For Quick Alerts
  ALLOW NOTIFICATIONS  
  For Daily Alerts

  Bigg Boss Kannada 9 Day 13 : ಟಾಸ್ಕಿನ ನಡುವೆ ಕುಸ್ತಿ ಪಟ್ಟು!

  |

  ಬಿಗ್‌ಬಾಸ್ ಕನ್ನಡ ಸೀಸನ್ 09ರ ಹದಿಮೂರನೇ ದಿನ ಮನೆಯಲ್ಲಿ ವಿಜಯದಶಮಿ ಆರಿಸಲಾಯಿತು. ಹಬ್ಬದ ದಿನವೆಂದು ಮನೆಯ ಸದಸ್ಯರಿಗೆ ಬಿಗ್‌ಬಾಸ್ ಬಿಡುವು ನೀಡಿರಲಿಲ್ಲ, ಟಾಸ್ಕ್‌ ಖಡ್ಡಾಯವಾಗಿತ್ತು. ಆದರೆ ಟಾಸ್ಕ್‌ ಜೊತೆಗೆ ಮನೆಯ ಸದಸ್ಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು.

  ಹನ್ನೆರಡನೇ ದಿನ ಕಾರಿನ ಟೈಯರ್ ಬಿಚ್ಚುವ ಟಾಸ್ಕ್‌ನಲ್ಲಿ ಹೀನಾಯವಾಗಿ ತಂಡವನ್ನು ಸೋಲಿಸಿದ ಪ್ರಶಾಂತ್ ಆ ದಿನ ತಡರಾತ್ರಿ ದೀಪಿಕಾ ಹಾಗೂ ತಂಡಕ್ಕೆ ಕ್ಷಮೆ ಕೇಳಿದರು. ಮಾತ್ರವಲ್ಲ ಗೂರೂಜಿ ಬಳಿ ಮಾತನಾಡುತ್ತಾ ಭಾವುಕರಾಗಿಬಿಟ್ಟರು.

  ಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರುಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರು

  ಮಾರನೇಯ ದಿನ ಅಂದರೆ ಹದಿಮೂರನೇ ದಿನ, ಮನೆಯ ಸದಸ್ಯರೆಲ್ಲರಿಗೂ ವಿಶೇಷ ಬಟ್ಟೆ ಕಳಿಸಲಾಯಿತು. ನವಾಜ್‌ಗೆ ತುಸು ಹೆಚ್ಚು ಬಟ್ಟೆ ಬಂದಿದ್ದವು. ಅದನ್ನು ನೋಡಿದ ನವಾಜ್‌, ನಾನು ಕೇವಲ ಎರಡು ಜೀನ್ಸ್ ಪ್ಯಾಂಟು, ನಾಲ್ಕು ಶರ್ಟ್‌ನಲ್ಲಿ ಜೀವನ ಕಳೆಯುತ್ತಿದ್ದೆ. ಇಂದು ನನಗಾಗಿ ಇಷ್ಟೋಂದು ವಿವಿಧ ಬಟ್ಟೆಗಳು ಬಂದಿವೆ. ಯಾರು ನನಗಾಗಿ ಬಟ್ಟೆ ಕಳಿಸಿದ್ದೀರೊ ಅವರಿಗೆ ಧನ್ಯವಾದ ಎಂದು ಕೈಮುಗಿದರು ನವಾಜ್. ಅರುಣ್ ಸಾಗರ್, ಸಾನ್ಯಾ ಹಾಗೂ ಇತರರು ನವಾಜ್‌ರ ಏಳಿಗೆಗೆ ಶಹಭಾಷ್ ಹೇಳಿದರು.

  ಟಾಸ್ಕ್‌ನಲ್ಲಿ ಮತ್ತೆ ಗೆದ್ದ ಅನುಪಮಾ ತಂಡ

  ಟಾಸ್ಕ್‌ನಲ್ಲಿ ಮತ್ತೆ ಗೆದ್ದ ಅನುಪಮಾ ತಂಡ

  ಆ ನಂತರ ಎಲ್ಲರೂ ಸೇರಿ ಮನೆಯಲ್ಲಿ ದೇವರ ಅಲಂಕಾರ ಮಾಡಿ ಪೂಜೆ ಮಾಡಿದರು. ಬಳಿಕ ಎಂದಿನಂತೆ ಟಾಸ್ಕ್‌ಗಳು ಆರಂಭವಾದವು. ಕಾಲುಗಳನ್ನು ಬಳಸಿ ಇಬ್ಬರು ವೃತ್ತಾಕಾರದ ಹಲಗೆಯನ್ನು ಹಿಡಿದುಕೊಳ್ಳುವ ಕಠಿಣವಾದ ಟಾಸ್ಕ್‌ ಅನ್ನು ನೀಡಲಾಗಿತ್ತು. ಅನುಪಮಾ ತಂಡದಿಂದ ಸಾನ್ಯಾ ಹಾಗೂ ದಿವ್ಯಾ ಉರುಡುಗ ಹಾಗೂ ದೀಪಿಕಾ ತಂಡದಿಂದ ಸ್ವತಃ ದೀಪಿಕಾ ಹಾಗೂ ರೂಪೇಶ್ ಶೆಟ್ಟಿ ಭಾಗವಹಿಸಿದ್ದರು. ನಾಲ್ಕು ಜನ ಅದ್ಭುತವಾಗಿ ಆಟ ಆಡಿದರು. ಸುಮಾರು ನಾಲ್ಕು ಗಂಟೆಗಳ ವರೆಗೆ ಹಲಗೆಯನ್ನು ಹಿಡಿದುಕೊಂಡಿದ್ದರು. ಆದರೆ ಕೊನೆಗೆ ಗೆದ್ದಿದ್ದು ಸಾನ್ಯಾ ಐಯ್ಯರ್ ಹಾಗೂ ದಿವ್ಯಾ ಉರುಡುಗ.

  ವಿಶೇಷ ಮನೊರಂಜನಾ ಕಾರ್ಯಕ್ರಮ

  ವಿಶೇಷ ಮನೊರಂಜನಾ ಕಾರ್ಯಕ್ರಮ

  ಆ ನಂತರ, ವಿಜಯದಶಮಿ ಹಬ್ಬದ ಪ್ರಯುಕ್ತ ಬಿಗ್‌ಬಾಸ್, ಮನೆಯ ಸದಸ್ಯರಿಗಾಗಿ ವಿಶೇಷ ಮನೊರಂಜನಾ ಕಾರ್ಯಕ್ರಮ ಆಯೋಜಿಸಿದ್ದರು. ಮನೆಯ ಒಳಗೆ ಮರಳಿನಿಂದ ಕುಸ್ತಿ ಅಖಾಡ ನಿರ್ಮಿಸಿ, ಇಬ್ಬರು ಬಲಾಡ್ಯ ಕುಸ್ತಿಪಟುಗಳನ್ನು ಮನೆಯ ಒಳಗೆ ಕಳಿಸಿದರು. ಮೊದಲಿಗೆ ಒಬ್ಬ ವ್ಯಕ್ತಿ, ಕುಸ್ತಿ ಪಟುವನ್ನು ಅಖಾಡದಿಂದ ಹೊರಗೆ ಹಾಕಬೇಕು, ಎರಡು ನಿಮಿಷದಲ್ಲಿ ಅವ ವಿಫಲವಾದರೆ ಮುಂದಿನ ಎರಡು ನಿಮಿಷಕ್ಕೆ ಆತನೊಟ್ಟಿಗೆ ಇನ್ನೊಬ್ಬ ಸೇರಬಹುದು, ಅವರಿಬ್ಬರೂ ವಿಫಲರಾದರೆ, ಅವರೊಟ್ಟಿಗೆ ಇನ್ನಿಬ್ಬರು ಸೇರಬಹುದು ಹೀಗೆ ಸಂಖ್ಯೆ ಹೆಚ್ಚಾಗುತ್ತದೆ. ಎಷ್ಟು ಬಾರಿ ಕುಸ್ತಿ ಪಟುಗಳನ್ನು ಹೊರಗೆ ಹಾಕುತ್ತಾರೊ ಅಷ್ಟು ಸಿಹಿ ತಿನಿಸಿದ ಡಬ್ಬಿಗಳು ಮನೆಯ ಸದಸ್ಯರಿಗೆ ಧಕ್ಕುತ್ತವೆ.

  ಕುಸ್ತಿ ಪಟುಗಳ ಹೊರಹಾಕಿದ ಪುರುಷರ ತಂಡ

  ಕುಸ್ತಿ ಪಟುಗಳ ಹೊರಹಾಕಿದ ಪುರುಷರ ತಂಡ

  ಮೊದಲಿಗೆ ನವಾಜ್, ಆ ಬಳಿಕ ನವಾಜ್ ಹಾಗೂ ಆರ್ಯವರ್ಧನ್ ಆ ಬಳಿಕ ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ರೂಪೇಶ್ ಶೆಟ್ಟಿ ಎಲ್ಲರೂ ಸೇರಿದರು ಕುಸ್ತಿ ಪಟುಗಳನ್ನು ಹೊರಗೆ ಹಾಕಲಾಗಲಿಲ್ಲ. ಆ ಬಳಿಕ ಮನೆಯ ಮಹಿಳಾ ಮಣಿಗಳು ಸಹ ಪ್ರಯತ್ನಿಸಿದಾಗಲೂ ಸಾಧ್ಯವಾಗಲಿಲ್ಲ. ಕೊನೆಗೆ ಮನೆಯ ಪುರುಷರೆಲ್ಲ ಸೇರಿ ಒಂದು ತಂಡ ಮಾಡಿಕೊಂಡು ಇಬ್ಬರು ಕುಸ್ತಿ ಪಟುಗಳನ್ನು ಹೊರಗೆ ಹಾಕಿದರು. ಹೀಗೆ ಎರಡು ಬಾರಿ ಮಾಡಿ ಕೆಲವು ಸಿಹಿ ತಿನಿಸುಗಳ ಡಬ್ಬಿಯನ್ನು ತಮಗೆ ಉಳಿಸಿಕೊಂಡರು. ಅಂತಿಮವಾಗಿ ಇಬ್ಬರು ಕುಸ್ತಿ ಪಟುಗಳೊಂದಿಗೆ ಮನೆಯ ಸದಸ್ಯರು ಫೋಸ್ ನೀಡಿದರು.

  ಆರ್ಯವರ್ಧನ್‌ಗೆ ಫೂಲ್ ಮಾಡಿದ ರಾಕೇಶ್

  ಆರ್ಯವರ್ಧನ್‌ಗೆ ಫೂಲ್ ಮಾಡಿದ ರಾಕೇಶ್

  ಆ ಬಳಿಕ ರಾಕೇಶ್ ಅಡಿಗ, ಅನುಪಮಾ, ವಿನೋದ್ ಗೊಬ್ರಗಾಲ ಹಾಗೂ ಇತರ ಕೆಲವು ಸದಸ್ಯರು ಸೇರಿಕೊಂಡು ಗುರೂಜಿ ಮೇಲೆ ಪ್ರ್ಯಾಂಕ್ ಮಾಡಿದರು. ಕ್ಯಾಪ್ಟನ್ ಆಗುವ ಆಸೆಯಲ್ಲಿರುವ ಗುರೂಜಿಗೆ ಫೂಲ್ ಮಾಡಲು ಕ್ಯಾಪ್ಟನ್ಸಿ ಟಾಸ್ಕ್‌ಗೆ ಮತ ಚಲಾಯಿಸುವಂತೆ ಬಿಗ್‌ಬಾಸ್ ಹೇಳಿದ್ದಾರೆ ಎಂದು ಹೇಳಿ, ಗೆದ್ದ ಅನುಪಮಾ ತಂಡದ ಎಲ್ಲರೂ ಗುರೂಜಿ ಬಿಟ್ಟು ಇನ್ನು ಇತರ ಮೂವರಿಗೆ ಮತ ಚಲಾಯಿಸಿದರು. ಕೊನೆಯಲ್ಲಿ ಮತ ಚಲಾಯಿಸಲು ಬಂದ ಗುರೂಜಿ ನನಗೆ ಒಬ್ಬರೂ ಮತ ಚಲಾಯಿಸುವುದಿಲ್ಲ ಹಾಗಾಗಿ ನಾನು ಮತ ಚಲಾಯಿಸುವುದಿಲ್ಲ ಎಂದರು. ತುಸು ಕೋಪದಿಂದಲೇ ತಮ್ಮ ತಂಡದ ಸದಸ್ಯರ ವಿರುದ್ಧ ಮಾತನಾಡಿದರು. ಆ ನಂತರ ಎಲ್ಲರೂ ಜೋರಾಗಿ ನಕ್ಕು ಇದು ಜೋಕ್ ಎಂದು ಹೇಳಿದರು. ಆಗ ಗುರೂಜಿ ಸಮಾಧಾನವಾದರು.

  English summary
  Bigg Boss Kannada Season 09 Written Update: Bigg Boss house members celebrate Vijayadashami
  Friday, October 7, 2022, 9:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X