Bigg Boss OTT: "ಅದು ಟಾಸ್ಕ್ ಅಷ್ಟೆ.. ಲಿಪ್‌ಲಾಕ್ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ": ಆಕಾಂಕ್ಷಾ ಪುರಿ

ಬಿಗ್‌ಬಾಸ್ ಹಿಂದಿ ಓಟಿಟಿ ಸೀಸನ್‌-2 ಇತ್ತೀಚೆಗೆ ಒಂದು ವಿವಾದ ಹುಟ್ಟುಹಾಕಿತ್ತು. ಬಿಗ್‌ಬಾಸ್ ಸ್ಪರ್ಧಿಗಳಾದ ನಟಿ ಆಕಾಂಕ್ಷಾ ಪುರಿ ಹಾಗೂ ಮಾಡೆಲ್, ನಟ ಜದ್ ಹದೀದ್ ಬಿಗ್‌ಬಾಸ್ ಮನೆಯಲ್ಲೇ ಲಿಪ್‌ಲಾಕ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ರಾದ್ಧಾಂತವಾಗಿತ್ತು. ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಗ್ಗೆ ಸಲ್ಮಾನ್ ಖಾನ್ ಗರಂ ಆಗಿದ್ದರು. ವೀಕ್ಷಕರಲ್ಲಿ ಕ್ಷಮೆ ಕೇಳಿದ್ದರು.

ಇಷ್ಟೆಲ್ಲಾ ರಾದ್ಧಾಂತದ ಕಳಪೆ ಪ್ರದರ್ಶನದ ಕಾರಣಕ್ಕೆ ಬಳಿಕ ಆಕಾಂಕ್ಷಾ ಪುರಿ ಕಳೆದ ವಾರ ಎಲಿಮಿನೇಟ್ ಆಗಿದ್ದರು. ಇದೀಗ ಬಿಗ್‌ಬಾಸ್ ಮನೆಯಿಂದ ಹೊರಬಂದ ಆಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಲಿಪ್‌ಲಾಕ್ ಎಪಿಸೋಡ್ ಬಗ್ಗೆ ಮೌನ ಮುರಿದಿದ್ದಾರೆ. ಆ ಕ್ಷಣ ನನ್ನ ಮನಸ್ಸಿನಲ್ಲಿ ಟಾಸ್ಕ್ ಬಿಟ್ಟರೆ ಬೇರೆ ಯಾವುದೇ ಆಲೋಚನೆ ಇರಲಿಲ್ಲ ಎಂದಿದ್ದಾರೆ. ತುಟಿಗೆ ತುಟಿ ಬೆರೆಸಿದ ಜದ್ ಹದೀದ್ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

Bigg boss Ott: Akanksha Puri opened up about Liplock with Jad Hadid

ಬಿಗ್‌ಬಾಸ್ ಮನೆಯಲ್ಲಿ ಅಷ್ಟು ಕ್ಯಾಮರಾಗಳ ಎದುರು ಇಬ್ಬರು ಅರ್ಧ ನಿಮಿಷ ತುಟಿಗೆ ತುಟಿ ಸೇರಿಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ನೆಟ್ಟಿಗರಂತೂ ನಟಿ ಆಕಾಂಕ್ಷಾ ಪುರಿಯನ್ನು ಕೊಂಚ ಹೆಚ್ಚೇ ಟ್ರೋಲ್ ಮಾಡಿದರು. 'ವೀಕೆಂಡ್ ಕಾ ವಾರ್' ಎಪಿಸೋಡ್‌ನಲ್ಲಿ ತಮ್ಮ ನಡೆಯನ್ನು ಆಕೆ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಸಲ್ಮಾನ್ ಖಾನ್ ಇಬ್ಬರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.

ನಾನು ಟಾಸ್ಕ್ ಎಂದು ಪರಿಗಣಿಸಿದೆ

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಆಕಾಂಕ್ಷಾ ಪುರಿ "ಟಾಸ್ಕ್‌ ಭಾಗವಾಗಿ ನಾನು ಜದ್‌ಗೆ ಮುತ್ತುಕೊಟ್ಟಿದ್ದೆ. ಶೋನಲ್ಲಿ ನಾವು ಟಾಸ್ಕ್‌ ಪೂರ್ಣಗೊಳಿಸುವುದು ಮುಖ್ಯವಾಗಿತ್ತು. ಅದನ್ನು ಟಾಸ್ಕ್ ಎಂದೇ ಪರಿಗಣಿಸಿದೆ. ಇದರಲ್ಲಿ ನನ್ನ ತಪ್ಪೇನು ಇಲ್ಲ. ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಆ ಜಾಗದಲ್ಲಿ ಜದ್ ಅಲ್ಲದೇ ಬೇರೆ ಯಾರೇ ಇದ್ದಿದ್ದರೂ ನಾನು ಮುತ್ತುಕೊಡುತ್ತಿದ್ದೆ" ಎಂದು ಆಕಾಂಕ್ಷಾ ಹೇಳಿದ್ದಾರೆ.

Bigg boss Ott: Akanksha Puri opened up about Liplock with Jad Hadid

ವಿವಾದ ಆಗುತ್ತೆ ಅಂದುಕೊಂಡಿರಲಿಲ್ಲ

"ಜದ್‌ಗೆ ಮುತ್ತು ಕೊಡುವಾಗ ನನ್ನ ಮನಸ್ಸಿನಲ್ಲಿ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಅದೇ ರೀತಿ ಲಿಪ್‌ಲಾಕ್ ಮಾಡೋದು ಇಷ್ಟು ದೊಡ್ಡ ವಿವಾದ ಸೃಷ್ಟಿಸುತ್ತದೆ ಎಂದುಕೊಂಡಿರಲಿಲ್ಲ. ವೈಯಕ್ತಿಕವಾಗಿ ಜದ್‌ಗೆ ಮುತ್ತು ಕೊಡಬೇಕು ಎನ್ನುವ ಉದ್ದೇಶ ಖಂಡಿತ ನನಗೆ ಇರಲಿಲ್ಲ. ಅದು ಟಾಸ್ಕ್ ಭಾಗವಾಗಿ ನಡೆದು ಹೋಯಿತು" ಎಂದು ಆಕೆ ಹೇಳಿದ್ದಾರೆ. ಇನ್ನು ಲಿಪ್‌ಲಾಕ್ ವಿಚಾರದ ಕಾರಣಕ್ಕೆ ಈ ವಾರ ಜದ್ ಕೂಡ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

ಬ್ಯಾಡ್ ಕಿಸ್ಸರ್ ಎಂದಿದ್ದಕ್ಕೆ ಬೇಸರ

"ಜದ್ ಈ ಕಿಸ್ಸಿಂಗ್ ಟಾಸ್ಕ್‌ ಅನ್ನು ಬಗಳ ವೈಯಕ್ತಿಕವಾಗಿ ತೆಗೆದುಕೊಂಡಿದ್ದು ನನಗೆ ಬೇಸರ ತಂದಿದೆ. ನಾವು 30 ಸೆಕೆಂಡ್ ತುಟಿಗೆ ತುಟಿ ತಾಗಿಸಿದ್ದರು ನಾವು ಗೆಲ್ಲುತ್ತಿದ್ದೆವು. ಆದರೆ ಆತ ಅದರಲ್ಲಿ ಇನ್‌ವಾಲ್ವ್ ಆಗಿಬಿಟ್ಟಿದ್ದ. ಇನ್ನು ಆ ಘಟನೆ ಬಳಿಕ ಆಕಾಂಕ್ಷಾ, ಬ್ಯಾಡ್ ಕಿಸ್ಸರ್ ಎಂದು ಜದ್ ಹೇಳಿದ್ದರು. ಈ ಬಗ್ಗೆ ಕೂಡ ಆಕಾಂಕ್ಷಾ ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜದ್ ಸುಳ್ಳುಗಾರ, ಮೂರ್ಖ

"ನಾನು ನನ್ನನ್ನು ಹಾಗೂ ನನ್ನ ತುಟಿ ಮೂಮೆಂಟ್ ಅನ್ನು ಕಂಟ್ರೋಲ್ ಮಾಡಿದ್ದೆ. ಅದಕ್ಕೆ ಆತ ಬ್ಯಾಡ್ ಕಿಸ್ಸರ್ ಎಂದು ಕರೆದಿದ್ದಾನೆ. ಆದರೆ ಆತ ಅದು ಬರೀ ಟಾಸ್ಕ್ ಎನ್ನುವುದನ್ನು ಮರೆತುಬಿಟ್ಟಿದ್ದಾನೆ. ನನಗೆ ಅದರಲ್ಲಿ ತೊಡಗಿಸಿಕೊಳ್ಳಲು ಇಷ್ಟವಿರಲಿಲ್ಲ. ನನಗೆ ಆ ಸಮಯದಲ್ಲಿ ಯಾವುದೇ ಭಾವನೆ ಇರಲಿಲ್ಲ. ಪೂಜಾ ಮೇಡಂ ನನ್ನ ಪರ ನಿಂತಿದ್ದಕ್ಕೆ ನನಗೆ ಖುಷಿ ಆಯಿತು. ಆ ನಂತರ ಕೂಡ ಆತ ಆ ಬಗ್ಗೆ ಮಾತನಾಡುತ್ತಿದ್ದ. ಮುಂದೆ ಮತ್ತೆ ಇಂತಹ ಅವಕಾಶ ಸಿಗುತ್ತದೆ ಎಂದುಕೊಂಡಿದ್ದ. ಆ ಇಡೀ ಪ್ರಸಂಗವನ್ನು ಆತ ಬೇರೆ ರೀತಿಯಲ್ಲಿ ತೆಗೆದುಕೊಂಡಿದ್ದ. ಆತ ಸುಳ್ಳುಗಾರ ಮತ್ತು ದಡ್ಡ" ಎಂದಿದ್ದಾರೆ.

More from Filmibeat

English summary
Bigg boss Ott: Akanksha Puri opened up about Liplock with Jad Hadid. Akanksha said she doesn't regret kissing him. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X