡುವಾಗ, ''ಅವಳು ರಾಕೇಶ್‌ ಜೊತೆ ಅಂಟಿಕೊಂಡು ಕೂತಿದ್ದಳು. ಅದಕ್ಕೆ ನಾನು ಹೇಳಿದೆ ಹೇ ಯಾಕೆ ಅವನೊಟ್ಟಿಗೆ ಹಾಗೆ ಕೂರುತ್ತೀಯ ಅವನು ನನ್ನ ಹುಡುಗ ಎಂದು ಹೇಳಿದೆ ಎಂದು ಹೇಳುತ್ತಾರೆ. ಅದಕ್ಕೆ ರೂಪೇಶ್, ನೀನು ಗಂಭೀರವಾಗಿದ್ದೀಯ? ಎಂದು ಕೇಳುತ್ತಾರೆ. ಹೌದು ನಾನು ಸೀರಿಯಸ್ ಆಗಿಯೇ ಹೇಳಿದೆ. ನನಗೆ ನನ್ನ ಹುಡುಗನ ಜೊತೆ ಬೇರೆಯವರು ಸಲುಗೆಯಿಂದ ಇರೋದು ಇಷ್ಟವಿಲ್ಲ ಎನ್ನುತ್ತಾರೆ ಸೋನು.

ಸೋನು ಗೌಡಗೆ ಉರಿಸುತ್ತಿರುವ ರಾಕೇಶ್

ಸೋನು ಗೌಡಗೆ ಉರಿಸುತ್ತಿರುವ ರಾಕೇಶ್

ರೂಪೇಶ್ ಶೆಟ್ಟಿ ಬಳಿ ಮಾತ್ರವೇ ಅಲ್ಲದೆ ಸ್ಪೂರ್ತಿ ಬಳಿಯೂ ರಾಕೇಶ್ ಬಗ್ಗೆ ಹೇಳಿಕೊಳ್ಳುತ್ತಾರೆ. ಜಯಶ್ರೀ ಬಳಿಯೂ ರಾಕೇಶ್ ಬಗ್ಗೆ ಹೇಳಿಕೊಂಡಿದ್ದಾರೆ ಸೋನು ಗೌಡ. ಆದರೆ ರಾಕೇಶ್ ಗಂಭೀರವಾಗಿಲ್ಲ, ನಾನು ಎಲ್ಲರೊಟ್ಟಿಗೆ ಫ್ಲರ್ಟ್ ಮಾಡಿಕೊಂಡು ಇರುತ್ತೀನಿ ಎಂದು ಹೇಳುತ್ತಾನೆ ಏನು ಮಾಡುವುದು ಎಂದು ಅಳಲು ಸಹ ತೋಡಿಕೊಂಡಿದ್ದಾರೆ ಸೋನು ಗೌಡ. ಆದರೆ ರಾಕೇಶ್ ಮಾತ್ರ ಸೋನು ಗೌಡಗೆ ಹೊಟ್ಟೆ ಕಿಚ್ಚು ತರಿಸುವ ಕಾರ್ಯ ಮಾಡುತ್ತಿದ್ದಾರೆ. ಬೇಕೆಂದೇ ಸ್ಪೂರ್ತಿ ಕೈಲಿಂದು ತುತ್ತು ತಿನ್ನಿಸಿಕೊಳ್ಳುವುದು. ಸೋನು ನೋಡಲೆಂದು, ಸ್ಪೂರ್ತಿ ಹಾಗೂ ಅಕ್ಷತಾ ಹೆಗಲ ಮೇಲೆ ಒಟ್ಟಿಗೆ ಕೈ ಹಾಕಿಕೊಂಡು ಆಕೆಯ ಮುಂದೆಯೇ ಓಡಾಡುವುದು ಮಾಡಿದ್ದಾರೆ.

ರಾಕೇಶ್ ಬಳಿ ಪ್ರೀತಿ ಹೇಳಿಕೊಂಡ ಸೋನು ಗೌಡ

ರಾಕೇಶ್ ಬಳಿ ಪ್ರೀತಿ ಹೇಳಿಕೊಂಡ ಸೋನು ಗೌಡ

ಕೊನೆಗೆ ನೇರವಾಗಿ ರಾಕೇಶ್ ಬಳಿಯೇ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಹೇಳಿಕೊಳ್ಳುತ್ತಾರೆ. ಆದರೆ ರಾಕೇಶ್ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಿಜವಾಗಿಯೂ ನನ್ನ ಬಗ್ಗೆ ಫೀಲಿಂಗ್ಸ್ ಇದೆಯಾ ಅಥವಾ ಸುಮ್ಮನೆ ತಮಾಷೆಗೆ ಹೇಳುತ್ತಿದ್ದೀಯ? ಎಂದು ರಾಕೇಶ್ ಪ್ರಶ್ನಿಸಿದಾಗ ನಾನು ಸೀರಿಯಸ್ಸಾಗಿದ್ದೀನಿ ಎನ್ನುತ್ತಾರೆ ಸೋನು ಗೌಡ. ಹಾಗಿದ್ದರೆ ಇನ್ನು ಮುಂದೆ ನಿನ್ನ ಬಗ್ಗೆ ತಮಾಷೆ ಮಾಡುವುದಿಲ್ಲ ಎನ್ನುತ್ತಾರೆ ರಾಕೇಶ್. ಆದರೆ ಸೋನು ಗೌಡಗೆ ಮಾತ್ರ ಸೂಕ್ತವಾದ ಉತ್ತರವನ್ನು ರಾಕೇಶ್ ನೀಡಿಲ್ಲ. ಈಗ ಸ್ಪೂರ್ತಿ ಗೌಡ ಅಥವಾ ಸೋನು ಗೌಡ ಇಬ್ಬರಲ್ಲಿ ಯಾರ ತೆಕ್ಕೆಗೆ ರಾಕೇಶ್ ಬೀಳುತ್ತಾರೊ ಕಾದು ನೋಡಬೇಕಿದೆ.

ರಾಕೇಶ್ ಅತ್ಯುತ್ತಮ ಫರ್ಮಾಮರ್

ರಾಕೇಶ್ ಅತ್ಯುತ್ತಮ ಫರ್ಮಾಮರ್

ಈ ನಡುವೆ ರಾಕೇಶ್‌ಗೆ ಈ ವಾರದ ಅತ್ಯುತ್ತಮ ಫರ್ಮಾಮರ್ ಪ್ರಶಸ್ತಿ ಸಹ ಲಭಿಸಿದೆ. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಕಿರಣ್, ಶ್ರೀದೇವಿ ಆರಾಧ್ಯ ಸೇರಿದಂತೆ ಇನ್ನೂ ಕೆಲವರು ಸೇರಿ ರಾಕೇಶ್ ಅನ್ನು ಒಳ್ಳೆಯ ಫರ್ಮಾಮರ್ ಎಂದಿದ್ದಾರೆ. ಈ ವಾರದ ಕಳಪೆ ಆಟಗಾರ್ತಿ ಪಟ್ಟ ಅಕ್ಷತಾಗೆ ದೊರಕಿದೆ. ಆಟವೊಂದರಲ್ಲಿ ನೀರಿಗೆ ಸೋಪು ಹಾಗೂ ಕ್ರೀಂ ಮಿಕ್ಸ್ ಮಾಡಿ ಆಟಗಾರರ ಮೇಲೆ ಎಸದಿದ್ದಕ್ಕೆ ಅಕ್ಷತಾಗೆ ಕಳಪೆ ಪಟ್ಟವನ್ನು ಹೆಚ್ಚು ಮಂದಿ ನೀಡಿದ್ದಾರೆ.

More from Filmibeat

English summary
Bigg Boss Kannada OTT: Sonu Gowda and Spoorthi Gowda both loving Rakesh Adiga. Sonu Gowda expressed her feelings to Rakesh but he did not react.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X