ಲೈಟ್ ಆಫ್ ಆದ ನಂತರ 'ಬಿಗ್ ಬಾಸ್' ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೋಮ್ಯಾನ್ಸ್...!
ಕೆಲವೊಂದು ಸಾರಿ ಬಿಗ್ ಬಾಸ್ ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಆ ದೊಡ್ಡ ಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆ ಕಾಡುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮೊನ್ನೆಯ ದಿವಸ ಹಿಂದಿ ಬಿಗ್ ಬಾಸ್ ನೋಡುವಾಗ ಅನೇಕರು ಮುಜುಗರಕ್ಕೀಡಾಗಿದ್ದಾರೆ. ಕೆಲವರು ಈಗ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.
ಹೌದು, ಅಸಲಿಗೆ.. ಬಿಗ್‌ಬಾಸ್ ಶೋನ ಪ್ರತಿಯೊಂದು ಸೀಸನ್‌ನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಬಾರಿಯ ಬಿಗ್ ಬಾಸ್ ಕೂಡಾ ಇದರಿಂದ ಹೊರತಾಗಿಲ್ಲ. ಇಬ್ಬರು ಪತ್ನಿಯರ ಮುಂದಿನ ಗಂಡ ಅರ್ಮಾನ್ ಮಲ್ಲಿಕ್ ಎಂಬಾಂತನಂತೂ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಾನೆ. ಇಂಥಾ ಅರ್ಮಾನ್ ಮಲ್ಲಿಕ್ ಮೊನ್ನೆ ತನ್ನ ಎರಡನೇ ಪತ್ನಿ ಕೃತಿಕಾ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿ ಈಗ ಸುದ್ದಿಯಾಗಿದ್ದಾನೆ. ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಅಂದ್ಹಾಗೇ ಬಿಗ್ ಬಾಸ್ ಮನೆ ಕ್ಯಾಮರಾ ಕಣ್ಗಾವಲಿನಲ್ಲಿರುತ್ತೆ. ಬಾತ್ ರೂಮ್‌ವೊಂದನ್ನು ಹೊರತು ಪಡಿಸಿದರೆ ಮನೆಯ ಮೂಲೆ ಮೂಲೆಯಲ್ಲಿ ಕ್ಯಾಮರಾಗಳಿರುತ್ತವೆ. ಮನೆಯೊಳಗೆ ಇರುವ ಅರ್ಮಾನ್ ಮಲ್ಲಿಕ್ ಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಆದರೂ.. ಅರ್ಮಾನ್ ಮಲ್ಲಿಕ ತನ್ನ ಪತ್ನಿಯ ಎದುರು ಪ್ರಣಯದ ಕವಿತೆ ಹಾಡುವ ಪ್ರಯತ್ನ ಮಾಡಿದ್ದಾನೆ.
ಹೀಗಾಗಿಯೇ ಇದೆಲ್ಲವೂ ಟಿ.ಆರ್.ಪಿಯ ಲೆಕ್ಕಾಚಾರ ಎನ್ನುವ ಮಾತು ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಇಲ್ಲದೇ ಸೊರಗುತ್ತಿರುವ ಬಿಗ್ ಬಾಸ್‌ನ ಹೇಗಾದರೂ ಮಾಡಿ ನಂಬರ್ 01 ಪಟ್ಟಕ್ಕೆ ಪ್ರತಿಷ್ಠಾಪಿಸಬೇಕೆಂದು ಮಾಡಲಾಗುತ್ತಿರುವ ಕಸರತ್ತು ಇದು ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಈ ಚಟುವಟಿಕೆಯನ್ನೂ ವೈರಲ್ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಇನ್ನೂ.. ಅರ್ಮಾನ್ ಮಲ್ಲಿಕ್ ಮೊದಲ ಪತ್ನಿ ಪಾಯಲ್ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಎರಡನೇ ಪತ್ನಿ ಕೃತಿಕಾ ಮನೆಯಲ್ಲಿದ್ದಾರೆ. ಹೀಗಾಗಿ ಇದು ಮೊದಲ ಪತ್ನಿ ಪಾಯಲ್ ಮುಜುಗರ ತರಲು ಅರ್ಮಾನ್ ಮಲ್ಲಿಕ್ ಮಾಡಿರುವ ತಂತ್ರ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ.
ಉಳಿದಂತೆ ಮೊನ್ನೆ ಮೊನ್ನೆಯಷ್ಟೇ ಹೈದ್ರಾಬಾದ್ ಮೂಲದ ಯೂಟ್ಯೂಬರ್ ಅರ್ಮಾನ್ ಮಲ್ಲಿಕ್ ಮತ್ತೊಬ್ಬ ಸ್ಫರ್ಧಿ ವಿಶಾಲ್ ಪಾಂಡೆ ಕೆನ್ನೆಗೆ ಚಟೀರ್- ಪಟೀರ್ ಅಂತ ಹೊಡೆದಿದ್ದಕೃತಿಕಾ ಭಾಬಿ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದು ಲವಕೇಶ್ ಕಿವಿಯಲ್ಲಿ ವಿಶಾಲ್ ಪಾಂಡೆ ಪಿಸುಗುಟ್ಟಿದ್ದಕ್ಕೆ ಕೆರಳಿ ಕೆಂಡವಾಗಿದ್ದ ಅರ್ಮಾನ್ ಮಲ್ಲಿಕ್ ಬಿಗ್ ಬಾಸ್ ಮನೆಯಲ್ಲಿ ರಂಪ ಮಾಡಿದ್ದ. ಅವತ್ತು ಮನೆಯ ಬಾಕಿ ಸದಸ್ಯರು ಬಂದು ಜಗಳ ಬಿಡಿಸುವರಷ್ಟರಲ್ಲಿ ಸುಸ್ತಾಗಿ ಹೋಗಿದ್ದರು.
ಹೀಗೆ ಒಂದಿಲ್ಲೊಂದು ಕಾರಣಗಳಿಂದ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ಅರ್ಮಾನ್ ಮಲ್ಲಿಕ್, ಸದ್ಯಕ್ಕೆ.. ತನ್ನ ಪತ್ನಿಯ ಜೊತೆ ಬಿಗ್ ಬಾಸ್ ಮನೆಯಲ್ಲಿ ಪ್ರಣಯದಾಟ ಆಡಲು ಹೋಗಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾನೆ.


Click it and Unblock the Notifications











