Bigboss-Jio Cinema: ಜಿಯೋ ಸಿನಿಮಾದಲ್ಲೂ ಸಿಗುತ್ತೆ ಬಿಗ್ ಬಾಸ್.. 24 ಗಂಟೆ ಮನರಂಜನೆ.. ಪ್ರತಿದಿನವೂ ಬಹುಮಾನ!
ಬಿಗ್ ಬಾಸ್ ಯಾವಾಗ ಶುರುವಾಗುತ್ತದೆ ಎಂಬುದನ್ನು ಜನ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷವೂ ವಿಭಿನ್ನ ರೀತಿಯ ಜನರನ್ನು ಬಿಗ್ ಬಾಸ್ ಮೂಲಕ ನೋಡುತ್ತೇವೆ. ಹೀಗಾಗಿಯೇ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಬರಬಹುದು ಎಂಬ ಕುತೂಹಲ ಮನೆ ಮಾಡಿದೆ.
ಈಗಾಗಲೇ ಬಿಗ್ ಬಾಸ್ ಪ್ರಸಾರವಾಗುವ ದಿನಾಂಕವೂ ಗೊತ್ತಾಗಿದೆ. ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆರಂಭಕ್ಕೆ ಡೇಟ್ ಲಾಕ್ ಆಗಿದೆ. ಬಿಗ್ ಬಾಸ್‌ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸುದ್ದಿಗೋಷ್ಟಿಯೂ ನಡೆದಿದ್ದು, ವಿಶೇಷತೆಗಳನ್ನೆಲ್ಲಾ ಹೇಳಿ ಆಗಿದೆ. ಕುತೂಹಲವಿರುವುದು ಕಂಟೆಸ್ಟೆಂಟ್‌ಗಳ ಬಗ್ಗೆ.

ಜಿಯೋ ಸಿನಿಮಾದಲ್ಲೂ ಬಿಗ್ ಬಾಸ್
ಬಿಗ್ ಬಾಸ್ ಅಂದರೇನೆ ಒಂದು ತಿಂಗಳ ಫುಲ್ ಮೀಲ್ಸ್ ಮನರಂಜನೆ. ಈ ಮನರಂಜನೆಗಾಗಿ ಜನ ಕಾಯುತ್ತಾ ಇದ್ದಾರೆ. ಒಂಭತ್ತು ಸೀಸಸ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಹತ್ತನೇ ಸೀಸಸ್‌ಗೂ ವೇದಿಕೆ ಅದ್ಧೂರಿಯಾಗಿ ಸಿದ್ಧವಾಗಿದೆ. ಕಳೆದ ಬಾರಿ ಹೊಸ ಪ್ರಯೋಗವೆಂಬಂತೆ ಒಟಿಟಿಯಲ್ಲಿಯೂ ಆರಂಭವಾಗಿತ್ತು. ಈ ಬಾರಿಯೂ ಒಟಿಟಿಯಲ್ಲಿ ಬರಬಹುದು ಎಂಬ ಊಹೆ ಮಾಡಲಾಗಿತ್ತು. ಆದರೆ, ನೇರವಾಗಿ ಈಗ ಟಿವಿಯಲ್ಲಿಯೇ ಬರಲಿದೆ. ಟಿವಿಯಲ್ಲಿ ನೋಡುವುದಕ್ಕೆ ಆಗಲಿಲ್ಲ ಎಂದವರಿಗೆ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಸಿಗಲಿದೆ.
ಯಾವುದನ್ನು ಮರೆಮಾಚಲ್ಲ ಬಿಗ್ ಬಾಸ್
ಬಿಗ್ ಬಾಸ್ ನಾವೂ ನೋಡುತ್ತಾ ಇದ್ದದ್ದು ಬೆಳಗ್ಗೆಯಿಂದ ರಾತ್ರಿ ತನಕ ನಡೆದಂತ ಶೋ ದೃಶ್ಯವನ್ನು ಒಂದೂವರೆ ಗಂಟೆಯಲ್ಲಿ ತೋರಿಸುತ್ತಾರೆ. ಬಹಳ ಮುಖ್ಯ ಎನಿಸುವ ವಿಚಾರವನ್ನಷ್ಟೇ ಎಡಿಟಿಂಗ್ ಮಾಡಿರುತ್ತಾರೆ. ಆದರೆ, ಈ ಬಾರಿ ದಿನದ 24 ಸ್ಪರ್ಧಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಜಿಯೋ ಸಿನಿಮಾದಲ್ಲಿ ಇದರ ಕಂಪ್ಲೀಟ್ ಲೈವ್ ಬಿಡಲಾಗುತ್ತಿದೆ. ಹೀಗಾಗಿ ಬಿಗ್‌ಬಾಸ್‌ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್‌ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.
ಪ್ರತಿ ದಿನ ಸಿಗುತ್ತೆ ಗಿಫ್ಟ್
ಬಿಗ್ ಬಾಸ್ ಎಂದರೆ ಸಂಪೂರ್ಣ ಮನರಂಜನೆ ಇದಾಗಿರಲಿದೆ. ಇದರ ಜೊತೆಗೆ ಒಳ್ಳೆ ಉಡುಗೊರೆಗಳು ಸಿಗುತ್ತವೆ ಎಂದರೆ ಸುಮ್ಮನೇನಾ? ಈ ಬಾರಿ ನೋಡುಗರಿಗೆ ಉಡುಗೊರೆಗಳನ್ನು ನೀಡುವುದಕ್ಕೆ ಬಿಗ್ ಬಾಸ್ ನಿರ್ಧಾರ ಮಾಡಿದೆ. ಟಿವಿಯಲ್ಲಿ ನಡೆಯುವ ಬಿಗ್ ಬಾಸ್ ಶೋ ನೋಡಿ, ಜಿಯೋ ಸಿನಿಮಾದಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಿಗೆ ಸೂಪರ್ ಬಹುಮಾನಗಳು ಇರಲಿವೆ. ಅದರಲ್ಲೂ ಪ್ರತಿ ದಿನ ಕೂಡ ಬಹುಮಾನ ಸಿಗಲಿದೆ.
ಟಿವಿಯಲ್ಲಿ ಪ್ರಸಾರವಾಗುವುದು ಎಷ್ಟೊತ್ತಿಗೆ?
ಬಿಗ್ ಬಾಸ್ ಅಕ್ಟೋಬರ್ 8 ರಿಂದ ಶುರುವಾಗುತ್ತಿದೆ. ಅಂದು ಸಂಜೆ 6.30 ರಿಂದ ಆರಂಭವಾಗುತ್ತದೆ. ಅದ್ದೂರಿಯಾಗಿ ಆರಂಭವಾಗುವ ಬಿಗ್ ಬಾಸ್ ರಿಯಾಲಿಟಿ ಶೋ, ಅಂದು ಕಂಟೆಸ್ಟೆಂಟ್ ಯಾರೆಲ್ಲಾ ಇದ್ದಾರೆ ಎಂಬ ವಿಚಾರವನ್ನು ಅನಾವರಣ ಮಾಡುತ್ತಾರೆ. ಮರು ದಿನದಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಬೆಳಗ್ಗೆಯಿಂದ ನಡೆದ ಘಟನಾವಳಿಗಳನ್ನೆಲ್ಲಾ ಒಟ್ಟುಗೂಡಿಸಿ, ಒಂದೂವರೆ ಗಂಟೆಗೆ ತಂದು ನಿಲ್ಲಿಸುತ್ತಾರೆ. ಮಿಸ್ ಆದ ದೃಶ್ಯಗಳು ಅಥವಾ ಮನೆಯಲ್ಲಿ ನೋಡುವುದಕ್ಕೆ ಬಿಡುತ್ತಿಲ್ಲ ಎಂಬ ದೃಶ್ಯಗಳನ್ನೆಲ್ಲಾ ನೇರವಾಗಿ ಜಿಯೋ ಸಿನಿಮಾದಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ 'ವಾಚ್ ಅಂಡ್ ಎನ್', 'ಮೀಮ್ ದ ಮೂಮೆಂಟ್', ' ಹೈಪ್ ಚಾಟ್', 'ವಿಡಿಯೋ ವಿಚಾರ್' ಮೂಲಕ ನೋಡುಗರು ಸಂವಾದ ಕೂಡ ನಡೆಸಬಹುದಾಗಿದೆ.


Click it and Unblock the Notifications











