ಪತ್ನಿಯ ಬಗ್ಗೆ ಮಾತನಾಡಿದ್ದಕ್ಕೆ ಕೆನ್ನೆಗೆ ಬಾರಿಸಿದ ಇಬ್ಬರು ಹೆಂಡತಿಯರ ಮುದ್ದಿನ ಗಂಡ...!

ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯ ಹಿಂದಿ ಬಿಗ್ ಬಾಸ್‌ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಜನರಿಂದ ತುಂಬಿ ತುಳುಕುತ್ತಿರುವ ಈ ಬಾರಿಯ ಬಿಗ್ ಬಾಸ್‌ ಮನೆಗೆ ಹೈದ್ರಾಬಾದ್ ಮೂಲದ ಯೂಟ್ಯೂಬರ್ ಅರ್ಮಾನ್ ಮಲ್ಲಿಕ್ ತನ್ನ ಇಬ್ಬರು ಹೆಂಡ್ತಿಯರ ಜೊತೆ ಬಿಗ್ ಬಾಸ್ ಮನೆಯನ್ನೂ ಪ್ರವೇಶಿಸಿದ್ದರು. ಸದ್ಯದ ಸಮಾಚಾರ ಏನೆಂದರೆ ಈ ಅರ್ಮಾನ್ ಮಲ್ಲಿಕ್ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದ ಮತ್ತೊಬ್ಬ ಸ್ಫರ್ಧಿ ವಿಶಾಲ್ ಪಾಂಡೆ ಕೆನ್ನೆಗೆ ಚಟೀರ್- ಪಟೀರ್ ಅಂತ ಹೊಡೆದು ಸುದ್ದಿಯಾಗಿದ್ದಾರೆ. ಅನೇಕರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

ಹೌದು, ಅಸಲಿಗೆ.. ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ಹೀಗಿರುವಾಗ ಮೊನ್ನೆ ವಾರಾಂತ್ಯಕ್ಕೆ ಮತ್ತೊಮ್ಮೆ ಅತಿಥಿಯಾಗಿ ಬಂದಿದ್ದ ಅರ್ಮಾನ್ ಮಲ್ಲಿಕ್ ಮೊದಲ ಪತ್ನಿ ಪಾಯಲ್, ಅನಿಲ್ ಕಪೂರ್ ಪಕ್ಕ ನಿಂತು ..ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡಿದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

bigg-boss-ott-3-armaan-malik-confronts-vishal-pandey-over-inappropriate-remarks-about-kritika

ಯಾಕೆಂದರೆ.. ಲವಕೇಶ್ ಕಟಾರಿಯಾ ಜೊತೆ ಮಾತನಾಡುತ್ತಿರುವ ಸಮಯದಲ್ಲಿ ಅರ್ಮಾನ್‌ ಮಲಿಕ್‌ ಪತ್ನಿ ಕೃತಿಕಾ ಅವರ ಬಗ್ಗೆ ವಿಶಾಲ್ ಪಾಂಡೆ ಮಾತನಾಡಿದ್ದಾರೆ. ಕೃತಿಕಾ ಭಾಬಿ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದು ಲವಕೇಶ್ ಕಿವಿಯಲ್ಲಿ ಪಿಸುಗುಟ್ಟಿದ್ದಾರೆ. ಈ ಕಾರಣಕ್ಕೆ ಈ ವಿಚಾರವನ್ನು ಪಾಯಲ್ ಪ್ರಸ್ತಾಪಿಸಿದ್ದಾರೆ.

ಈ ವಿಷ್ಯ ಕಿವಿಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದ ಅರ್ಮಾನ್ ಮಲ್ಲಿಕ್, ಆರಂಭದಲ್ಲಿ ವಿಶಾಲ್ ಪಾಂಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಮೊದಲಿಂದ ಹೀಗೆ ನಾ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಇದಕ್ಕೆ ವಿಶಾಲ್‌ "ನಾನು ಆ ಅರ್ಥದಲ್ಲಿ ಹೇಳಿಲ್ಲ" ಎಂದಿದ್ದಾರೆ. ಇದರಿಂದ ಇನ್ನೂ ಕೆರಳಿದ ಅರ್ಮಾನ್ ಮಲ್ಲಿಕ್, ನೀನೇನು ಹೇಳಲೇ ಇಲ್ಲ, ನೀನು ಏನು ಅರಿಯದ ಮುಗ್ಧ ಎಂದಿದ್ದಾರೆ. ಆ ನಂತರ ಮಾತಿಗೆ ಮಾತು ಬೆಳೆದು ವಿಶಾಲ್ ಪಾಂಡೆ ಅವರ ಕಪಾಳಕ್ಕೆ ಅರ್ಮಾನ್ ಮಲ್ಲಿಕ್ ಬಾರಿಸಿದ್ದಾರೆ. ಈ ಹೊಡೆತಕ್ಕೆ ಪ್ರತಿಯಾಗಿ ನೀನು ನನ್ನ ಮೇಲೆ ಹೇಗೆ ಕೈ ಮಾಡಿದೆ?" ಎಂದು ಹೇಳುತ್ತಾ ವಿಶಾಲ್ ಜಗಳಕ್ಕೀಳಿದಿದ್ದಾರೆ. ಮನೆಯ ಬಾಕಿ ಸದಸ್ಯರು ಬಂದು ಇಬ್ಬರನ್ನು ಹಿಡಿದುಕೊಂಡಿದ್ದಾರೆ.

ಇನ್ನೂ ಇನ್ನೊಂದು ಕಡೆ ಅರ್ಮಾನ್ ಮಲ್ಲಿಕ್ ಎರಡನೇ ಪತ್ನಿ ಕೃತಿಕಾ ಜಿಮ್ ಮಾಡುವ ಸಮಯದಲ್ಲಿ ಕೂಡ ವಿಶಾಲ್ ದಿಟ್ಟಿಸಿ ನೋಡಿದ್ದರು. ಅರ್ಮಾನ್ ಅವರನ್ನು ನೋಡುತ್ತಾ ಅಣ್ಣ ತುಂಬಾನೇ ಅದೃಷ್ಟವಂತ ಎಂದು ಹೇಳಿದ್ದರು. ಆದರೆ ಈ ವಿಚಾರವನ್ನ ಅರ್ಮಾನ್ ಮೊದಲ ಪತ್ನಿ ಪಾಯಲ್ ಬಹಿರಂಗಗೊಳಿಸಿಲ್ಲ ಅನ್ನುವುದು ಸಮಾಧಾನದ ಸಂಗತಿ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ನಡೆದ ಈ ಹೊಡೆದಾಟದ ಬಗ್ಗೆ ಬಾಲಿವುಡ್‌ನಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಬಿಗ್ ಬಾಸ್ ಸ್ಫರ್ಧಿಗಳು ಕೂಡ ಈ ಘಟನೆಯನ್ನೂ ಖಂಡಿಸಿದ್ದಾರೆ. ಅರ್ಮಾನ್ ಮಲ್ಲಿಕ್ ಅವರನ್ನು ಕಾರ್ಯಕ್ರಮದಿಂದ ಕಿತ್ತೋಗೆಯಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ಧಾರೆ. ಇನ್ನೂ.. ಅರ್ಮಾನ್ ಅವರಿಂದ ಹೊಡೆಸಿಕೊಂಡ ವಿಶಾಳ್ ಅವರ ತಂದೆ - ತಾಯಿ ಕೂಡ ಅರ್ಮಾನ್‌ ಅವರನ್ನು ಕಾರ್ಯಕ್ರಮ ತೆಗೆದುಹಾಕಬೇಕೆಂದು ಆಯೋಜಕರಲ್ಲಿ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ. ಬಿಗ್ ಬಾಸ್ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕಬೇಕು" ಎಂದು ವಿಶಾಲ್‌ ಸಹೋದರಿ ನೇಹಾ ಪಾಂಡೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X